ಕೊರೋನಾ ಎಫೆಕ್ಟ್: SSLC ಪರೀಕ್ಷೆ ಮುಂದೂಡಿಕೆ

By Suvarna News  |  First Published Mar 22, 2020, 8:41 AM IST

SSLC ಪರೀಕ್ಷೆ ಮುಂದೂಡಿಕೆ| ಕೊರೋನಾ ತಡೆಗೆ ಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ರಾಜ್ಯ ಸರ್ಕಾರ|ಮಾ.27ರಿಂದ SSLC ಆರಂಭವಾಗಬೇಕಿತ್ತು| ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮಹತ್ಚದ ನಿರ್ಧಾರ ತೆಗೆದುಕೊಂಡ ರಾಜ್ಯ ಸರ್ಕಾರ| 


ಬೆಂಗಳೂರು[ಮಾ.22]: ಮಹಾಮಾರಿ ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಕ್ಕಳ ಸುರಕ್ಷತೆಯಿಂದ ರಾಜ್ಯ ಸರ್ಕಾರ SSLC ಪರೀಕ್ಷೆಯನ್ನ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್.  ಯಡಿಯೂರಪ್ಪ ಹೇಳಿದ್ದಾರೆ. 

"

Tap to resize

Latest Videos

ಇಂದು[ಭಾನುವಾರ] ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಸೊಂಕು ತಡೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿದೆ. ಈ ನಿಒಟ್ಟಿನಲ್ಲಿ SSLC ಪರೀಕ್ಷೆ ಕೂಡ ಮೂಂದೂಡಿದ್ದೇವೆ ಎಂದು ಹೇಳಿದ್ದಾರೆ. 

SSLC ಪರೀಕ್ಷೆಯಲ್ಲಿ ಬದಲಾವಣೆ ಇಲ್ಲ; ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಸೂಚನೆ

ಇದರ ಜೊತೆಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ ಕರ್ನಾಟಕದ ಎಲ್ಲ ಗಡಿಗಳು ಬಂದ್ ಮಾಡಲು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಈ ಹಂತದಲ್ಲಿ SSLC ಪರೀಕ್ಷೆ  ಬೇಡ ಎಂದು ತಜ್ಞರು ಹೇಳಿದ್ದರು. ತಜ್ಞರ ಸಲಹೆಯನ್ನು ಸುವರ್ಣ ನ್ಯೂಸ್ ಸರ್ಕಾರಕ್ಕೆ ಗಮನಕ್ಕೆ ತಂದಿತ್ತು.  

ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರಕ್ಕೆ ಇನ್ಸುಲಿನ್‌ ಒಯ್ಯಬಹುದು!

ಇದೇ ತಿಂಗಳು ಮಾ.27ರಿಂದ SSLC ಆರಂಭವಾಗಬೇಕಿತ್ತು. ಆದರೆ, ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮಕ್ಕಳ ಸುರಕ್ಷತಾ ದೃಷ್ಠಿಯಿಂದ ರಾಜ್ಯ ಸರ್ಕಾರ ಮಹತ್ಚದ ನಿರ್ಧಾರ ತೆಗೆದುಕೊಂಡಿದೆ. ಶನಿವಾರ ಒಂದೇ ದಿನ ರಾಜ್ಯದಲ್ಲಿ ನಾಲ್ಕು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಕೊರೋನಾ ಒಬ್ಬರು ಬಲಿಯಾಗಿದ್ದಾರೆ. 

click me!