ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಕಬ್ಬನ್ ಪಾರ್ಕ್‌ಗೆ ಮುಂದಿನ ಆದೇಶದವರೆಗೂ ನಿರ್ಬಂಧಿಸಿರುವುದಾಗಿ ತೋಟಗಾರಿಕೆ ಇಲಾಖೆ ತಿಳಿಸಿದೆ.
ಬೆಂಗಳೂರು(ಮಾ.22): ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಕಬ್ಬನ್ ಪಾರ್ಕ್‌ಗೆ ಮುಂದಿನ ಆದೇಶದವರೆಗೂ ನಿರ್ಬಂಧಿಸಿರುವುದಾಗಿ ತೋಟಗಾರಿಕೆ ಇಲಾಖೆ ತಿಳಿಸಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಕಬ್ಬನ್ ಪಾರ್ಕ್ಗೆ ಬರುವ ವಾಯು ವಿಹಾರಿಗಳು, ಸಾರ್ವಜನಿಕರು ಮತ್ತು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಶನಿವಾರ ಬೆಳಗ್ಗೆಯಿಂದ ಎಲ್ಲ ದ್ವಾರಗಳು ಮುಚ್ಚಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಕುಸುಮಾ ತಿಳಿಸಿದರು.
ಸಕ್ಕರೆ ಪ್ರಸಾದ ಸ್ವೀಕರಿಸಿದವರು ಕ್ವಾರಂಟೈನ್!
ಕಬ್ಬನ್ ಪಾರ್ಕ್ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಜೊತೆಗೆ ಕಬ್ಬನ್ ಉದ್ಯಾನದ ಮೂಲಕ ಹಲವು ವಾಹನಗಳು ಹಾದುಹೋಗಲಿವೆ. ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಬ್ರಹ್ಮ ರಥೋತ್ಸವ ರದ್ದು:
ಪುರಾಣ ಪ್ರಸಿದ್ದವಾದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾ.28ರಿಂದ ಏ.10ರವರೆಗೂ ಹಮ್ಮಿಕೊಂಡಿದ್ದ ಬ್ರಹ್ಮ ರಥೋತ್ಸವವನ್ನು ರದ್ದುಗೊಳಿಸಲಾಗಿದೆ. ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಸಭೆ, ಸಮಾರಂಭ, ಜಾತ್ರಾ ಮಹೋತ್ಸವ ನಡೆಸಬಾರದೆಂಬ ಸರ್ಕಾರದ ಆದೇಶದ ಅನ್ವಯ ರಥೋತ್ಸವ ರದ್ದುಪಡಿಸಿರುವುದಾಗಿ ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.