VHP-ಬಜರಂಗದಳ ಸುದ್ದಿಗೋಷ್ಠಿ: ಹಿಂದೂ ಯುವಕರಿಗೆ ಸ್ವಾಮೀಜಿ ಖಡಕ್ ವಾರ್ನಿಂಗ್

Published : Oct 28, 2020, 05:51 PM ISTUpdated : Oct 28, 2020, 10:55 PM IST
VHP-ಬಜರಂಗದಳ ಸುದ್ದಿಗೋಷ್ಠಿ: ಹಿಂದೂ ಯುವಕರಿಗೆ ಸ್ವಾಮೀಜಿ ಖಡಕ್ ವಾರ್ನಿಂಗ್

ಸಾರಾಂಶ

ಹಿಂದೂ ಯುವಕರಿಗೆ ಖಡಕ್ ವಾರ್ನಿಂಗ್ | ಕರಾವಳಿಯಲ್ಲಿ ಮತ್ತೊಬ್ಬ ಡಾನ್ ಬೇಡ | 

ಮಂಗಳೂರು(ಅ.28): ಹಿಂದೂ ಯುವಕರು ಪರಿವರ್ತನೆ ಆಗದೇ ಇದ್ದರೆ ಸಂಘಟನೆಯಿಂದ ದೂರ ಇಡುವುದಾಗಿ ಶ್ರೀರಾಜಶೇಖರಾನಂದ ಸ್ವಾಮೀಜಿ ಯುವ ಸಮೂಹಕ್ಕೆ ಎಚ್ಚರಿಸಿದ್ದಾರೆ.

VHP-ಬಜರಂಗದಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿಂದೂ ಯುವಕರಿಗೆ ಶ್ರೀರಾಜಶೇಖರಾನಂದ ಸ್ವಾಮೀಜಿ ವಾರ್ನಿಂಗ್ ಕೊಟ್ಟಿದ್ದಾರೆ. ಕರಾವಳಿ ಭಾಗದಲ್ಲಿ ಹಿಂದೂ ಯುವಕರ ಹತ್ಯೆ ಮತ್ತು ಹಿಂದೂ ಯುವಕರಿಂದಲೇ ಅಪರಾಧಿ ಕೃತ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶ್ರೀರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ವಿಎಚ್ ಪಿ-ಬಜರಂಗದಳ ಸುದ್ದಿಗೋಷ್ಠಿ ನಡೆದಿದೆ.

ಡ್ರಗ್ಸ್ ಪೆಡ್ಲಿಂಗ್ ಬಿಟ್ಬಿಡಿ, ಇಲ್ಲ ನಾವೇ ಬಿಡಿಸ್ತಿವಿ, ಹುಷಾರ್: ಉಡುಪಿಯಲ್ಲಿ ಖಡಕ್ ವಾರ್ನಿಂಗ್

ಸುದ್ದಿಗೋಷ್ಠಿಯಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಸಮಾಜದ ನಾಯಕರು ಬೇರೆ ಬೇರೆ ಕಾರಣಕ್ಕೆ ಕೊಲೆಯಾಗಿದ್ದಾರೆ. ಇದು ನಮ್ಮ ಸಮಾಜದ ಒಳಗೆ ನಡೆದಿರುವ ದುರ್ಘಟನೆಗಳು. ಹಾಗಂತ ದುರ್ಘಟನೆಗಳನ್ನ ನೋಡಿ ಸುಮ್ಮನಿರೋದು ಸರಿಯಲ್ಲ. ವ್ಯಕ್ತಿಗತ ಮತ್ತು ಹಿಡನ್ ಅಜೆಂಡಾ ಇಟ್ಟುಕೊಂಡು ಕೃತ್ಯ ಎಸಗುವುದು ತಪ್ಪು ಎಂದಿದ್ದಾರೆ.

ಹೀಗಾಗಿ ಸಮಾಜದ ಎಲ್ಲಾ ಯುವಕರಿಗೆ ಈ ವಿಷಯ ತಲುಪಬೇಕು. ಸಮಾಜದ ಯಾವುದೇ ಯುವಕ ಇಂಥಹ ಘಟನೆಗಳಲ್ಲಿ ಭಾಗಿಯಾಗಬಾರದು. ಯಾವುದೇ ಸಮಸ್ಯೆ ಇದ್ದರೂ ಹಿರಿಯರ ಮೂಲಕ ಪರಿಹರಿಸಿಕೊಳ್ಳಿ. ಮುಂದೆ ಇಂತಹ ಕೊಲೆಗಳಾಗದಂತೆ ಪೂರ್ಣವಿರಾಮ ಹಾಕುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದ್ದಾರೆ.

ಕಂಗೊಳಿಸಿದ ಶಾರದಾ ಮಾತೆ : ಪುಷ್ಕರಣಿಯಲ್ಲಿ ವಿಸರ್ಜಿಸಿ ಉತ್ಸವ ಸಂಪನ್ನ

ಈಗಾಗಲೇ ಈ ಹತ್ಯೆಗಳಲ್ಲಿ ಭೂಗತ ಜಗತ್ತಿನ ಹೆಸರು ಇದೆ. ಇದು ಇಲ್ಲಿ ‌ಮತ್ತೊಂದು ಡಾನ್ ಸೃಷ್ಟಿಸುವುದು ಸರಿಯಲ್ಲ. ಹೀಗಾಗಿ ನಾವು ಇನ್ನು ಸುಮ್ಮನಿರುವುದು ಸರಿಯಲ್ಲ. ಒಂದು ವೇಳೆ ಈ ಯುವಕರು ಪರಿವರ್ತನೆ ಆಗದೇ ಇದ್ರೆ ಸಂಘಟನೆಯಿಂದ ದೂರ ಇಡುತ್ತೇವೆ ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!