ಕೆಲಸ ಮುಗಿಸಿ ಕೈ-ಕಾಲು ತೊಳೆಯಲು ಹೋದಾಗ ನಡೆದ ಅವಘಡ| ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದ ಘಟನೆ| ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿರಬಹುದು ಎಂಬ ಪೊಲೀಸರ ಶಂಕೆ|
ಆನೇಕಲ್(ಅ.28): ಕೆಲಸ ಮುಗಿದ ನಂತರ ಕೃಷಿ ಕಾರ್ಮಿಕನೊಬ್ಬ ಕೈ ಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಗಣಿ ಠಾಣಾ ವ್ಯಾಪ್ತಿಯ ನಾಯನಹಳ್ಳಿಯಲ್ಲಿ ನಡೆದಿದೆ.
ನಾಯನಹಳ್ಳಿಯ ಮುನಿರಾಜು(33) ಮೃತ ದುರ್ದೈವಿ. ಅದೇ ಗ್ರಾಮದ ವೆಂಕಟಾಚಲಗೌಡ ಎಂಬುವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಮುನಿರಾಜು, ಸೋಮವಾರ ಸಂಜೆ ಕೆಲಸ ಮುಗಿಸಿ ಕೈ-ಕಾಲು ತೊಳೆಯಲು ಹೋದಾಗ ಈ ಅವಘಡ ನಡೆದಿದೆ ಎಂದು ಹೇಳಲಾಗಿದೆ.
undefined
ಕೈಗೆ ಬಿಗ್ ಶಾಕ್ : ಎಂಟಿಬಿ ನೇತೃತ್ವದಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕಿ
ಇಡೀ ರಾತ್ರಿ ಮುನಿರಾಜು ಮನೆಗೆ ಬಾರದ ಕಾರಣ, ಆತನ ಪತ್ನಿ ಮಂಗಳವಾರ ಬೆಳಗ್ಗೆ ಪತಿಯನ್ನು ಹುಡುಕಿಕೊಂಡು ತೋಟಕ್ಕೆ ಹೋದಾಗ ಕೃಷಿ ಹೊಂಡದ ಪಕ್ಕದಲ್ಲಿ ಚಪ್ಪಲಿಗಳು ಕಂಡು ಬಂದಿವೆ. ಇಡೀ ತೋಟದಲ್ಲಿ ಹುಡುಕಾಟ ನಡೆಸಿದರೂ, ಗಂಡ ಕಾಣದಿದ್ದಾಗ ಗ್ರಾಮಸ್ಥರ ನೆರವಿನಿಂದ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಹೊಂಡದಲ್ಲಿನ ನೀರನ್ನು ಬರಿದು ಮಾಡಿ ಶವವನ್ನು ಹೊರೆ ತೆರೆಯಲಾಗಿದ್ದು, ಮುನಿರಾಜುಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.