ನವ ವೃಂದಾವನಗಡ್ಡೆಯಲ್ಲಿ ಶ್ರೀನಿವಾಸ ತೀರ್ಥರ ಆರಾಧನೆ|ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಯ ನವ ವೃಂದಾವನಗಡ್ಡೆ| ವ್ಯಾಸರಾಜರ ಶಿಷ್ಯರಾಗಿರುವ ಶ್ರೀನಿವಾಸ ತೀರ್ಥರ ವೃಂದಾವನಕ್ಕೆ ಬೆಳಗ್ಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು|
ಗಂಗಾವತಿ(ಮೇ.13): ತಾಲೂಕಿನ ಆನೆಗೊಂದಿಯ ನವ ವೃಂದಾವನಗಡ್ಡೆಯಲ್ಲಿರುವ ಒಂಬತ್ತು ಯತಿವರೇಣ್ಯರಲ್ಲಿ ಒಬ್ಬರಾದ ಶ್ರೀನಿವಾಸ ತೀರ್ಥರ ಆರಾಧನೆ ಜರುಗಿತು.
ವ್ಯಾಸರಾಜರ ಶಿಷ್ಯರಾಗಿರುವ ಶ್ರೀನಿವಾಸ ತೀರ್ಥರ ವೃಂದಾವನಕ್ಕೆ ಬೆಳಗ್ಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ನವ ವೃಂದಾವನ ಗಡ್ಡೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದರ ಮೂಲಕ ಭಕ್ತರು ಪೂಜೆ ನೆರವೇರಿಸಿದರು.
ಗಂಗಾವತಿಯಿಂದ ಕಂಪ್ಲಿಗೆ ಆಟೋದಲ್ಲಿ ತೆರಳಿದ್ದವನಿಗೆ ಕೊರೋನಾ: ಆತಂಕದಲ್ಲಿ ಜನತೆ
ಈ ಸಂದರ್ಭದಲ್ಲಿ ರಾಘವೇಂದ್ರಸ್ವಾಮಿಗಳ ಮಠದ ವ್ಯವಸ್ಥಾಪಕರಾದ ಸುಮಂತ ಕುಲಕರ್ಣಿ, ಅರ್ಚಕರಾದ ವಿಜೇಂದ್ರಚಾರ ಚಳ್ಳಾರಿ, ನರಸಿಂಹಚಾರ, ಗುರುರಾಜ ದೇಶಪಾಂಡೆ ಭಾಗವಹಿಸಿದ್ದರು.