ಕಾಶ್ಮೀರದ ತೀತ್ವಾಲ್‌ಗೆ ಶೃಂಗೇರಿ ಶ್ರೀಗಳು: ಶಾರದಾಂಬೆಗೆ ವಿಧುಶೇಖರ ಸ್ವಾಮೀಜಿಯಿಂದ ವಿಶೇಷ ಪೂಜೆ

By Girish Goudar  |  First Published Jun 2, 2023, 9:31 AM IST

ಪಂಚಲೋಹದ ವಿಗ್ರಹಕ್ಕೆ‌ ಇದೀಗ‌‌ ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಲಿದ್ದಾರೆ. ಕಾಶ್ಮೀರದ ತೀತ್ವಾಲ್‌ಗೆ ತೆರಳಿ‌ ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಿಲಿದ್ದಾರೆ. ಇದೇ ತಿಂಗಳು 5 ರಂದು ಪೂಜಾ ವಿಧಿವಿಧಾನಗಳು ನಡೆಯುಲಿವೆ.


ಚಿಕ್ಕಮಗಳೂರು(ಜೂ.02):  ಜಮ್ಮು ಮತ್ತು ಕಾಶ್ಮೀರದ ತೀತ್ವಾಲ್‌ನಲ್ಲಿ‌ ಪ್ರತಿಷ್ಠಾಪನೆಗೊಂಡಿರುವ ಶಾರದಾಂಬೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಗಳು ತೆರಳಲಿದ್ದಾರೆ.

ತೀತ್ವಾಲ್‌ನಲ್ಲಿ ಸ್ಥಾಪನೆಗೊಂಡಿರುವ ಶ್ರೀ ಶಾರದಾಂಬೆ ವಿಗ್ರಹ ಪ್ರತಿಷ್ಠಾಪನದ ಪೂಜೆಯಲ್ಲಿ  ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಮಾರ್ಚ್ 18ರಂದು ಶೃಂಗೇರಿಯಿಂದ  ಪಂಚಲೋಹದ ಶಾರದಾಂಬೆ ವಿಗ್ರಹವನ್ನ ಕಾಶ್ಮೀರಿ ಪಂಡಿತರು ಕೊಂಡೊಯ್ದಿದ್ದರು. ಮಾರ್ಚ್‌ 22 ರಂದು‌ ತೀತ್ವಾಲ್ ‌ನಲ್ಲಿ ಕಾಶ್ಮೀರಿ ಪಂಡಿತರಿಂದ ಶಾರದಾಂಬೆ ವಿಗ್ರಹ ಪ್ರತಿಷ್ಠಾಪನೆ ಆಗಿತ್ತು. 

Tap to resize

Latest Videos

undefined

ಪುಷ್ಕರದ ಬ್ರಹ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ!

ಪಂಚಲೋಹದ ವಿಗ್ರಹಕ್ಕೆ‌ ಇದೀಗ‌‌ ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಲಿದ್ದಾರೆ. ಕಾಶ್ಮೀರದ ತೀತ್ವಾಲ್‌ಗೆ ತೆರಳಿ‌ ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಿಲಿದ್ದಾರೆ. ಇದೇ ತಿಂಗಳು 5 ರಂದು ಪೂಜಾ ವಿಧಿವಿಧಾನಗಳು ನಡೆಯುಲಿವೆ.

ಕಾಶ್ಮೀರದ ತೀತ್ವಾಲ್‌ನಲ್ಲಿ‌ ಶಾರದಾಂಬೆ ದೇವಸ್ಥಾನ ಪ್ರತಿಷ್ಠಾಪನೆಗೊಂಡಿದೆ. ಕಾಶ್ಮೀರದ ತೀತ್ವಾಲ್‌ನಲ್ಲಿರುವ ಆದಿ ಶಂಕರಾಚಾರ್ಯರ ಸರ್ವಜ್ಞ ಪೀಠ ಇದೆ. 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳ ಆಕ್ರಮಣದಿಂದ ಶಾರದಾ ಮಂದಿರ ಸಂಪೂರ್ಣ ಹಾನಿಗೊಳಗಾಗಿತ್ತು. ಆರ್ಟಿಕಲ್ 370 ರದ್ದತಿ ನಂತರ ಪುನರ್‌ ನಿರ್ಮಾಣಗೊಳಿಸಿ ಯುಗಾದಿಯ ದಿನದಂದು ಶಾರದಾ ಮಂದಿರ ಲೋಕಾರ್ಪಣೆಗೊಂಡಿತ್ತು.  

click me!