ಬೆಂಗಳೂರು: ಮಹಿಳೆಯರಿಗೆ ಬಸ್‌ ಉಚಿತ ಪ್ರಯಾಣ: ಮೆಟ್ರೋಗೆ ಬಿಸಿ?

By Kannadaprabha NewsFirst Published Jun 2, 2023, 6:22 AM IST
Highlights

ಮಹಿಳಾ ಪ್ರಯಾಣಿಕರನ್ನು ಬಿಎಂಟಿಸಿ ಕಸಿಯುವ ಆತಂಕವನ್ನು ಸ್ವತಃ ಬೆಂಗಳೂರು ಮೆಟ್ರೋ ನಿಗಮದ ಅಧಿಕಾರಿಗಳೇ ವ್ಯಕ್ತಪಡಿಸಿದ್ದಾರೆ. ಸುಮಾರು ಶೇ.20-30ರಷ್ಟು ಪ್ರಯಾಣಿಕರು ಬಿಎಂಟಿಸಿ ಕಡೆ ಮುಖ ಮಾಡುವ ಸಾಧ್ಯತೆಯಿದೆ. 

ಬೆಂಗಳೂರು(ಜೂ.02):  ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನಿಯಮಿತಕ್ಕೆ ಬಿಸಿ ತಟ್ಟಲಿದೆಯೆ? ನಷ್ಟದಲ್ಲೇ ಓಡುತ್ತಿರುವ ನಮ್ಮ ಮೆಟ್ರೋಗೆ ಇದು ಸಂಕಷ್ಟ ತರಲಿದೆಯೇ? ಹೀಗೊಂದು ಪ್ರಶ್ನೆ ಹಾಗೂ ಲೆಕ್ಕಾಚಾರ ಮೆಟ್ರೋ ವಲಯದಲ್ಲಿ ಕೇಳಿಬಂದಿದೆ. ಉಚಿತ ಪ್ರಯಾಣದ ಅನುಕೂಲಕ್ಕಾಗಿ ಮಹಿಳೆಯರು ಮೆಟ್ರೋ ಪ್ರಯಾಣದ ತೊರೆವ ಆತಂಕ ಎದುರಾಗಿದೆ. ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ 10 (ಕ್ಯೂಆರ್‌ ಕೋಡ್‌ .9.5) ಇದೆ. ಒಂದು ದಿನದ ಪಾಸ್‌ಗೆ 150+ 50 ಕೊಡಬೇಕಾಗುತ್ತದೆ. ಆದರೆ, ಹೊಸ ಸರ್ಕಾರದ ಆಶ್ವಾಸನೆಯಂತೆ ಬಸ್‌ನಲ್ಲಿ ಉಚಿತ ಪ್ರಯಾಣ ಜಾರಿಯಾದರೆ ಮಹಿಳೆಯರು ಮೆಟ್ರೋ ಬಿಟ್ಟು ಬಸ್ಸನ್ನು ಏರುವ ಸಾಧ್ಯತೆ ಇಲ್ಲದಿಲ್ಲ. ಬಿಎಂಟಿಸಿ ಮೆಟ್ರೋದ ಮಹಿಳಾ ಪ್ರಯಾಣಿಕರನ್ನು ಒಂದಿಷ್ಟರ ಮಟ್ಟಿಗೆ ಕಸಿಯುವುದು ನಿಶ್ಚಿತ.

ಪ್ರತಿನಿತ್ಯ ಮೆಟ್ರೋದಲ್ಲಿ ಸರಾಸರಿ 5.80 ಲಕ್ಷ ಜನ ಸಂಚರಿಸುತ್ತಿದ್ದಾರೆ. ಅದರಲ್ಲಿ ಸರಾಸರಿ 2.5 ಲಕ್ಷ ಮಹಿಳಾ ಪ್ರಯಾಣಿಕರಿದ್ದಾರೆ. ಮಹಿಳೆಯರನ್ನು ಸೆಳೆಯಲೆಂದೇ ಎಲ್ಲಾ ಮೆಟ್ರೋ ರೈಲುಗಳಲ್ಲಿ ಪ್ರತ್ಯೇಕ ಬೋಗಿಯ ವ್ಯವಸ್ಥೆಯೂ ಇದೆ. ಸರ್ಕಾರಿ ನೌಕರರು, ಖಾಸಗಿ, ಟೆಕ್‌ ಉದ್ಯೋಗಿಗಳು, ವಿದ್ಯಾರ್ಥಿನಿಯರು ಮೆಟ್ರೋ ನೆಚ್ಚಿಕೊಂಡಿದ್ದಾರೆ. ಇದರ ಮಧ್ಯೆ ಫೀಡರ್‌ ಬಸ್‌ ವ್ಯವಸ್ಥೆಯೂ ಇದೆ.

ಮೆಟ್ರೋ ಕೆಲಸಕ್ಕೆ ಕಾರ್ಮಿಕರೇ ಸಿಗುತ್ತಿಲ್ಲ: ಹೀಗಾದರೆ ಕಾಮಗಾರಿ ನಿಗದಿತ ಅವಧಿಗೆ ಪೂರ್ಣ ಕಷ್ಟ

ಜುಲೈ ಮಧ್ಯಕ್ಕೆ ಮಿಸ್ಸಿಂಗ್‌ ಲಿಂಕ್‌ ಎನ್ನಿಸಿಕೊಂಡಿರುವ ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್‌, ಡಿಸೆಂಬರ್‌ ಅಂತ್ಯಕ್ಕೆ ಹಳದಿ ಮಾರ್ಗ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಸೇರಿ ಒಟ್ಟಾರೆ 40 ಕಿ.ಮೀ. ಮಾರ್ಗವನ್ನು ಪ್ರಯಾಣಿಕರಿಗೆ ಮುಕ್ತವಾಗಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ. ಇದರೊಂದಿಗೆ ಪ್ರತಿನಿತ್ಯದ ಸರಾಸರಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುವ ನಿರೀಕ್ಷೆಯಿತ್ತು.

ಆದರೆ, ಇದೀಗ ಮಹಿಳಾ ಪ್ರಯಾಣಿಕರನ್ನು ಬಿಎಂಟಿಸಿ ಕಸಿಯುವ ಆತಂಕವನ್ನು ಸ್ವತಃ ಬೆಂಗಳೂರು ಮೆಟ್ರೋ ನಿಗಮದ ಅಧಿಕಾರಿಗಳೇ ವ್ಯಕ್ತಪಡಿಸಿದ್ದಾರೆ. ಸುಮಾರು ಶೇ.20-30ರಷ್ಟು ಪ್ರಯಾಣಿಕರು ಬಿಎಂಟಿಸಿ ಕಡೆ ಮುಖ ಮಾಡುವ ಸಾಧ್ಯತೆಯಿದೆ. ಮೆಟ್ರೋದ ಪ್ರತಿನಿತ್ಯದ ಸಂಚಾರ, ಆದಾಯಕ್ಕೆ ಹೋಲಿಸಿದರೆ ನಿಗಮ ಈಗಾಗಲೇ ನಷ್ಟದಲ್ಲಿದೆ. ಅದಕ್ಕಾಗಿಯೇ ಮೆಟ್ರೋ ನಿಲ್ದಾಣದಲ್ಲಿ ಮಳಿಗೆ, ಜಾಹೀರಾತಿಗೆ ಅವಕಾಶ ಹೆಚ್ಚಿಸುವ ಮೂಲಕ ಆದಾಯ ಗಳಿಸಿಕೊಳ್ಳಲು ಹೆಜ್ಜೆ ಇಟ್ಟಿದೆ.

ಆತಂಕದಲ್ಲಿ ಆಟೋ ಚಾಲಕರು

ಬೆಂಗಳೂರು: ಹೆಚ್ಚಾಗಿ ಮಹಿಳಾ ಪ್ರಯಾಣಿಕರನ್ನೇ ಆವಲಂಬಿಸಿರುವ ತಮ್ಮ ಆದಾಯಕ್ಕೆ ರಾಜ್ಯ ಸರ್ಕಾರದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಸಂಚಾರ ಯೋಜನೆಯಿಂದ ಹೊಡೆತ ಬೀಳುವ ಆತಂಕಕ್ಕೆ ಆಟೋ ರಿಕ್ಷಾ ಚಾಲಕರು ಒಳಗಾಗಿದ್ದಾರೆ.

ಮೆಟ್ರೋ ಕ್ಯೂಆರ್ ಕೋಡ್ ಬಳಕೆದಾರರ ಹೆಚ್ಚಳ, ಮೂರು ತಿಂಗಳಲ್ಲಿ ಬರೋಬ್ಬರಿ 6.19 ಕೋಟಿ ಹೆಚ್ಚುವರಿ ಆದಾಯ!

ರಾರ‍ಯಪಿಡೋ ಬೈಕ್‌, ಮೆಟ್ರೋದಿಂದ ಈಗಾಗಲೇ ಆಟೋ ರಿಕ್ಷಾಗಳಿಗೆ ಪ್ರಯಾಣಿಕರೇ ಸಿಗುತ್ತಿಲ್ಲ. ಇರುವ ಪ್ರಯಾಣಿಕರಲ್ಲಿ ಪುರುಷರಿಗಿಂತ ಮಹಿಳಾ ಪ್ರಯಾಣಿಕರೇ ಹೆಚ್ಚು. ಇದೀಗ ರಾಜ್ಯ ಸರ್ಕಾರದ ಉಚಿತ ಬಸ್‌ ಸಂಚಾರ ಯೋಜನೆಯಿಂದ ಶೇ.50ಕ್ಕಿಂತ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತ ಬಸ್‌ ಸೇವೆ ಬಳಕೆ ಮಾಡುವ ಸಾಧ್ಯತೆಯಿದ್ದು ಆಟೋ ಮಾಲಿಕರು ಮತ್ತು ಚಾಲಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂಬ ಆತಂಕ ವ್ಯಕ್ತವಾಗಿದೆ.

ಬೆಂಗಳೂರು ನಗರವೊಂದರಲ್ಲೇ ಸುಮಾರು 2.10 ಲಕ್ಷಕ್ಕೂ ಅಧಿಕ ಆಟೋಗಳಿವೆ. ಈ ಪೈಕಿ ಶೇ.80ರಷ್ಟುಆಟೋಗಳು ಬಾಡಿಗೆಗೆ ಸಂಚರಿಸುತ್ತಿವೆ. ರಾರ‍ಯಪಿಡೋ ಬೈಕ್‌ಗಳಿಂದ ಕೋರಮಂಗಲ, ಎಚ್‌ಎಸ್‌ಆರ್‌ಲೇಔಟ್‌, ಜಯನಗರ, ಬಿಟಿಎಂ ಲೇಔಟ್‌, ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌, ಮೆಜೆಸ್ಟಿಕ್‌ ಸುತ್ತಮುತ್ತ, ಬಾಣಸವಾಡಿ, ಕೆ.ಆರ್‌.ಪುರಂ ವ್ಯಾಪ್ತಿಯಲ್ಲಿ ಆಟೋ ಚಾಲಕರು ಹೆಚ್ಚು ನಷ್ಟಕ್ಕೆ ಒಳಗಾಗಿದ್ದಾರೆ. ಬಹುತೇಕ ಮಹಿಳಾ ಪ್ರಯಾಣಿಕರನ್ನೇ ನೆಚ್ಚಿಕೊಂಡು ಅನೇಕ ಆಟೋಗಳು ಸಂಚರಿಸುತ್ತಿವೆ. ಈಗ ಬಸ್‌ಗಳಲ್ಲಿ ಉಚಿತ ಸಂಚಾರಕ್ಕೆ ಮಹಿಳೆಯರಿಗೆ ಅವಕಾಶ ಕೊಡುವುದರಿಂದ ನಷ್ಟಕ್ಕೆ ಒಳಗಾಗುವುದರಲ್ಲಿ ಆಟೋ ಚಾಲಕರ ಸಂಖ್ಯೆಯೇ ಹೆಚ್ಚು. ಇದಕ್ಕೆ ಪರ್ಯಾಯವಾಗಿ ರಾಜ್ಯ ಸರ್ಕಾರ ಆಟೋ ಚಾಲಕರು ಮತ್ತು ಮಾಲಿಕರ ನೆರವಿಗೆ ಬರಬೇಕೆಂದು ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆದರ್ಶ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್‌ ‘ಕನ್ನಡ ಪ್ರಭ’ಕ್ಕೆ ತಿಳಿಸಿದರು.

click me!