ರೋಗಿಯೊಬ್ಬರು ತೀವ್ರ ಜ್ವರ, ವಾಂತಿಯಿಂದ ನರಳಾತ್ತಿದ್ರು, ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಆಸ್ಪತ್ರೆಯಲ್ಲಿ ರೋಗಿಯ ಪರದಾದುವಂತಾಯ್ತು, ಬೆಳಗ್ಗೆಯಿಂದ ಆಸ್ಪತ್ರೆ ಒಳಗಿನ ಬೆಂಚ್ ಮೇಲೆ ಮಲಗಿದ ರೋಗಿಯ ನರಳಾಡುತ್ತಿದ್ದರು. ರೋಗಿಯುನ್ನು ಆಸ್ಪತ್ರೆ ಸಿಬ್ಬಂದಿಗಳು ದಾಖಲಿಸಿಕೊಳ್ಳದೇ ಆಸ್ಪತ್ರೆ ಆವರಣದ ಬೆಂಚ್ ಮೇಲೆ ಮಲಗಿಸಿ ರೋಗಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.22): ಮಹಿಳೆಯೊಬ್ಬರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಆಸ್ಪತ್ರೆಯ ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದು ರೋಗಿ ಆಸ್ಪತ್ರೆ ಮುಂದೆ ಪರದಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಆಸ್ಪತ್ರೆಯಲ್ಲಿ ಇಂದು(ಭಾನುವಾರ) ನಡೆದಿದೆ.
undefined
ರೋಗಿಯೊಬ್ಬರು ತೀವ್ರ ಜ್ವರ, ವಾಂತಿಯಿಂದ ನರಳಾತ್ತಿದ್ರು, ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಆಸ್ಪತ್ರೆಯಲ್ಲಿ ರೋಗಿಯ ಪರದಾದುವಂತಾಯ್ತು, ಬೆಳಗ್ಗೆಯಿಂದ ಆಸ್ಪತ್ರೆ ಒಳಗಿನ ಬೆಂಚ್ ಮೇಲೆ ಮಲಗಿದ ರೋಗಿಯ ನರಳಾಡುತ್ತಿದ್ದರು. ರೋಗಿಯುನ್ನು ಆಸ್ಪತ್ರೆ ಸಿಬ್ಬಂದಿಗಳು ದಾಖಲಿಸಿಕೊಳ್ಳದೇ ಆಸ್ಪತ್ರೆ ಆವರಣದ ಬೆಂಚ್ ಮೇಲೆ ಮಲಗಿಸಿ ರೋಗಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಚಿಕ್ಕಮಗಳೂರಲ್ಲಿ ನವರಾತ್ರಿ ಸಂಭ್ರಮ: ಹೊರನಾಡು, ಶೃಂಗೇರಿಯಲ್ಲಿ ಭಕ್ತರ ಸಾಗರ
ಆಸ್ಪತ್ರೆ ಸಿಬ್ಬಂದಿಗೆ ಸಾರ್ವಜನಿಕರು ಕ್ಲಾಸ್ :
ಆಸ್ಪತ್ರೆಯಲ್ಲಿ ಬೆಡ್ ಗಳಿದ್ರು ದಾಖಲು ಮಾಡಿಕೊಳ್ಳದೆ, ಚಿಕಿತ್ಸೆ ನೀಡದ ಶೃಂಗೇರಿ ತಾಲೂಕು ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೃಂಗೇರಿ ತಾಲೂಕು ಅಡ್ಡಗದ್ದೆ ಗ್ರಾಮದಿಂದ ಕಮಲ ಎಂಬ ಮಹಿಳೆಯು ಆಸ್ಪತ್ರೆಗೆ ಬಂದಿದ್ದು, ತೀವ್ರ ಜ್ವರ ವಾಂತಿಯಿಂದ ಅಸ್ವಸ್ಥರಾಗಿದ್ದಾರೆ. ಈ ಹಿನ್ನಲೆ ಬೆಳಗ್ಗೆ ಆಸ್ಪತ್ರೆಗೆ ಬಂದು, ಆಸ್ಪತ್ರೆಯ ಬೆಂಚ್ ಮೇಲೆ ಮಲಗಿ ಮಹಿಳೆ ನರಳಾಡಿದ್ರು ಆಸ್ಪತ್ರೆ ಸಿಬ್ಬಂದಿಗಳು ತಿರುಗಿಯು ನೋಡದೆ ಅಮಾನವೀಯತೆ ಮೆರೆದಿದ್ದಾರೆ. ಮಹಿಳೆಯ ಪರದಾಟ ನೋಡಿ ಆಸ್ಪತ್ರೆ ಸಿಬ್ಬಂದಿಗೆ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಚಿಕಿತ್ಸೆ ಸಿಗದೆ ಬೆಳಗ್ಗೆಯಿಂದ ಗೋಳಾಡಿದ ಮಹಿಳೆ ಕಮಲ ಪರವಾಗಿ ಸಾರ್ವಜನಿಕರು ಅಸ್ಪತ್ರೆ ಸಿಬ್ಬಂದಿಗೆ ಕ್ಲಾಸ್ ತೆಗದು ಕೊಳ್ಳುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ.