ಬೆಂಗಳೂರು ಏರ್‌ಪೋರ್ಟ್‌ ರಸ್ತೆಯಲ್ಲಿ ಭೀಕರ ಕಾರು ಅಪಘಾತ: ಒಂದು ಸಾವು, ಮಗು ಸೇರಿ ಐವರ ಸ್ಥಿತಿ ಗಂಭೀರ

By Sathish Kumar KH  |  First Published Oct 22, 2023, 6:22 PM IST

ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಅಪಘಾತವಾಗಿದ್ದು ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಐವರು ಗಾಯಗೊಂಡಿದ್ದಾರೆ.


ಬೆಂಗಳೂರು (ಅ.22): ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಬಾಕಿ ಐವರು ಗಂಭೀರ ಗಾಯಗೊಂಡಿದ್ದಾರೆ.

ಎರಡು ಕಾರುಗಳ ನಡುವೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ (ಕೆಐಎಎಲ್) (Kempegowda International Airport Bengaluru) ರಸ್ತೆಯ ಕೋಗಿಲು ಫ್ಲೈಓವರ್ ಮೇಲೆ ಘಟನೆ ನಡೆದಿದೆ. ದೇವನಹಳ್ಳಿ ಕಡೆಯಿಂದ ಬೆಂಗಳೂರು ನಗರಕ್ಕೆ ಬರುತ್ತಿದ್ದ ಕಾರು, ವೇಗವಾಗಿ ಬಂದು ರಸ್ತೆ ಮಧ್ಯದ ಡಿವೈಡರ್ ಅನ್ನು ದಾಟಿದೆ. ಈ ವೇಳೆ ಏರ್ಪೋರ್ಟ್ ಕಡೆಗೆ ಹೋಗುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಶೇಕ್ ಮೊಹಮ್ಮದ್ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

Tap to resize

Latest Videos

undefined

ಮಗಳು ಲವ್‌ ಮಾಡಿ ಓಡಿಹೋಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ತಂದೆ

ರಸ್ತೆ ಡಿವೈಡರ್‌ ಹಾರಿ ಪಕ್ಕದ ರಸ್ತೆಯ ಕಾರಿಗೆ ಡಿಕ್ಕಿ: ದೇವನಹಳ್ಳಿ ಕಡೆಯಿಂದ ಬರುತ್ತಿದ್ದ ಶೇಕ್ ಮೊಹಮ್ಮದ್, ಸ್ನೇಹಿತರ ಜೊತೆಗೆ ಒಂದು ದಿನದ ಪ್ರವಾಸಕ್ಕೆಂದು ಹಿರಗಡೆಗೆ ಹೋಗಿದ್ದನು. ಪ್ರವಾಸ ಮುಗಿಸಿ ವಾಪಸ್‌ ಮನೆಗೆ ಬರುವಾಗ ಅತಿಯಾದ ವೇಗದಲ್ಲಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆಯ ಡಿವೈಡರ್‌ ಹಾರಿಕೊಂಡು ಪಕ್ಕದ ರಸ್ತೆಗೆ ಬಂದಿದೆ. ನಂತರ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನ ಚಾಲಕನ ಪಕ್ಕದಲ್ಲಿ ಕುಳಿತುಕೊಂಡಿದ್ದ ಶೇಕ್ ಮೊಹಮ್ಮದ್ ಸ್ಥಳದಲ್ಲಿಯೇ ಪ್ರಾಣ ತೆತ್ತಿದ್ದಾನೆ. ಇನ್ನು ಈತನ ಜೊತೆಗಿದ್ದ ಮೂವರು ಸ್ನೇಹಿತರಿಗೂ ಗಂಭೀರ ಗಾಯವಾಗಿದೆ.

ತುಮಕೂರಿನಲ್ಲಿ ರೌಡಿಶೀಟರ್ ಪೊಲಾರ್ಡ್‌ ಬರ್ಬರ ಹತ್ಯೆ

ಚಿಕ್ಕ ಮಗು ಸೇರಿದಂತೆ ಐವರಿಗೆ ಗಾಯ: ಅಲ್ಲದೇ ಮತ್ತೊಂದು ಕಾರಿನಲ್ಲಿದ್ದ ಮೂವರಿಗೂ ಗಂಭೀರ ಗಾಯವಾಗಿದೆ. ಲಕ್ಷ್ಮೀ, ನರೇಂದ್ರ ಹಾಗೂ ಅವರ ಮಗಳಿಗೆ ಗಾಯವಾಗಿದ್ದು, ಎರಡೂ ಕಾರಿನಲ್ಲಿದ್ದ ಗಾಯಾಳುಗಳನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಕುರಿತು ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಈ ಬಗ್ಗೆ ಪೊಲೀಸರು ಸ್ಥಳ ಪರಿಶೀಲನೆ ಮಾಡುತ್ತಿದ್ದು, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿದ್ದ ಕಾರುಗಳನ್ನು ರಸ್ತೆ ಬದಿಗೆ ಸರಿಸಿದ್ದಾರೆ. ಉಳಿದಂತೆ ಟ್ರಾಫಿಕ್‌ ಜಾಮ್‌ ತೆರವುಗೊಳಿಸಿ ಇತರೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

click me!