ದತ್ತಾತ್ರೇಯ ಪೀಠದಲ್ಲಿ ಮಾಂಸದೂಟ, ಶ್ರೀರಾಮಸೇನೆಯಿಂದ ಶುದ್ಧೀಕರಣ

By Suvarna News  |  First Published May 19, 2022, 4:27 PM IST

* ಇನಾಂ ದತ್ತಾತ್ರೇಯ ಪೀಠದಲ್ಲಿ ಮಾಂಸದೂಟ ಪ್ರಕರಣ
* ಹೋಮ ಮಂಟಪದಲ್ಲಿ ಮಾಂಸದೂಟ ಮಾಡಿರುವ ಹಿನ್ನೆಲೆ
* ಶ್ರೀರಾಮಸೇನೆ ಕಾರ್ಯಕರ್ತರು ಐಡಿ ಪೀಠಕ್ಕೆ ಭೇಟಿ
* ಹೋಮ ಮಂಟಪದವನ್ನು ಶುದ್ದಿಕರಿಸಿದ ಶ್ರೀರಾಮಸೇನೆ ಕಾರ್ಯಕರ್ತರು


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಮೇ.19) :ಹಿಂದೂ ಮುಸ್ಲಿಮರ ವಿವಾದಿತ ಕೇಂದ್ರವಾದ ಚಿಕ್ಕಮಗಳೂರಿನ  ಇನಾಂ ದತ್ತಾತ್ರೇಯ ಪೀಠದಲ್ಲಿ ಕೋರ್ಟ್ ಆದೇಶವನ್ನು ಗಾಳಿಗೆ ತೂರಿ ಮಾಂಸ ಭಕ್ಷಣೆ ಮಾಡಿದ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ  ಗೋರಿಗಳಿಗೆ ಪೂಜೆ ಪುನಸ್ಕಾರ ಸೇರಿದಂತೆ ಬಿರಿಯಾನಿ ಭಕ್ಷಣೆ ಮಾಡಿದ್ದ ಸ್ಥಳವನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ಗೋ ಮೂತ್ರದ ಮೂಲಕ ಶುದ್ದೀಕರಣ ಮಾಡಿದರು.

ಗಂಗಾ-ಯಮುನ-ಸರಸ್ವತಿ ನದಿಯ ಸಂಗಮ ತೀರ್ಥದಿಂದ ಶುದ್ಧ 
ದೇಶದ ವಿವಾದಿತ ಕೇಂದ್ರವಾಗಿರೋ ಇನಾಂ ದತ್ತಾತ್ರೇಯ ಪೀಠದಲ್ಲಿ ರಸ್ತೆಯಲ್ಲಿ ನಾನ್ ವೆಜ್  ಅಡುಗೆ ಮಾಡಿ ಪೀಠದಲ್ಲಿರೋ ಹೋಮಮಂಟಪದಲ್ಲಿ ನಾನ್ ವೆಜ್ ಊಟ ಮಾಡ್ತಾ ಇರೋ ವಿಡಿಯೋ ಇದೇ ತಿಂಗಳು 16ರಂದು  ವೈರಲ್ ಆಗಿತ್ತು. ವೈರಲ್ ಅಗ್ತಾ ಇದ್ದಂತೆ ಹಿಂದೂ ಪರಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿ ದತ್ತಪೀಠದಲ್ಲಿಯೇ ಪ್ರತಿಭಟನೆ ನಡೆಸಿದ್ದರು..ಮಾಂಸಹಾರ ಊಟಕ್ಕೆ ಅವಕಾಶ ನೀಡಿದ್ದಾರೆ ಅಂತಾ ಮುಜಾರಾಯಿ ಇಲಾಖೆಯ ವಿರುದ್ದವೇ ಹರಿಹಾಯ್ದು ಪ್ರತಿಭಟನೆ ನಡೆಸಿದ್ದರು.

Tap to resize

Latest Videos

ಹೋಮ-ಹವನ ನಡೆಯುವ ಸ್ಥಳದಲ್ಲಿ ನಾನ್ ವೆಜ್, ವಿವಾದ ಕಿಡಿಹೊತ್ತಿಸಿದ ಬಿರಿಯಾನಿ

ಪೀಠದ ಆವರಣ, ತಾತ್ಕಲಿಕ ಶೆಡ್ ನಲ್ಲಿ ಮಾಂಸ ಬೇಯಿಸುವ ಮೂಲಕ ದತ್ತಪೀಠವನ್ನು  ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದ ಎಚ್ಚೇತುಗೊಂಡ ಜಿಲ್ಲಾಡಳಿತ ತಾತ್ಕಲಿಕ ಶೆಡ್ ಕ್ಲೀನ್ ಮಾಡಿತ್ತು.ಇಂದು  ಶ್ರೀ ರಾಮಸೇನೆ ಕಾರ್ಯಕರ್ತರು ದತ್ತಪೀಠಕ್ಕೆ ತೆರಳಿ ಭೇಟಿ ನೀಡಿದರು.  ಶ್ರೀರಾಮಸೇನೆ ಕಾರ್ಯಕರ್ತರು ಐಡಿ ಪೀಠಕ್ಕೆ ಭೇಟಿ ನೀಡಿ ಗುಹೆಗೆ ತೆರಳಿ ದತ್ತಾತ್ರೇಯ ದರ್ಶನ ಪಡೆದರು. ನಂತರ ತಾತ್ಕಲಿಕ ಶೆಡ್ ಪ್ರತಿವರ್ಷ ಶ್ರೀ ರಾಮಸೇನೆ ಕಾರ್ಯಕರ್ತರು ದತ್ತಜಯಂತಿ ಆಚರಣೆ ಮಾಡುತ್ತಾರೆ. ಅದೇ ತಾತ್ಕಲಿಕ ಶೆಡ್ ಹೋಮ ಮಂಟಪದಲ್ಲಿ ಮಾಂಸ ಭಕ್ಷಣೆ ಮಾಡಲಾಗಿತ್ತು. ಹಿನ್ನಲೆಯಲ್ಲಿ ತಾತ್ಕಲಿಕ ಶೆಡ್ ಗೆ ತೆಳಿದ ಕಾರ್ಯಕರ್ತರು ಶುದ್ದಿಕರಿಸುವ ಕೆಲಸವನ್ನು ಮಾಡಿದರು. ಗಂಗಾ-ಯಮುನ-ಸರಸ್ವತಿ ನದಿಯ ಸಂಗಮ ತೀರ್ಥದಿಂದ ಶುದ್ದಿಕರಿಸುವ ಕೆಲಸವನ್ನು ಮಾಡಿದರು. 

ಗೋ ಮೂತ್ರ ಹಾಕಿ ಹೋಮ ಮಂಟಪ್ಪ ಶುದ್ದೀಕರಣ
ರಾಜ್ಯಾದ್ಯಂತ ಧರ್ಮ ಸಂಘರ್ಷ ನಡೆಯುತ್ತಿದೆ ಇದರ ನಡುವೆ ದೇಶದ ವಿವಾದಿತ ಕೇಂದ್ರ ಇನಾಂ ದತ್ತಾತ್ರೇಯ ಪೀಠದಲ್ಲಿ ಮಾಂಸದೂಟ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹೋಮ ಮಂಟಪದಲ್ಲಿ ಮಾಂಸದೂಟ ಮಾಡಿರುವ ಹಿನ್ನೆಲೆ ಶ್ರೀರಾಮಸೇನೆ ಕಾರ್ಯಕರ್ತರಿಂದ ಹೋಮ ಮಂಟಪಕ್ಕೆ ಗೋ ಮೂತ್ರ ಹಾಕಿ, ಗೋವಿಗೂ ಹೋಮ ಮಂಟಪದಲ್ಲಿ ಪೂಜೆಯನ್ನು ಮಾಡಿದರು.ಸ್ಥಳೀಯಅರ್ಚಕರಾದ ಯೋಗಿಶ್ ಶರ್ಮ ನೇತೃತ್ವದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರಿಂದ ಪೂಜೆಯನ್ನು ಮಾಡಿದರು. 

ನಂತರ ಮಾತಾಡಿದ ಶ್ರೀ ರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಸರ್ಕಾರ, ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ವ್ಯಕ್ತಿಯಿಂದ ಮಾತ್ರ ಪೂಜೆಗೆ ಅವಕಾಶವಿದ್ದು ಮುಜರಾಯಿ ಕಮಿಷನ್ ನೀಡಿದ ತೀರ್ಪಯೇ ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿದೆ. 2010ರಲ್ಲಿ ಸುಪ್ರೀಂ ಕೋರ್ಟ್ ಕೂಡ 1999ರ ಪೂಜಾ ಪದ್ದತಿ ಪಾಲನೆಗೆ ಸೂಚನೆ ನೀಡಲಾಗಿದೆ. ಸರ್ಕಾರ ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್  ಅವರಿಂದ ಮಾತ್ರ ದತ್ತಗುಹೆ, ಗೋರಿಗಳಿಗೆ ಪೂಜೆಗೆ ಅವಕಾಶವಿದ್ದು ಮುಜಾವರ್ ಪಾದುಕೆ, ಗೋರಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಅನ್ಯ ವ್ಯಕ್ತಿಗಳಿಗೆ ಪೂಜಾ ಪುನಸ್ಕಾರಕ್ಕೆ ಅವಕಾಶವಿಲ್ಲ ಜೊತೆಗೆ ದತ್ತಜಯಂತಿ ಸಮಯದಲ್ಲಿ ಸ್ವಾಮೀಜಿಗಳಿಂದ ದತ್ತಪಾದುಕೆ ಪೂಜೆಗೆ ಅವಕಾಶಕ್ಕೆ ನೀಡುವಂತೆ  ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿರುವ ನಿದೇರ್ಶನವೂ ಇದೆ. ಇದರ ಜೊತೆಗೆ ದತ್ತಪೀಠದಲ್ಲಿ ಮುಜರಾಯಿ ಇಲಾಖೆಯ ನಿಯಮದಂತೆ 200ಮೀಟರ್ ಸುತ್ತಮುತ್ತ ಯಾವುದೇ ಮಾಂಸಾಹಾರ ಮಾಡುವುದು ನಿಷೇಧವೂ ಜಾರಿಯಲ್ಲೂ ಇದ್ದರೂ ಬಿರಿಯಾನಿ ಭೀಕ್ಷಣೆ ಮಾಡಿರುವುದು ಜಿಲ್ಲಾಡಳಿತ ವೈಫಲ್ಯವೆಂದು ಕಿಡಿಕಾರಿದ್ರು.. ಮುಂದಿನ ದಿನಗಳಲ್ಲಿ ಈ ರೀತಿ ಪ್ರಕರಣಗಳು ನಡೆದ್ರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು..

click me!