ಸ್ಪೆಲ್ಲಿಂಗ್ ಮಿಸ್ಟೇಕ್ ಹಿನ್ನೆಲೆಯಲ್ಲಿ ದುಬೈಗೆ ತೆರಳಬೇಕಿದ್ದ ಮಹಿಳೆಯ ಪ್ರಯಾಣವೇ ರದ್ದಾಗಿದೆ.
ಶಿವಮೊಗ್ಗ (ನ.26): ಕೊರೋನಾ ನೆಗೆಟಿವ್ ಪ್ರಮಾಣ ಪತ್ರದಲ್ಲಿ ಶಿವಮೊಗ್ಗದ ಹೆಸರಿನ ಸ್ಪೆಲ್ಲಿಂಗ್ ಮಿಸ್ಟೇಕ್ ಕಾರನದಿಮದ ದುಬೈ ಪ್ರಯಾಣವೇ ರದ್ದಾಗಿದೆ.
ತೀರ್ಥಹಳ್ಳಿಯ ಮಹಿಳೆಯೊಬ್ಬರ ವಿಮಾನ ಪ್ರಯಾಣ ರದ್ದಾದ ಘಟನೆ ನಡೆದಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಬೇಕಿದ್ದ ಪ್ರಯಾಣ ರದ್ದಾಗಿದೆ.
ಕ್ಷಿಪಣಿ ದಾಳಿ ತಡೆಯುವ ವಿಮಾನದಲ್ಲಿ ರಾಷ್ಟ್ರಪತಿ ಮೊದಲ ಪ್ರಯಾಣ! ...
ತೀರ್ಥಹಳ್ಳಿಯ ಚಾಂದ್ ಬೇಗಂ ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡಿದ್ದು ಪ್ರಮಾಣ ಪತ್ರ ಪಡೆದುಕೊಂಡಿದ್ದರು.
ಆದರೆ ಶಿವಮೊಗ್ಗ ಎಂದು ಬರೆದ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದ ಕಾರಣ ಬೋರ್ಡಿಂಗ್ ಪಾಸ್ ನೀಡಲು ನಿರಾಕರಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ್ದರೂ ಅವರಿಗೆ ಪ್ರಯಾಣಕಕ್ಕೆ ಅವಕಾಶ ನೀಡಿಲ್ಲ.