ಕಳೆದ ಹದಿನೆಂಟು ವರ್ಷಗಳಿಂದ BSFನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ| ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ತಾವರಗಿ ಗ್ರಾಮ ಯೋಧ| ತಂದೆ ನಿಧನರಾಗಿದ್ದರಿಂದ ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಭರಮಗೌಡ ಹೊಸಮನಿ|
ಹಾವೇರಿ(ನ.26): ರಜೆ ಮೇಲೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ತಾವರಗಿ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಭರಮಗೌಡ ಹೊಸಮನಿ (39) ಮೃತ ಯೋಧರಾಗಿದ್ದಾರೆ.
ಭರಮಗೌಡ ಹೊಸಮನಿ ಕಳೆದ ಹದಿನೆಂಟು ವರ್ಷಗಳಿಂದ BSFನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಭರಮಗೌಡ ಹೊಸಮನಿ ಅವರು ರಜೆ ಮೇಲೆ ಊರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.
ತಂದೆ ನಿಧನರಾಗಿದ್ದರಿಂದ ಭರಮಗೌಡ ಹೊಸಮನಿ ರಜೆ ಮೇಲೆ ಊರಿಗೆ ಬಂದಿದ್ದರು. ಮೇಘಾಲಯದ ಬಿಎಸ್ಎಫ್ ಬಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಹಾವೇರಿ: ಮೀನು ಹಿಡಿಯಲು ಹೋದ ವ್ಯಕ್ತಿ ನದಿಯಲ್ಲಿ ಮುಳುಗಿ ಸಾವು
ನಿನ್ನೆ(ಬುಧವಾರ) ಸಂಜೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನ ಹಿರೇಕೆರೂರಿನ ತಾಲೂಕು ಸರಕಾರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಯೋಧ ಭರಮಗೌಡ ಹೊಸಮನಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.