ಮತ್ತೆ ಸ್ವ ಕ್ಷೇತ್ರಕ್ಕೆ ಹೋದ್ರು ಅನಿತಾ : ಇದೇ ವೇಳೆ ವಾರ್ನಿಂಗ್ ಕೊಟ್ರು

By Kannadaprabha News  |  First Published Nov 26, 2020, 12:32 PM IST

ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಸ್ವ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಅಲ್ಲದೇ ಇದೇ ವೇಳೆ ಎಚ್ಚರಿಕೆಯನ್ನು ನೀಡಿದರು. 


ರಾಮನಗರ (ನ.26):  ವಿಭೂತಿಕೆರೆ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಬುಧವಾರ ಕ್ಷೇತ್ರ ಪ್ರವಾಸ ಕೈಗೊಂಡರು. 

ಲಕ್ಕೋನಹಳ್ಳಿ ಗ್ರಾಮದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ನೀಡಲಾಗುವ ಆಹಾರ ಪದಾರ್ಥಗಳ ದಿನಸಿ ಕಿಟ್ ವಿತರಿಸಿದರು. 

Tap to resize

Latest Videos

ವಿವಿಧ ಗ್ರಾಮಗಳಿಗೆ ತೆರಳಿ ಸಮಸ್ಯೆ ಆಲಿಸಿದ ಅವರು  ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. 

ನನ್ನ ವಿರುದ್ಧ ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ : ಅನಿತಾ ಕುಮಾರಸ್ವಾಮಿ ಅಸಮಾಧಾನ ...

ಶಾಸಕರು ಸಮಸ್ಯೆ ಇರುವ ಸ್ಥಳಗಳಿಗೆ ತೆರಳಿ ಅಹವಾಲು ಆಲಿಸಿದ್ದಲ್ಲದೇ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ತಾಕೀತು ಮಾಡಿದರು.

ಕ್ಷೇತ್ರ ಪ್ರವಾಸದ ವೇಳೆ ಶಾಸಕಿ ಅನಿತಾ ಅವರಿಗೆ ಜನರು ಅದ್ದೂರಿ ಸ್ವಾಗತವನ್ನು ಕೋರಿದರು. ಈ ವೇಳೆ ಜೆಡಿಎಸ್ ಪಕ್ಷದ ವಿವಿಧ ಮುಖಂಡರು ಹಾಜರಿದ್ದರು

click me!