
ಹಾವೇರಿ: ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಹಾವೇರಿ ಮತ್ತು ರಾಣಿಬೆನ್ನೂರು ನಗರಗಳಿಂದ ಶಿವಮೊಗ್ಗ ಜಿಲ್ಲೆಯ ವಿಶ್ವ ಪ್ರಸಿದ್ದ ಪ್ರೇಕ್ಷಣೀಯ ಸ್ಥಳವಾದ ಜೋಗ್ ಫಾಲ್ಸ್ ಹಾಗೂ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತಾಧಿಗಳು/ಸಾರ್ವಜನಿಕ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ವೀಕ್ಷಣೆಗಾಗಿ ತೆರಳುವ ಜೂ. 21ರಿಂದ ಹಾವೇರಿ ಮತ್ತು ರಾಣಿಬೆನ್ನೂರು ಬಸ್ ನಿಲ್ದಾಣಗಳಿಂದ ಜೋಗ್‌ಫಾಲ್ಸ್ ಮತ್ತು ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ವಿಶೇಷ ವೇಗದೂತ ವಾಹನಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಹಾವೇರಿಯಿಂದ ಜೋಗ್ ಫಾಲ್ಸ್ ಬೆಳಗ್ಗೆ 8 ಗಂಟೆಯಿಂದ ಸಿದ್ದಾಪುರ ಮಾರ್ಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಮಾಡಿಸಿಕೊಂಡು ಜೋಗ್ ಫಾಲ್ಸ್ ಕಾರ್ಯಾಚರಣೆ ಮಾಡಲಾಗುತ್ತದೆ. ಪುನಃ ಜೋಗ್‌ಫಾಲ್ಸ್‌ನಿಂದ ಸಂಜೆ 4 ಗಂಟೆಗೆ ನಿರ್ಗಮಿಸಿ, ಹಾವೇರಿಗೆ ಸಂಜೆ 7.30ಕ್ಕೆ ತಲುಪುವುದು. ಜೋಗ್ ಫಾಲ್ಸ್ ವೀಕ್ಷಣೆಗೆ 4 ಗಂಟೆಗಳ ಕಾಲಾವಕಾಶ ಇದ್ದು, ಹಾವೇರಿಯಿಂದ ಜೋಗ್ ಫಾಲ್ಸ್‌ಗೆ 390 ರು. (ಹೋಗಿ ಬರುವ ಸೇರಿ) ಪ್ರಯಾಣದರ ಇರುತ್ತದೆ.
ಹಾವೇರಿಯಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 7.30 ಗಂಟೆಗೆ ಆಡೂರು, ಅಕ್ಕಿಆಲೂರು, ನಾಲ್ಕರ ಕ್ರಾಸ್, ಗೊಂದಿ, ಆನವಟ್ಟಿ, ಉಳವಿ, ಸಾಗರ ಮಾರ್ಗವಾಗಿ ಕಾರ್ಯಚರಣೆ ಮಾಡಲಾಗುತ್ತದೆ. ಪುನಃ ಸಂಜೆ 3.30 ಗಂಟೆಗೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದಿಂದ ನಿರ್ಗಮಿಸಿ ಸಂಜೆ 7.30ಕ್ಕೆ ಹಾವೇರಿಗೆ ತಲುಪುವುದು. ಹಾವೇರಿಯಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ 455 ರು. (ಹೋಗಿ ಬರುವ ಸೇರಿ) ಪ್ರಯಾಣದರ ಇರುತ್ತದೆ.
ರಾಣಿಬೆನ್ನೂರಿನಿಂದ ಜೋಗ್ ಫಾಲ್ಸ್‌ಗೆ ಬೆಳಗ್ಗೆ 8.30 ಗಂಟೆಗೆ ಹಿರೇಕೆರೂರು, ಶಿರಾಳಕೊಪ್ಪ, ಸೊರಬ, ಸಿದ್ದಾಪುರ ಮಾರ್ಗವಾಗಿ ಬನವಾಸಿಯಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ, ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಮಾಡಿಸಿಕೊಂಡು ಕಾರ್ಯಚರಣೆ ಮಾಡಲಾಗುತ್ತದೆ. ಪುನಃ ಜೋಗ್ ಫಾಲ್ಸ್‌ನಿಂದ ಸಂಜೆ 4 ಗಂಟೆಗೆ ನಿರ್ಗಮಿಸಿ, ರಾಣಿಬೆನ್ನೂರಿಗೆ ಸಂಜೆ 7.30ಕ್ಕೆ ತಲುಪುವುದು. ಜೋಗ್ ಫಾಲ್ಸ್ ವೀಕ್ಷಣೆಗೆ 4 ಗಂಟೆಗಳ ಕಾಲಾವಕಾಶ ಇದ್ದು, ರಾಣಿಬೆನ್ನೂರನಿಂದ ಜೋಗ್ ಫಾಲ್ಸ್ 460 ರು. (ಹೋಗಿ ಬರುವ ಸೇರಿ) ಪ್ರಯಾಣದರ ಇರುತ್ತದೆ.
ರಾಣಿಬೆನ್ನೂರಿನಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 7.30 ಗಂಟೆಗೆ ಕೋಡ, ಹಿರೇಕೆರೂರು, ಶಿರಾಳಕೊಪ್ಪ, ಇಂಡುವಳ್ಳಿ, ಉಳವಿ, ಸಾಗರ ಮಾರ್ಗವಾಗಿ ಕಾರ್ಯಚರಣೆ ಮಾಡಲಾಗುತ್ತದೆ. ಪುನಃ ಮಧ್ಯಾಹ್ನ 3 ಗಂಟೆಗೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ನಿರ್ಗಮಿಸಿ ಸಂಜೆ 6.30ಕ್ಕೆ ರಾಣಿಬೆನ್ನೂರಿಗೆ ತಲುಪುವುದು. ರಾಣಿಬೆನ್ನೂರನಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ 430 ರು. (ಹೋಗಿ ಬರುವ ಸೇರಿ) ಪ್ರಯಾಣದರ ಇರುತ್ತದೆ.
ಈ ವಿಶೇಷ ಬಸ್‌ಗಳಿಗೆ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿ ಆಸನಗಳನ್ನು ಕಾಯ್ದಿರಿಸಬಹುದಾಗಿರುತ್ತದೆ. ಈ ಸಾರಿಗೆಗಳು ವಿಶೇಷ ಸಾರಿಗೆಗಳಾಗಿ ಕಾರ್ಯಾಚರಣೆ ಮಾಡುವುದರಿಂದ ''''ಮಹಿಳಾ ಪ್ರಯಾಣಿಕರಿಗೆ'''' ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದು ವಾ.ಕ.ರ.ಸಾ.ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾವೇರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸಕ್ತ 2026-27ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಅಲೆಮಾರಿ, ಅರೆಅಲೆಮಾರಿ ಜನಾಂಗದ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಹಾಗೂ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳು ಆ.31ರೊಳಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲಾತಿಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಅದೇಶಗಳ ಬಗ್ಗೆ ವೆಬ್‌ಸೈಟ್ ಇಲಾಖಾ ಸಹಾಯವಾಣಿ 8050770004 ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ 1902 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಕೆಲಸ ಸಮಯದಲ್ಲಿ ಸಂಪರ್ಕಿಸಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.