ತಾಲೂಕಿನ ಗ್ರಾಮೀಣ ಸಂಪರ್ಕ ರಸ್ತೆ ಪ್ರಗತಿಗೆ ವಿಶೇಷ ಅದ್ಯತೆ ನೀಡಿದ್ದು ಕೋಟ್ಯಂತರ ರು. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿವೆ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.
ಪಾವಗಡ : ತಾಲೂಕಿನ ಗ್ರಾಮೀಣ ಸಂಪರ್ಕ ರಸ್ತೆ ಪ್ರಗತಿಗೆ ವಿಶೇಷ ಅದ್ಯತೆ ನೀಡಿದ್ದು ಕೋಟ್ಯಂತರ ರು. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿವೆ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.
ತಾಲೂಕಿನ ಭೂಫäರು ಗ್ರಾಮದಲ್ಲಿ 9 ಕೋಟಿ ವೆಚ್ಚದ ತಾ.ಪಳವಳ್ಳಿ ಹಾಗೂ ಬಿ.ಕೆ.ಹಳ್ಳಿ ಡಾಂಬರೀಕರಣ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರೆವೇರಿಸಿದ ಬಳಿಕ ಮಾತನಾಡಿ, ತಾಲೂಕಿನ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದೇನೆ. ತಾಲೂಕಿನ ಪಳವಳ್ಳಿ ಹಾಗೂ ಬಿ.ಕೆ.ಹಳ್ಳಿ ತುಂಬ ಅದೋಗತಿಯಲ್ಲಿತ್ತು. ಈ ರಸ್ತೆಯಲ್ಲಿ ವಾಹನ ಒಡಾಟಕ್ಕೆ ತೀವ್ರ ಆಡಚಣೆ ಎದುರಾಗಿತ್ತು. ಈ ಭಾಗದ ಜನತೆ ಗಮನ ಸೆಳೆದ ಮೇರೆಗೆ, ಮೊದಲ ಹಂತದಲ್ಲಿ 5ಕೋಟಿ ವಿನಿಯೋಗಿಸಿದ್ದು ಇದೇ ರಸ್ತೆಗೆ ಮುಂದುವರಿದ ಭಾಗವಾಗಿ 4 ಕೋಟಿ ಬಿಡುಗಡೆ ಸೇರಿ ಒಟ್ಟು ಪಳವಳ್ಳಿಯಿಂದ ಬಿ.ಕೆ.ಹಳ್ಳಿಗೆ 9ಕೋಟಿ ವೆಚ್ಚದಲ್ಲಿ 12ಕಿಮೀ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿಪೂಜೆ ನೆರೆವೇರಿಸಲಾಗಿದೆ ಎಂದರು.
ಇದರ ಜತೆ ತಾಲೂಕಿನ ಕ್ಯಾತಗಾನಕರೆ ಹಾಗೂ ಭೂಪೂರು ಕ್ರಾಸ್ ರಸ್ತೆ ಪ್ರಗತಿಗೆ 60ಲಕ್ಷ ಬಿಡುಗಡೆ ಮಾಡಿದ್ದು ಈ ರಸ್ತೆಯ ಕಾಮಗಾರಿ ಪ್ರಗತಿಗೆ ಈ ಭಾಗದ ಮುಖಂಡರ ಜತೆ ಈಗಾಗಲೇ ಗುದ್ದಲಿಪೂಜೆ ನೆರೆವೇರಿಸಲಾಗಿದೆ. ಇತ್ತೀಚೆಗೆ ಗುದ್ದಲಿ ಪೂಜೆ ನೆರೆವೇರಿಸಿದ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಗುಣ ಮಟ್ಟ ಹಾಗೂ ನಿಯಮನುಸಾರ ರಸ್ತೆನಿರ್ವಹಿಸುವಂತೆ ಸಂಬಂಧಪಟ್ಟಲೋಕೋಪಯೋಗಿ ಎಇಇ ಅನಿಲ್‌ಕುಮಾರ್ ಹಾಗೂ ಗುತ್ತಿಗೆದಾರರಿಗೆ ಆದೇಶಿಸಲಾಗಿದೆ ಎಂದರು.
ನೆಟ್ ವರ್ಕ್ ಸಂಪರ್ಕದ ಒಎಫ್‌ಸಿ ಕೇಬಲ್ ಆಳವಡಿಕೆ ಕಾಮಗಾರಿಯೊಂದಕ್ಕೆ ಸಂಬಂಧಪಟ್ಟಂತೆ ಅಡ್ವಾನ್ಸ್ ಹೆಸರಿನಲ್ಲಿ ಗುತ್ತಿಗೆದಾರರಿಂದ 50ಸಾವಿರ ಲಂಚ ಸ್ವೀಕಾರ ಕುರಿತು ಶುಕ್ರವಾರ ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಸುದ್ದಿಬಿತ್ತರವಾದ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ವೆಂಕಟರಮಣಪ್ಪ, ಕಳೆದ ಒಂದು ತಿಂಗಳ ಹಿಂದೆ, ನಮ್ಮ ತೋಟದ ಮನೆಯಲ್ಲಿ ನೂತನ ಮನೆಯ ಗೃಹಪ್ರವೇಶ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಮಾರಂಭಕ್ಕೂ ಮುನ್ನ ಮನೆಯ ಬಳಿ,ಊಟದ ವ್ಯವಸ್ಥೆಗೆ ಅಕ್ಕಿ ಬೇಳೆ ಸಕ್ಕರೆ ಇತರೆ ಆಹಾರ ಸಾಮಗ್ರಿಗಳ ಸರಬರಾಗಿನ ವಿಚಾರವಾಗಿ, ಸಾಮಾನು ಸರಬರಾಜ್‌ದಾರರ ಬಳಿ ವಿವರ ಪ‚ಡೆಯುತ್ತಿದ್ದೆ. ಈ ವೇಳೆ ನನ್ನಗೆ ಗೂತ್ತಿಲ್ಲದಂತೆ ಯಾರೋ ಟೇಬಲ್ ಮೇಲೆ ಹಣ ವಿಟ್ಟು ವಿಡಿಯೋ ಮಾಡಿದ್ದಾರೆ. ಅದನ್ನೆ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದಾರೆ. ಇದು ಚುನಾವಣೆ ವೇಳೆ ಕೆಲ ವಿರೋಧಿ ರಾಜಕಾರಣಿಗಳು ನಮ್ಮನ್ನು ರಾಜಕೀಯ ಕುಗ್ಗಿಸುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದು ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಕೆಲಸ ಕಾರ್ಯಗಳ ಹೆಸರಿನಲ್ಲಿ ಎಂದೂ ಯಾರ ಬಳಿ ಲಂಚಸ್ವೀಕರಿಸಿಲ್ಲ. ಅದು ನನ್ನ ಜಾಯಮಾನವಲ್ಲ. ನನ್ನದು ಜನ ಸೇವೆ ಬಿಟ್ಟರೆ ಹಣ ಮಾಡುವ ಪ್ರವೃತ್ತಿ ನನ್ನಗಿಲ್ಲ, ನನ್ನ ಪ್ರಾಮಾಣಿಕ ಸೇವೆ ಕುರಿತು ತಾಲೂಕಿನ ಜನತೆಗೆ ಗೊತ್ತಿದೆ. ಲಂಚಸ್ವೀಕಾರ ಕೆಲವರ ಕಟ್ಟುಕಥೆ ಎಂದು ಅವರು ತಳ್ಳಿಹಾಕಿದರು.
ಈ ವೇಳೆ,ಲೋಕೋಪಯೋಗಿ ಇಲಾಖೆ ಎಇಇ ಅನಿಲ್,ಹಿರಿಯ ಮುಖಂಡರಾದ ಜಗನ್ನಾಥಶೆಟ್ಟಿ,ನಾಗರ್ಜುನರೆಡ್ಡಿ,ಗಂಗಾಧರರೆಡ್ಡಿ,ಹಾಗೂ ಕಾಮನದುರ್ಗ ಗ್ರಾಪಂ ಅಧ್ಯಕ್ಷರಾದ ವಿಷ್ಣು,ಬಿ.ಕೆ. ಗ್ರಾಪಂ ಅಧ್ಯಕ್ಷೆ ರಾಮಾಂಜಿನಮ್ಮ,ನರಸಿಂಹಮೂರ್ತಿ ತಿಪ್ಪಯ್ಯ ಕ್ಯಾತಗಾನಕೆರೆ ಮಲ್ಲಿಕಾರ್ಜುನ ಹನುಮಂತರಾಯಪ್ಪ ಗುತ್ತಿಗೆದಾರ ನರಸಿಂಹರೆಡ್ಡಿ ಇತರೆ ಆನೇಕ ಮಂದಿ ಉಪಸ್ಥಿತರಿದ್ದರು.