ಲಾಕ್‌ಡೌನ್‌: ಪುಟ್ಟ ಮಗು ಕೊಡಲು ಸೂರತ್‌ನಿಂದ ಬೆಳಗಾವಿಗೆ ಬಂದ ವಿಶೇಷ ವಿಮಾನ!

Kannadaprabha News   | Asianet News
Published : Apr 16, 2020, 11:21 AM IST
ಲಾಕ್‌ಡೌನ್‌: ಪುಟ್ಟ ಮಗು ಕೊಡಲು ಸೂರತ್‌ನಿಂದ ಬೆಳಗಾವಿಗೆ ಬಂದ ವಿಶೇಷ ವಿಮಾನ!

ಸಾರಾಂಶ

ನವಜಾತ ಶಿಶುವೊಂದನ್ನು ಸೂರತ್‌ನಿಂದ ಖಾಸಗಿ ವಿಮಾನದ ಮೂಲಕ ಬೆಳಗಾವಿಗೆ ತಂದ ವೈದ್ಯರು| ಶಿಶುವನ್ನು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ಬಳಿ ಆರೋಗ್ಯ ತಪಾಸಣೆ| ಬಳಿಕ ಬೆಳಗಾವಿ ದಂಪತಿಗೆ ಮಗು ಹಸ್ತಾಂತರ|

ಬೆಳಗಾವಿ(ಏ.16): ಲಾಕ್‌ಡೌನ್‌ ನಡುವೆಯೇ ನವಜಾತ ಶಿಶುವೊಂದನ್ನು ಸೂರತ್‌ನಿಂದ ಖಾಸಗಿ ವಿಮಾನದ ಮೂಲಕ ವೈದ್ಯರು ಬೆಳಗಾವಿಗೆ ಕರೆತಂದಿರುವ ಘಟನೆ ಬುಧವಾರ ನಡೆದಿದೆ.

ಗುಜರಾತ್‌ನ ಸೂರತ್‌ನಿಂದ ತಂದ ಶಿಶುವನ್ನು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿದ ಬಳಿಕ ಬೆಳಗಾವಿ ದಂಪತಿಗೆ ಹಸ್ತಾಂತರಿಸಲಾಯಿತು. ನವಜಾತ ಶಿಶುವನ್ನು ಸೂರತ್‌ನಿಂದ ಸರಾಯಾ ಏವಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ಗೆ ಸೇರಿದ ಖಾಸಗಿ ವಿಮಾನದ ಮೂಲಕ ಮಂಗಳವಾರ ಮಧ್ಯಾಹ್ನ 3.55ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಬಳಿಕ ಅಲ್ಲಿಂದ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ, ಶಿಶುವಿನ ಆರೋಗ್ಯ ತಪಾಸಣೆ ನಡೆಸಿದ ಬಳಿಕ ದಂಪತಿಗೆ ಹಸ್ತಾಂತರಿಸಲಾಯಿತು. ಖಾಸಗಿ ವಿಮಾನ ಮುಂಬೈಗೆ ವಾಪಸಾಯಿತು.

ಕಾಪಾಡು ಭಗವಂತ: ಕೊರೋನಾ ನಿಗ್ರಹಕ್ಕೆ ದೇವರ ಕುದುರೆ ಮೊರೆ!

ಶಿಶು ಏಕೆ ತಂದಿದ್ದು?:

ಬೆಳಗಾವಿಯ ಉದ್ಯಮಿಯೊಬ್ಬರು ಪ್ರನಾಳ ಶಿಶು ಇದಾಗಿದೆ. ಸೂರತ್‌ನಲ್ಲಿ ಈ ಪ್ರನಾಳ ಶಿಶುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದರು. ಆ ಶಿಶುವನ್ನು ಪಡೆಯಲೆಂದೇ ಬೆಳಗಾವಿ ಉದ್ಯಮಿಯೊಬ್ಬರು ಸೂರತ್‌ನಿಂದ ಸರಾಯಾ ಏವಿಯೇಷನ್‌ ಪ್ರೈವೇಟ್‌ ಲಿ. ಗೆ ಸೇರಿದ ಖಾಸಗಿ ವಿಮಾನದ ಮೂಲಕ ಬೆಳಗಾವಿಗೆ ತರಿಸಿಕೊಂಡಿದ್ದಾರೆ. ಹೀಗಾಗಿ ಶಿಶು ಕೊಡಲು ಸೂರತ್‌ನಿಂದ ಈ ವಿಶೇಷ ವಿಮಾನ ಬಂದಿತ್ತು ಎಂದು ಮೂಲಗಳು ತಿಳಿಸಿವೆ.

 

PREV
click me!

Recommended Stories

ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!
Discover Koppal: ವಿಶ್ವದ ಗಮನ ಸೆಳೆಯಲಿದೆ ಹಿರೇಬೆಣಕಲ್: ಡಿಸ್ಕವರ್ ಕೊಪ್ಪಳಕ್ಕೆ ಡಿಸಿ ವಿದ್ಯುಕ್ತ ಚಾಲನೆ