ಕಲಬುರಗಿ ಜಿಲ್ಲೆಯಲ್ಲಿ 8.87 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

By Kannadaprabha News  |  First Published May 26, 2023, 10:06 PM IST

ಮುಂಗಾರು ಹಂಗಾಮಿನಲ್ಲಿ 14,382 ಹೇಕ್ಟೇರ್‌ನಲ್ಲಿ ಏಕದಳ ಧಾನ್ಯಗಳನ್ನು, 6,69,238 ಹೆಕ್ಟೇ​ರ್‌ನಲ್ಲಿ ದ್ವಿದಳ ಧಾನ್ಯಗಳನ್ನು, 58,314 ಹೆಕ್ಟೇ​ರ್‌ನಲ್ಲಿ ಎಣ್ಣೆ ಕಾಳುಗಳನ್ನು ಹಾಗೂ 1,45,080 ಹೆಕ್ಟೇ​ರ್‌​ನ​ಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಬೇಳೆಕಾಳುಗಳ ಅತ್ಯಧಿಕ ಕ್ಷೇತ್ರದಲ್ಲಿ ಆವೃತ್ತಗೊಳ್ಳು ಕಾರಣ ಕಲಬುರಗಿ ಜಿಲ್ಲೆಯು ‘ಬೆಳೆಕಾಳು ಕಣಜ’ ಎಂದು ಪ್ರಸಿದ್ಧಿಯಾಗಿದೆ.


ಕಲಬುರಗಿ(ಮೇ.26):  ಕಲಬುರಗಿ ಜಿಲ್ಲೆಯ ಒಟ್ಟು 8.91 ಲಕ್ಷ ಹೆಕ್ಟೇರ್‌ ನಿವ್ವಳ ಬಿತ್ತನೆ ಕ್ಷೇತ್ರ ಹೊಂದಿದ್ದು, ಮುಂಗಾರು ಹಂಗಾಮಿನಲ್ಲಿ 8.87 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುವ ಗುರಿ ಹೊಂದಲಾಗಿದೆ. ಈ ಪೈಕಿ 1.00 ಲಕ್ಷ ಹೆಕ್ಟೇರ್‌ನಷ್ಟುಮುಂಗಾರು ಬೆಳೆ ನೀರಾವರಿ ಆಶ್ರಯದಲ್ಲಿ ಹಾಗೂ ಖುಷ್ಕಿ ಆಶ್ರಯದಲ್ಲಿ 7.870 ಲಕ್ಷದಷ್ಟು ಬಿತ್ತನೆ ಗುರಿ ಹೊಂದಲಾಗಿದೆ.

ಮುಂಗಾರು ಹಂಗಾಮಿನಲ್ಲಿ 14,382 ಹೇಕ್ಟೇರ್‌ನಲ್ಲಿ ಏಕದಳ ಧಾನ್ಯಗಳನ್ನು, 6,69,238 ಹೆಕ್ಟೇ​ರ್‌ನಲ್ಲಿ ದ್ವಿದಳ ಧಾನ್ಯಗಳನ್ನು, 58,314 ಹೆಕ್ಟೇ​ರ್‌ನಲ್ಲಿ ಎಣ್ಣೆ ಕಾಳುಗಳನ್ನು ಹಾಗೂ 1,45,080 ಹೆಕ್ಟೇ​ರ್‌​ನ​ಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಬೇಳೆಕಾಳುಗಳ ಅತ್ಯಧಿಕ ಕ್ಷೇತ್ರದಲ್ಲಿ ಆವೃತ್ತಗೊಳ್ಳು ಕಾರಣ ಕಲಬುರಗಿ ಜಿಲ್ಲೆಯು ‘ಬೆಳೆಕಾಳು ಕಣಜ’ ಎಂದು ಪ್ರಸಿದ್ಧಿಯಾಗಿದೆ.

Tap to resize

Latest Videos

undefined

VIDEO VIRAL: ಕರೆಂಟ್‌ ಬಿಲ್‌ ಕಟ್ಟಬೇಡಿರೆಂದು ಪಂಚಾಯ್ತಿ ಸದಸ್ಯರಿಂದ್ಲೇ ಅಭಿಯಾನ; ಇಕ್ಕಟ್ಟಿಗೆ ಸಿಲುಕಿರುವ ಕಾಂಗ್ರೆಸ್

ವಿವಿಧ ಮುಂಗಾರು ಬೆಳೆಗಳಿಂದ ಸಮರ್ಪಕವಾದ ಇಳುವರಿ ಪಡೆಯಲು ಬೇಕಿರುವ 76,648 ಮೆಟ್ರಿಕ್‌ ಟನ್‌ ರಸಗೊಬ್ಬರ ಪೈಕಿ ಜಿಲ್ಲೆಯಲ್ಲಿ ಈಗಾಗಲೆ 50,461 ಮೆಟ್ರಿಕ್‌ ಟನ್‌ಗಳಷ್ಟುರಸಗೊಬ್ಬರಗಳ ಪೂರ್ವಭಾವಿ ದಾಸ್ತಾನು ಮಾಡಲಾಗಿರುತ್ತದೆ ಕೃಷಿ ಇಲಾಖೆಯ ಜಂಟಿನಿರ್ದೇಶಕರು ತಿಳಿಸಿದ್ದಾರೆ.

ಡಿಎಪಿ 27,216, ಟನ್‌ ಬೇಡಿಕೆಯಿದ್ದು 19,802 ಟನ್‌ ದಾಸ್ತಾನು ಮಾಡಲಾಗಿದೆ. ಯೂರಿಯಾ 23,653 ಟನ್‌ ಬೇಡಿಕೆಯಿದ್ದು 17,363 ಟನ್‌ ದಾಸ್ತಾನು ಮಾಡಲಾಗಿದೆ. ಕಾಂಪ್ಲೆಕ್ಸ್‌ 21,494 ಟನ್‌ ಬೇಡಿಕೆಯಿದ್ದು, 10,740 ಟನ್‌ ದಾಸ್ತಾನು ಮಾಡಲಾಗಿದೆ. ಎಂ.ಒ.ಪಿ. 2035 ಟನ್‌ ಬೇಡಿಕೆಯಿದ್ದು 238 ಟನ್‌ ದಾಸ್ತಾನು ಮಾಡಲಾಗಿದೆ. ಎಸ್‌.ಎಸ್‌.ಪಿ. 2250 ಟನ್‌ ಬೇಡಿಕೆಯಿದ್ದು 2318 ಟನ್‌ ದಾಸ್ತಾನು ಮಾಡಲಾಗಿದೆ.

ಮಿಡ್‌ನೈಟ್‌ ಮರ್ಡರ್‌ ಕೇಸ್; ಹಂತಕರ ಹೆಡೆಮುರಿ ಕಟ್ಟಿದ ಕಲಬುರಗಿ ಖಾಕಿ!

ಸದರಿ ಗೊಬ್ಬರಗಳನ್ನು ಖಾಸಗಿ ಮಾರಾಟಗಾರರ ಹಾಗೂ ವ್ಯವಸಾಯ ಸೇವ ಸಹಕಾರ ಸಂಘಗಳ ಮೂಲಕ ರೈತರಿಗೆ ಲಭ್ಯಗೊಳಿಸಲಾಗುತ್ತಿದೆ. ಮುಂಗಾರು ಹಂಗಾಮಿಗಾಗಿ ಬೀಜ ಬದಲಿಕೆ ಆಧಾರದ ಮೇಲೆ 27,865 ಕ್ವಿಂಟಲ್‌​ನಷ್ಟುವಿವಿಧ ಬೀಜಗಳ ಬೇಡಿಕೆ ಇದೆ.

ಈಗಾಗಲೆ 27,865 ಕ್ವಿಂಟಲ್‌ನಷ್ಟು ಪ್ರಮಾಣಿತ ಬೀಜಗಳನ್ನು ವಿತರಣೆಗಾಗಿ ದಾಸ್ತಾನನ್ನು ಸಿದ್ದಪಡಿಸಿಕ್ಕೊಳ್ಳಲಾಗಿದ್ದು, ಜಿಲ್ಲೆಯ 32 ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು 7 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳ ಮುಖಾಂತರ ರಿಯಾಯ್ತಿದರದಲ್ಲಿ ರೈತರಿಗೆ ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!