
ಹುಬ್ಬಳ್ಳಿ (ನ.25): ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಹೊಸಪೇಟೆ–ಅರಸೀಕೆರೆ–ಹೊಸಪೇಟೆ ನಡುವಿನ ಕಾಯ್ದಿರಿಸದ (Unreserved) ಡೆಮು ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಲು ನೈಋತ್ಯ ರೈಲ್ವೆ (SWR) ನಿರ್ಧರಿಸಿದೆ.
ರೈಲು ಸಂಖ್ಯೆ 07343 (ಹೊಸಪೇಟೆ–ಅರಸೀಕೆರೆ) ಮತ್ತು ರೈಲು ಸಂಖ್ಯೆ 07344 (ಅರಸೀಕೆರೆ–ಹೊಸಪೇಟೆ) ಡೆಮು ವಿಶೇಷ ರೈಲುಗಳು ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಪ್ರತಿ ವಾರದ ಸೋಮವಾರದಿಂದ ಶುಕ್ರವಾರದವರೆಗೆ ಸಂಚರಿಸಲಿವೆ.
ಈ ಹಿಂದೆ ಈ ರೈಲುಗಳ ಸಂಚಾರವನ್ನು 27.11.2026ರವರೆಗೆ ಮಾತ್ರ ಸೂಚಿಸಲಾಗಿತ್ತು. ಇದೀಗ ಈ ಸೇವೆಯನ್ನು 30.11.2026 ರಿಂದ 29.01.2027ರವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ, ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.
ಹೊಸಪೇಟೆ ಮತ್ತು ಅರಸೀಕೆರೆ ಮಾರ್ಗದಲ್ಲಿ ಸಂಚರಿಸುವ ದೈನಂದಿನ ಪ್ರಯಾಣಿಕರು ಮತ್ತು ಸಾರ್ವಜನಿಕರು ಈ ವಿಸ್ತರಿತ ವಿಶೇಷ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆ ಕೋರಿದೆ.
ಹೊಸಪೇಟೆ ಜಂಕ್ಷನ್ (HPT): ಹೊರಡುವ ಸಮಯ — 06:30
ತುಂಗಭದ್ರಾ ಡ್ಯಾಮ್ (TBDM): ಆಗಮನ 06:37 / ನಿರ್ಗಮನ 06:38
ವ್ಯಾಸನಕೆರೆ (VYS): ಆಗಮನ 06:47 / ನಿರ್ಗಮನ 06:48
ವ್ಯಾಸ ಕಾಲೋನಿ (VC): ಆಗಮನ 06:57 / ನಿರ್ಗಮನ 06:58
ಮರಿಯಮ್ಮನಹಳ್ಳಿ (MMI): ಆಗಮನ 07:07 / ನಿರ್ಗಮನ 07:08
ಹಂಪಾಪಟ್ಟಣ (HPM): ಆಗಮನ 07:24 / ನಿರ್ಗಮನ 07:25
ಹಗರಿಬೊಮ್ಮನಹಳ್ಳಿ (HBI): ಆಗಮನ 07:39 / ನಿರ್ಗಮನ 07:40
ಕೊಟ್ಟೂರು (KTY): ಆಗಮನ 08:33 / ನಿರ್ಗಮನ 08:35
ಬೆಣ್ಣೆಹಳ್ಳಿ (BEHI): ಆಗಮನ 08:43 / ನಿರ್ಗಮನ 08:45
ಹರಪನಹಳ್ಳಿ (HPHI): ಆಗಮನ 08:59 / ನಿರ್ಗಮನ 09:00
ತೆಲಿಗಿ (TLGI): ಆಗಮನ 09:16 / ನಿರ್ಗಮನ 09:17
ಅಮರಾವತಿ ಕಾಲೋನಿ (AVC): ಆಗಮನ 09:36 / ನಿರ್ಗಮನ 09:38
ದಾವಣಗೆರೆ (DVG): ಆಗಮನ 09:55 / ನಿರ್ಗಮನ 09:57
ತೊಳಹುಣಸೆ (THN): ಆಗಮನ 10:08 / ನಿರ್ಗಮನ 10:09
ಹನುಮನಹಳ್ಳಿ (HNH): ಆಗಮನ 10:13 / ನಿರ್ಗಮನ 10:14
ಕೊಡಗನೂರು (KAG): ಆಗಮನ 10:23 / ನಿರ್ಗಮನ 10:24
ಮಾಯಕೊಂಡ (MYK): ಆಗಮನ 10:31 / ನಿರ್ಗಮನ 10:32
ಚಿಕ್ಕಜಾಜೂರು ಜಂಕ್ಷನ್ (JRU): ಆಗಮನ 10:50 / ನಿರ್ಗಮನ 10:55
ಹೊಳಲ್ಕೆರೆ (HLK): ಆಗಮನ 11:05 / ನಿರ್ಗಮನ 11:06
ನುಲೇನೂರು (NLNR): ಆಗಮನ 11:09 / ನಿರ್ಗಮನ 11:10
ರಾಮಗಿರಿ (RGI): ಆಗಮನ 11:16 / ನಿರ್ಗಮನ 11:17
ಹೊಸದುರ್ಗ ರೋಡ್ (HSD): ಆಗಮನ 11:29 / ನಿರ್ಗಮನ 11:30
ಶಿವನಿ (SHV): ಆಗಮನ 11:40 / ನಿರ್ಗಮನ 11:41
ಅಜ್ಜಂಪುರ (AJP): ಆಗಮನ 11:51 / ನಿರ್ಗಮನ 11:52
ಬೀರೂರು ಜಂಕ್ಷನ್ (RRB): ಆಗಮನ 12:09 / ನಿರ್ಗಮನ 12:11
ಕಡೂರು (DRU): ಆಗಮನ 12:21 / ನಿರ್ಗಮನ 12:22
ದೇವನೂರು (VNR): ಆಗಮನ 12:43 / ನಿರ್ಗಮನ 12:44
ಬಾಣಾವರ (BVR): ಆಗಮನ 12:53 / ನಿರ್ಗಮನ 12:54
ಅರಸೀಕೆರೆ ಜಂಕ್ಷನ್ (ASK): ತಲುಪುವ ಸಮಯ — 14:20
ಅರಸೀಕೆರೆ ಜಂಕ್ಷನ್ (ASK)ನಿಂದ ಮಧ್ಯಾಹ್ನ 2:30ಕ್ಕೆ ಹೊರಡುವ ರೈಲು ರಾತ್ರಿ 9.30ಕ್ಕೆ ಹೊಸಪೇಟೆಯನ್ನು ತಲುಪಲಿದೆ. ಈ ರೈಲನ್ನು ಬಳಕೆ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ರೈಲು ಸಂಚಾರದ ದಿನಗಳನ್ನು ಹೆಚ್ಚುವರಿಯಾಗಿ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.