ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಸೈಟ್ ಹಗರಣ ಆರೋಪ; ದೂರು ಕೊಟ್ಟ ಲಕ್ಷ್ಮೀನಾರಾಯಣ!

Published : Nov 25, 2026, 05:01 PM IST
Siddaramaiah 2G category site Lakshminarayana

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮವಾಗಿ ಎರಡು ಜಿ ಕೆಟಗರಿ ಸೈಟ್ ಪಡೆದಿದ್ದಾರೆ ಎಂದು ಮಾಜಿ ಕೌನ್ಸಿಲರ್ ಲಕ್ಷ್ಮೀನಾರಾಯಣ ಅವರು ಸ್ಪೀಕರ್‌ಗೆ ದೂರು ನೀಡಿದ್ದಾರೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಸೈಟ್ ಪಡೆದಿರುವ ಬಗ್ಗೆ ದಾಖಲೆಗಳಿದ್ದು, ಕ್ರಮ ಕೈಗೊಳ್ಳದಿದ್ದರೆ ರಾಜ್ಯಪಾಲರಿಗೆ ದೂರು ನೀಡುವ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು (ನ.25): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮವಾಗಿ ಎರಡು 'ಜಿ' (G) ಕೆಟಗರಿ ಸೈಟ್ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಾಜಿ ಕೌನ್ಸಿಲರ್ ಲಕ್ಷ್ಮೀನಾರಾಯಣ ಅವರು ವಿಧಾನಸಭಾ ಸ್ಪೀಕರ್ ಅವರಿಗೆ ದೂರು ಸಲ್ಲಿಸಿದ್ದಾರೆ.

ದೂರು ನೀಡಿದ ಬಳಿಕ ಲಕ್ಷ್ಮೀನಾರಾಯಣ ಹೇಳಿಕೆ:

ದೂರು ನೀಡಿದ ಬಳಿಕ ಮಾತನಾಡಿದ ದೂರುದಾರ ಲಕ್ಷ್ಮೀನಾರಾಯಣ, "ಸಿದ್ದರಾಮಯ್ಯ ಅವರು ಅಕ್ರಮವಾಗಿ ಎರಡು ಜಿ ಕೆಟಗರಿ ಸೈಟ್ ಪಡೆದಿದ್ದಾರೆ. 1984ರಲ್ಲಿ ಮೈಸೂರಿನಲ್ಲಿ ಮೊದಲು ಜಿ ಕೆಟಗರಿ ಸೈಟ್ ಪಡೆದಿದ್ದರು. ಬಳಿಕ ಅದನ್ನು ಮುಚ್ಚಿಟ್ಟು 1992ರಲ್ಲಿ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಜಿ ಕೆಟಗರಿ ಸೈಟ್ ಪಡೆದಿದ್ದಾರೆ. 2 ಬಾರಿ ಮುಖ್ಯಮಂತ್ರಿಯಾಗಿದ್ದವರು ಹೀಗೆ ಮಾಡುವುದು ಸರಿಯಲ್ಲ" ಎಂದು ಆರೋಪಿಸಿದ್ದಾರೆ.

ರಾಜ್ಯಪಾಲರಿಗೆ ದೂರು ನೀಡುವ ಎಚ್ಚರಿಕೆ:

"ಈಗಾಗಲೇ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಂದು ಮತ್ತೊಮ್ಮೆ ದೂರು ನೀಡಲಾಗಿದೆ. ಕಾನೂನು ಅಭಿಪ್ರಾಯಕ್ಕೆ ಕಳಿಸಿದ್ದೇವೆ ಎಂದು ಕಾರ್ಯದರ್ಶಿಗಳು ಹೇಳುತ್ತಾರೆ. ನಮ್ಮ ಬಳಿ ಎಲ್ಲಾ ದಾಖಲಾತಿಗಳು ಇವೆ. ಸ್ಪೀಕರ್ ಕ್ರಮ ತೆಗೆದುಕೊಳ್ಳದೇ ಹೋದರೆ ರಾಜ್ಯಪಾಲರಿಗೆ ದೂರು ನೀಡುತ್ತೇವೆ" ಎಂದು ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

ಮುಡಾ ಸೈಟ್ ಪ್ರಕರಣದ ಹಿನ್ನೆಲೆ:

ಈ ಹಿಂದೆ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟ್ ಅನ್ನು ಅಕ್ರಮವಾಗಿ ತಮ್ಮ ಪತ್ನಿಯ ಹೆಸರಿಗೆ ಮಾಡಿಕೊಳ್ಳಲಾಗಿದೆ ಮತ್ತು ಮುಡಾ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಸೈಟ್ ಪಡೆದ ವಿಚಾರದಲ್ಲಿ ತಮ್ಮ ತಪ್ಪಿಲ್ಲ, ನಿಯಮ ಉಲ್ಲಂಘನೆಯಾಗಿರುವುದು ಅಧಿಕಾರಿಗಳಿಂದ; ತಮಗೆ ನೀಡಿರುವ ಸೈಟ್‌ಗಳನ್ನು ವಾಪಸ್ ತೆಗೆದುಕೊಳ್ಳಿ ಎಂದು ಪ್ರಾಧಿಕಾರಕ್ಕೆ ಮರಳಿಸಿದ್ದರು. ಇದರ ಬೆನ್ನಲ್ಲೇ ಮುಡಾ ಆರೋಪದಿಂದ ಮುಕ್ತರಾಗಿದ್ದರು. ಇದೀಗ ಬೆಂಗಳೂರಿನಲ್ಲಿ ಎರಡು ಜಿ ಕೆಟಗರಿ ಸೈಟ್ ವಿಚಾರವಾಗಿ ಹೊಸ ಆರೋಪ ಎದುರಾಗಿದೆ.

PREV
Read more Articles on
click me!

Recommended Stories

Chitradurga: ಒಡಹುಟ್ಟಿದ ಅಣ್ಣ-ತಂಗಿಗೆ ಪ್ರಾಂಶುಪಾಲ ಪಟ್ಟ; ಒಂದೇ ದಿನ, 2 ಕಾಲೇಜುಗಳ ಚುಕ್ಕಾಣಿ!
ರೆನೈಸಾನ್ಸ್ ಬೆಂಗಳೂರು ರೇಸ್ ಕೋರ್ಸ್ ಹೋಟೆಲ್‌ಗೆ ನಷ್ಟ ತಡೆಗಟ್ಟುವಿಕೆ ನಿರ್ದೇಶಕರಾಗಿ ಸಚಿನ್ ಸಂದು ಜಾಧವ್ ನೇಮಕ