ಧ್ವನಿ ಮತ್ತು ಬೆಳಕು ಕಾರ್ಯಕ್ರಮ; ತ್ರಿವರ್ಣ ಬಣ್ಣದಲ್ಲಿ ಕಂಗೊಳಿಸಿದ ಹಂಪಿ

Published : Nov 02, 2022, 09:04 PM IST
ಧ್ವನಿ ಮತ್ತು ಬೆಳಕು ಕಾರ್ಯಕ್ರಮ; ತ್ರಿವರ್ಣ ಬಣ್ಣದಲ್ಲಿ ಕಂಗೊಳಿಸಿದ ಹಂಪಿ

ಸಾರಾಂಶ

ವಿಜಯನಗರ ಜಿಲ್ಲಾಡಳಿತ, ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಇಲ್ಲಿನ ಐತಿಹಾಸಿಕ ಹಂಪಿ ಸ್ಮಾರಕಗಳಿಗೆ ಮಾಡಿರುವ ದೀಪಾಲಂಕಾರ ಮತ್ತು ಧ್ವನಿ ಬೆಳಕಿನ ಕಾರ್ಯಕ್ರಮಕ್ಕೆ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಸಾಹೇಬ್ ಜೊಲ್ಲೆ ಮಂಗಳವಾರ ಚಾಲನೆ ನೀಡಿದರು.

ವಿಜಯನಗರ (ನ.2): ವಿಜಯನಗರ ಜಿಲ್ಲಾಡಳಿತ, ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಇಲ್ಲಿನ ಐತಿಹಾಸಿಕ ಹಂಪಿ ಸ್ಮಾರಕಗಳಿಗೆ ಮಾಡಿರುವ ದೀಪಾಲಂಕಾರ ಮತ್ತು ಧ್ವನಿ ಬೆಳಕಿನ ಕಾರ್ಯಕ್ರಮಕ್ಕೆ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಸಾಹೇಬ್ ಜೊಲ್ಲೆ ಮಂಗಳವಾರ ಚಾಲನೆ ನೀಡಿದರು.

ವಿಜಯನಗರ: ಹಂಪಿಯಲ್ಲಿ ಭಾರಿ ವಾಹನಗಳಿಗಿಲ್ಲ ಲಗಾಮು!

ಹಂಪಿ ಎದುರು ಬಸವಣ್ಣ ಮಂಟಪದಲ್ಲಿ ಆಯೋಜಿಸಿರುವ ಪಂಪಾ ವಿರೂಪಾಕ್ಷೇಶ್ವರನ ಧಾರ್ಮಿಕ ಹಿನ್ನೆಲೆ ಮತ್ತು ಸುಗ್ರೀವನ ವೃತ್ತಾಂತ ಕುರಿತ 19 ನಿಮಿಷಗಳ ಧ್ವನಿ ಬೆಳಕಿನ ಕಾರ್ಯಕ್ರಮವನ್ನು ಎರಡು ವೇದಿಕೆಗಳಲ್ಲಿ ಪ್ರದರ್ಶಿಸಲಾಯಿತು. ಧ್ವನಿ ಬೆಳಕಿನ ಕಾರ್ಯಕ್ರಮದ ಕುರಿತು ಮಾತನಾಡಿದ ಸಚಿವರು ಇಲ್ಲಿನ ಧ್ವನಿ ಬೆಳಕಿನ ಕಾರ್ಯಕ್ರಮ ಹತ್ತಾರು ಇತಿಹಾಸ ಸಾರುವ  ಪುಸ್ತಕಗಳಿಗೆ ಸಮವಾಗಿದೆ. ವಿದ್ಯಾರ್ಥಿಗಳು ಪುಸ್ತಕದ ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ವಿಕ್ಷಿಸಬೇಕು. ಅತ್ಯಂತ ಸುಂದರವಾಗಿ ಕಥಾ ಹಂದರವನ್ನು ಧ್ವನಿ-ಬೆಳಕಿನಲ್ಲಿ ಸಂಯೋಜಿಸಲಾಗಿದೆ ಎಂದು ತಿಳಿಸಿದರು. 

ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಮಾತನಾಡಿ, ಮೊದಲ ಹಂತದಲ್ಲಿ ಹಂಪಾ ವಿರೂಪಾಕ್ಷೇಶ್ವರ ಮತ್ತು ವಾಲಿ ಸುಗ್ರೀವನ ಕುರಿತು ಚಿತ್ರಿಸಲಾಗಿದೆ. ಇದೇ ಸಂಪನ್ಮೂಲವನ್ನು ಬಳಸಿಕೊಂಡು ಹಂಪಿಯ ಸಮಗ್ರ ಇತಿಹಾಸವನ್ನು ಸಾರುವಂತೆ 10-20 ನಿಮಿಷಗಳ ಹತ್ತಾರು ತುಣುಕುಗಳನ್ನು ಮಾಡಿ ಪ್ರದರ್ಶಿಸುವುದರಿಂದ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗುತ್ತದೆ. ಅಲ್ಲದೇ, ಬಿಸಿಲಲ್ಲಿ ಸುತ್ತಾಡಿ ಸ್ಮಾರಕಗಳನ್ನು ವೀಕ್ಷಿಸುವುದರ ಜೊತೆಗೆ ರಾತ್ರಿಯಲ್ಲಿ ಧ್ವನಿ-ಬೆಳಕಿನಲ್ಲಿ ಹಂಪಿಯ ಇತಿಹಾಸ ಸವಿಯುವುದನ್ನೇ ಹಂಪಿ ಬೈ ನೈಟ್ ಎನ್ನಲಾಗುತ್ತದೆ ಎಂದರು.

ಹಂಪಿ ಪ್ರದೇಶದ ಒಟ್ಟು 16 ಸ್ಮಾರಕಗಳಿಗೆ ದೀಪಾಲಂಕಾರ, 2 ಸ್ಮಾರಕಗಳಿಗೆ ಆಡಿಯೋ ಮತ್ತು ಡೈನಮಿಕ್ ದೀಪಾಲಂಕಾರ ಹಾಗೂ 2 ಸ್ಮಾಕರಗಳಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಸೇರಿದಂತೆ ಒಟ್ಟು 20 ಸ್ಮಾರಕಗಳ ದೀಪಾಲಂಕಾರ ಮಾಡಲಾಗಿತ್ತು. ದೀಪಗಳ ಅಲಂಕಾರ ಮಾಡಿರುವುದನ್ನು ವೀಕ್ಷಿಸುವುದರಿಂದ ಪ್ರವಾಸಿಗರಿಗೆ ಬಹುಕಾಲದವರೆಗೆ ಅವರ ನೆನಪಿನಲ್ಲಿರುತ್ತದೆ ಎಂದು ಹೇಳಿದರು.

2010ರಿಂದ ಈ ಯೋಜನೆ ಜಾರಿಗೆ ತುರುವುದರ ಬಗ್ಗೆ ಚಿಂತನೆ ನಡೆದಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡತ್ತಾ ಬರಲಾಗಿ ಈಗ ಜಾರಿಗೆ ತರಲಾಗುತ್ತಿದೆ. ಈ ಯೋಜನೆಗೆ ಬೇಕಾದ ಅಗತ್ಯ ಅನುದಾನವನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.

ಹಂಪಿಯ ಸ್ಮಾರಕಗಳಲ್ಲಿ ಕಣ್ಮನ ಸೆಳೆಯುವ ತ್ರಿವರ್ಣ ಬೆಳಕಿನ ಚಿತ್ತಾರ

ಈ ಸಂದರ್ಭದಲ್ಲಿ ಇನ್ನೋವೇಟಿವ್ ಲೈಟಿಂಗ್ ಸಂಸ್ಥೆಯ ನಿರ್ದೇಶಕ ಟಿ.ಎಸ್.ನಾಗಾಭರಣ, ಮುಖ್ಯಸ್ಥ ಕೃಷ್ಣಕುಮಾರ, ಫಿನ್‍ಲೆಂಡ್ ರಾಯಭಾರಿ ರಿತ್ವಾಕ್‍ಕುರೊಂಡೆ, ಜಿಲ್ಲಾಧಿಕಾರಿ ಅನಿರುದ್ ಶ್ರವಣ್, ಎಸ್ಪಿ ಡಾ.ಅರುಣ್ ಕೆ ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜೀತ್ ಮೆಹತಾ, ಡಿ.ವೈ.ಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಹಂಪಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಹಂಪಮ್ಮ, ಕಮಲಾಪುರ ಗ್ರಾ.ಪಂ. ಅಧ್ಯಕ್ಷ ಸೈಯದ್ ಅಮಾನುಲ್ಲಾ ಸೇರಿದಂತೆ ಇತರರು ಇದ್ದರು.

PREV
Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು