
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ನ.02): ನಿನ್ನೆಯಷ್ಟೇ ಗುಮ್ಮಟನಗರಿ ವಿಜಯಪುರದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಿಸಲಾಯ್ತು. ಇಂದು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ, ಭಾರತ ಸ್ವಾತಂತ್ರ್ಯಕ್ಕಾಗಿ ಜೀವವನ್ನೆ ಮುಡಿಪಾಗಿಟ್ಟ ಉತ್ತರ ಕರ್ನಾಟಕದ ಕ್ರಾಂತಿಯೋಗಿ ಮಹಾದೇವರ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಲಾಯಿತು.
ಕ್ರಾಂತಿಯೋಗಿಯ ಜನ್ಮದಿನೋತ್ಸವ: ನವೆಂಬರ್ 1 ಕರ್ನಾಟಕ ಏಕೀಕರಣವಾದ ದಿನ, ನವೆಂಬರ್ 2 ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಇಂಚಗೇರಿ ಮಠದ ಕ್ರಾಂತಿಯೋಗಿ ಮಹಾದೇವರ ಜನ್ಮದಿನ. ಹೌದು, ಭಾರತ ಸ್ವಾತಂತ್ರ್ಯದ ಜೊತೆಗೆ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನ ಒಂದಾಗಿಸಲು ಹೋರಾಡಿದ ಕ್ರಾಂತಿಕಾರಿ ಮಾಧವಾನಂದ ಪ್ರಭುಜಿಗಳ ಜನ್ಮದಿನವನ್ನ ಲಕ್ಷಾಂತರ ಅನುಯಾಯಿಗಳು ವಿಜೃಂಬನೆಯಿಂದ ಆಚರಿಸಿದರು. ಪ್ರತಿ ವರ್ಷ ಮಹಾದೇವರು ಜನಿಸಿದ ವಾಣಿಜ್ಯ ನಗರಿ ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ನಡೆಯುತ್ತಿದ್ದ ಜನ್ಮದಿನಾಚರಣೆಯನ್ನ ಈ ಬಾರಿ ಅವರ ಗದ್ದುಗೆ ಇರುವ, ಅವರು ಆಧ್ಯಾತ್ಮದಲ್ಲಿ ಮುಳುಗಿದ್ದ ಇಂಚಗೇರಿ ಮಠದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗದ ಯಡಿಯೂರಪ್ಪ ವಿರುದ್ಧ ಗುಡುಗಿದ ಯತ್ನಾಳ್..!
ತೊಟ್ಟಿಲು ಕಟ್ಟಿ ಹೆಸರಿಟ್ಟು ಹುಟ್ಟುಹಬ್ಬದ ಆಚರಣೆ: ಇಂಚಗೇರಿ ಮಠದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ತೊಟ್ಟಿಲು ಕಟ್ಟಿ ಮಹಾದೇವರ ಹೆಸರಿಡುವ ಮೂಲಕ ನಮ್ಮ ಸಂಸ್ಕೃತಿಯಂತೆ ಹುಟ್ಟುಹಬ್ಬದ ಆಚರಣೆ ನಡೆಯಿತು. ಸುಮಂಗಲೆಯರು, ಮಠದ ಭಕ್ತರು ಸೇರಿ ಮಹಾದೇವರ ಜನ್ಮದಿನವನ್ನ ಸಂಭ್ರಮಿಸಿದರು. ಇದಕ್ಕು ಮೊದಲು ಇಂಚಗೇರಿ ಗ್ರಾಮದ ಎಲ್ಲೆಡೆ ಮಹಾದೇವರ ಪೋಟೊ, ಮೂರ್ತಿ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಕರಡಿ ಮಜಲು, ಹಲಗೆ ಸೇರಿದಂತೆ ಕೇಸರಿ ಧ್ವಜ ಹಿಡಿದಿದ್ದ ಸಾವಿರಾರು ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇಂಚಗೇರಿ ಗ್ರಾಮ ಪಂಚಾಯ್ತಿಯಿಂದ ಮಠದ ಆವರಣದ ವರೆಗು ಅದ್ದೂರಿಯಾಗಿ ಮೆರವಣಿಗೆ ಸಾಗಿತು.
ಗಾಂಧೀಜಿ ಹುಟ್ಟಿದ್ದು ಅ.1, ದೇವರು ಜನಿಸಿದ್ದು ನ.2: ವಿಶೇಷ ಅಂದ್ರೆ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧಿಜೀ ಹುಟ್ಟಿದ್ದು ಅಕ್ಟೋಬರ್ 2ರಂದು, ಭಾರತ ಸ್ವಾತಂತ್ರ್ಯಕ್ಕಾಗಿ ಉತ್ತರ ಕರ್ನಾಟಕ, ಮಹಾರಾಷ್ಟ್ರ ಗಡಿಯಲ್ಲಿ ಉಗ್ರವಾಗಿ ಹೋರಾಡಿದ ಮಾಧವಾನಂದ ಪ್ರಭುಜಿಗಳು ಹುಟ್ಟಿದ್ದು ನವೆಂಬರ್ 2ರಂದು. ಕಾಕತಾಳೀಯ ಅಂದ್ರೆ ನವೆಂಬರ್ 1 ಕರ್ನಾಟಕ ಏಕೀಕರಣವಾದ ದಿನವಾದ್ರೆ, ಅದೇ ಏಕೀಕರಣಕ್ಕಾಗಿ ಹುಟ್ಟಿದ ಮಹಾದೇವರು ನವೆಂಬರ್ 2 ರಂದು ಜನಿಸಿದ್ದರು ಅನ್ನೋದು.
ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತಸಮೂಹ: ಮಾಧವಾನಂದ ಪ್ರಭುಜಿಗಳ ಜನ್ಮದಿನೋತ್ಸವದ ಅಂಗವಾಗಿ ಹುಬ್ಬಳ್ಳಿ, ಕಲಬುರ್ಗಿ ಸೇರಿದಂತೆ ಮಹಾರಾಷ್ಟ್ರ ಭಾಗಗಳಿಂದಲು ಭಕ್ತರು ಪಾದಯಾತ್ರೆ ಮೂಲಕ ಇಂಚಗೇರಿಗೆ ಆಗಮಿಸಿದರು. ಅಕ್ಟೋಬರ್ 2 ಗಾಂಧಿ ಜಯಂತಿಯಿಂದ ನವೆಂಬರ್ 2 ಮಾಧವಾನಂದ ಪ್ರಭುಜಿಗಳ ಜಯಂತಿವರೆಗೆ ಒಂದು ತಿಂಗಳ ಕಾಲ ಪಾದಯಾತ್ರೆ ಮೂಲಕ ಭಕ್ತರು ಇಂಚಗೇರಿ ಮಠಕ್ಕೆ ಆಗಮಿಸಿದ್ದು ಕೂಡ ವಿಶೇಷವಾಗಿತ್ತು.
ಗಾಂಧಿಜೀ, ಸುಭಾಷಚಂದ್ರ ಭೋಸ್ ಜೊತೆಗೆ ನಿಕಟ ನಂಟು: ತಮ್ಮ 15ನೇ ವಯಸ್ಸಿನಲ್ಲೆ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದ ಮಾಧವಾನಂದ ಪ್ರಭುಜಿಗಳು ಮಹಾರಾಷ್ಟ್ರ ಗಡಿ ಹಾಗೂ ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ವಿಜಯಪುರ-ಬಾಗಲಕೋಟೆ, ಯಾದಗಿರಿ, ಕಲಬುರ್ಗಿ, ಕೊಪ್ಪಳ, ದಾವಣಗೇರೆ ಸೇರಿದಂತೆ ಹಲವೆಡೆ ಅತ್ಯುಗ್ರವಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಬೆಳಗಾವಿ ಜಿಲ್ಲೆಯ ಕೊಟ್ಟಲಗಿ, ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಸೋನ್ಯಾಳ ಗ್ರಾಮದಲ್ಲಿ ಬಂದೂಕು ಕಾರ್ಖಾನೆ ತೆರೆದು ಬ್ರೀಟಿಷರನ್ನ ಬೆಚ್ಚಿ ಬೀಳಿಸಿದ್ದರು. ಇವ್ರ ಉಗ್ರ ಹೋರಾಟ ಕಂಡ ಸುಭಾಷಚಂದ್ರ ಭೋಸರು ಹುಬ್ಬಳ್ಳಿಯ ಗಿರೀಶ್ ಆಶ್ರಮದಲ್ಲಿ ಮಾಧವಾನಂದ ಪ್ರಭುಜುಗಳ ಜೊತೆಗೆ ಗುಪ್ತ ಸಭೆ ನಡೆಸಿದ್ದರು. ಮುಂದೆ ಗಾಂಧಿಜೀಯವರ ಅಹಿಂಸಾ ಚಳುವಳಿಗೆ ಬೆಂಬಲಿಸಿದ್ದ ಮಾಧವಾನಂದ ಪ್ರಭುಜಿಗಳು ಬಂದೂಕು, ಮದ್ದು-ಗುಂಡುಗಳ ಬಿಟ್ಟು ಶಾಂತಿಯುತ ಹೋರಾಟದಲ್ಲು ಮುಂಚುನಿಯಲ್ಲಿದ್ದರು. ಆಗ ಗಾಂಧಿಜೀಯವರ ಜೊತೆಗು ಉತ್ತಮ ಭಾಂದವ್ಯ ಹೊಂದಿದ್ದರು.
Vijayapura: ಬಾಲಾಜಿ ಸಕ್ಕರೆ ಕಾರ್ಖಾನೆ ವಿರುದ್ಧ ರೊಚ್ಚಿಗೆದ್ದ ರೈತರು: ಕಲ್ಲೆಸೆತ
ಗೋವುಗಳ ಉಳುವಿಗಾಗಿ ದೇವರ ಹೋರಾಟ: ಗೋವುಗಳ ಮೇಲೆ ಅಪಾರ ಭಕ್ತಿ ಪ್ರೀತಿಯನ್ನ ಹೊಂದಿದ್ದ ಮಾಧವಾನಂದ ಪ್ರಭುಜಿಗಳು ಗೋ ಹತ್ಯಾ ಬಂಧಿ ಚಳುವಳಿ ನಡೆಸಿದ್ದರು. ಗೋ ಹತ್ಯೆ ಪಾಪ, ಗೋಹತ್ಯೆ ಮಾಡಿದವರನ್ನ ಬಂಧಿಸಬೇಕು ಎಂದು ಆಗಿನ ಕಾಲದಲ್ಲೆ ಹೋರಾಟ, ಚಳುವಳಿ, ಪಾದಯಾತ್ರೆಗಳನ್ನ ಮಾಡಿದ್ರು ಅನ್ನೋದು ವಿಶೇಷ, ಈಗಲೂ ಇಂಚಗೇರಿ ಮಠದಲ್ಲಿ "ಜೈ ಜಗತ್... ಜೈ ಗೋಮಾತಾ" ಅನ್ನೋ ಘೋಷಣೆಗಳು ಮೊಳಗೋದು ಇದಕ್ಕೆ ತಾಜಾ ಉದಾಹರಣೆ..!
25 ಸಾವಿರ ಅಂತರ್ ಜಾತಿ-ಧರ್ಮಿಯ ವಿವಾಹ: ಮಹಾದೇವರು ತಮ್ಮ ಜೀವಿತಾವಧಿಯಲ್ಲಿ ಜಾತಿ-ಧರ್ಮಗಳ ಸಂಕೋಲೆಯನ್ನ ಕಿತ್ತು ಬಿಸಾಕಿದ್ದರು. ಇಂಚಗೇರಿ ಮಠದಲ್ಲಿ 25ಸಾವಿರಕ್ಕು ಅಧಿಕ ಅಂತರ್ ಧರ್ಮಿಯ, ಅಂತರ್ ಜಾತಿಯ ಮದುವೆಗಳನ್ನ ಮಾಡಿಸಿದ್ದರು. ಸ್ವತಃ ತಮ್ಮ ಮೊಮ್ಮಗಳು ಕಾಳಮ್ಮದೇವಿಯನ್ನ ಮುಸ್ಲಿಂ ಧರ್ಮಿಯ ಆದಮ್ ಅನ್ನೋರಿಗೆ ಮದುವೆ ಮಾಡಿ ಕೊಟ್ಟು ಸೌಹಾರ್ದತೆಗೆ ಸಾಕ್ಷಿರೂಪವಾಗಿದ್ದರು.