ವರದಕ್ಷಿಣೆಗಾಗಿ ಪೆಟ್ರೋಲ್ ಸುರಿದು ಗರ್ಭಿಣಿ ಸೊಸೆಯನ್ನೇ ಕೊಂದ್ರು: ನಾಲ್ವರು ಅರೆಸ್ಟ್

Published : Apr 04, 2026, 08:36 AM IST
Sorba Murder

ಸಾರಾಂಶ

ಹೊಡಬಟ್ಟೆ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಐದು ತಿಂಗಳ ಗರ್ಭಿಣಿ ಸೊಸೆಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿದೆ. ವೃತ್ತಿಯಲ್ಲಿ ನರ್ಸ್ ಆಗಿದ್ದ ಶ್ವೇತಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಈ ಸಂಬಂಧ ಮೃತರ ಅತ್ತೆ, ಮಾವ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ: ವರದಕ್ಷಿಣೆ ಕಿರುಕುಳ ನೀಡಿ ಐದು ತಿಂಗಳ ಗರ್ಭಿಣಿ ಸೊಸೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ ಭೀಕರ ಘಟನೆ ತಾಲೂಕಿನ ಉಳವಿ ಹೋಬಳಿ ಹೊಡಬಟ್ಟೆ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೊರಬ ಠಾಣೆಯ ಪೊಲೀಸರು ಮೃತಳ ಅತ್ತೆ, ಮಾವ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆಯ ವಿವರ

ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದ ನಿವಾಸಿ ನವೀನ್ ಎಂಬುವವರ ಪತ್ನಿ ವೃತ್ತಿಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಶ್ವೇತಾ (30) ಕೊಲೆಯಾದ ದುರ್ದೈವಿ. ಶ್ವೇತಾ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. ಮಾರ್ಚ್ 30ರಂದು ಪತಿ ನವೀನ್ ಮನೆಯಲ್ಲಿ ಶ್ವೇತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ತೀವ್ರವಾಗಿ ಸುಟ್ಟಗಾಯಗಳಾಗಿದ್ದ ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಏಪ್ರಿಲ್ 1 ರಂದು ಶ್ವೇತಾ ಕೊನೆಯುಸಿರೆಳೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳ ಬಂಧನ: ಮೃತ ಶ್ವೇತಾ ಅವರ ಸಾವಿನ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಕ್ಷಿಣೆ ಕಿರುಕುಳ ಮತ್ತು ಹತ್ಯೆ ಆರೋಪದಡಿ ಸೊರಬ ಪೊಲೀಸರು ಸಣ್ಣಪ್ಪ (ಮಾವ), ಜಾನಕಿ (ಅತ್ತೆ), ಹೇಮಂತ್ (ಪತಿ ನವೀನ್ ಅಣ್ಣ), ದಿವ್ಯಾ (ಹೇಮಂತ್ ಪತ್ನಿ) ನಾಲ್ವರನ್ನು ಬಂಧಿಸಿದ್ದಾರೆ.

ಅಂತಿಮ ಸಂಸ್ಕಾರ

ಏಪ್ರಿಲ್ 1ರಂದು ಮೃತಪಟ್ಟ ಶ್ವೇತಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಏಪ್ರಿಲ್ 2ರಂದು ನೆರವೇರಿಸಲಾಯಿತು. ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಉಳವಿ ಗ್ರಾಮದ ಮಂಜಪ್ಪ ಮತ್ತು ನಾಗರತ್ನ ದಂಪತಿ ಪುತ್ರಿಯಾದ ಶ್ವೇತಾ ಉಳವಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಶ್ವೇತಾ 2020ರಲ್ಲಿ ಪೋಷಕರ ಸಮ್ಮತಿಯೊಂದಿಗೆ ಹೊಡಬಟ್ಟೆಯ ನವೀನ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ದಾಂಪತ್ಯಕ್ಕೆ ನಾಲ್ಕು ವರ್ಷದ ಪುಟ್ಟ ಹೆಣ್ಣು ಮಗುವಿದೆ.

ಶ್ವೇತ ಹೊಟ್ಟೆಯಲ್ಲಿದ್ದ 5 ತಿಂಗಳ ಕಂದಮ್ಮ ಮತ್ತು ಅನಾಥವಾದ ಪುಟ್ಟ ಮಗಳ ಭವಿಷ್ಯಕ್ಕೆ ನ್ಯಾಯ ಸಿಗಬೇಕು ಎಂದು ಪೋಷಕರ ಆಗ್ರಹವಾಗಿದೆ. ವರದಕ್ಷಿಣೆಗಾಗಿ ಕಿರುಕುಳ ನೀಡಿ, ಗರ್ಭಿಣಿ ಎಂಬ ಕರುಣೆಯೂ ಇಲ್ಲದೆ ಪೆಟ್ರೋಲ್ ಸುರಿದು ಹತ್ಯೆ ಮಾಡಿರುವುದು ತಾಲೂಕನ್ನು ಬೆಚ್ಚಿಬೀಳಿಸಿದೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕಸ ಗೂಡಿಸುತ್ತಿದ್ದ ಮಹಿಳೆಯ ಮೇಲೆ ಕಾರ್‌ ಹತ್ತಿಸಿದ ಪೇದೆ

ಭಾಲ್ಕಿ: ರಸ್ತೆಯಲ್ಲಿ ಕಸ ಗೂಡಿಸುತ್ತಿದ್ದ ಮಹಿಳೆ ಮೇಲೆ ಕಾರ್ ಹತ್ತಿದ್ದರಿಂದ ಮಹಿಳೆ ಸ್ಥಿತಿ ಗಂಭೀರ ವಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.

ಭಾಲ್ಕಿ ಪಟ್ಟಣದ ಚಿನ್ನದ ಅಂಗಡಿ ಮುಂದೆ ಕಸ ಗುಡಿಸುವಾಗ ವೇಗವಾಗಿ ಬಂದ ಮೆಹಕರ್ ಪೊಲೀಸ್ ಠಾಣೆಯ ಪೇದೆ ಉಮಾಕಾಂತ್ ಎಂಬುವವರು ಚಲಾಯಿಸುತಿದ್ದ ಕಾರು ಕಸ ಗುಡಿಸುತ್ತಿದ್ದ ಜ್ಞಾನಾಬಾಯಿ (55) ಎಂಬ ಮಹಿಳೆ ಮೇಲೆ ಹರಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಸಾಗರದಲ್ಲಿ ಕೆಫೆ ಮಾಲೀಕನಿಂದ ಅಡುಗೆಯವನ ಭೀಕರ ಕೊಲೆ, ಕಾರಿನಲ್ಲಿ ಶವವಿಟ್ಟು ಇಡೀ ದಿನ ಸುತ್ತಾಟ!

ರಸ್ತೆ ಮೇಲೆ ಕಸ ಗುಡಿಸುವ ಮಹಿಳೆ ಮೇಲೆ ಕಾರ ಹತ್ತಿರುವ ದೃಶ್ಯ ಪಕ್ಕದ ಅಂಗಡಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಗೆ ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Shivamogga: ಸತ್ತ ಮೇಲೂ ಬಿಡದ ದ್ವೇಷ: ಸಂಕೇತ್ ಸಮಾಧಿ ಧ್ವಂಸಗೊಳಿಸಿದ ದುಷ್ಕರ್ಮಿಗಳು

PREV
Read more Articles on
click me!

Recommended Stories

ಚಪ್ಪಲಿ ಬಿಟ್ಟು ಬಂದ್ರೆ ಮಾತ್ರ ಚಿಕಿತ್ಸೆ? ಪ್ರಾಥಮಿಕ ಆರೋಗ್ಯ ಕೇಂದ್ರದ ವಿಚಿತ್ರ ನಿಯಮ
Kerala Woman Missing: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ತೆರಳಿದ್ದ ಕೇರಳದ ಯುವತಿ ನಿಗೂಢ ನಾಪತ್ತೆ, ಮುಂದುವರಿದ ಕಾರ್ಯಾಚರಣೆ