ಹೊಸಕೋಟೆಗೆ ನಗರಕ್ಕೆ ಕಾವೇರಿ ನೀರು ಶೀಘ್ರ: ಶಾಸಕ ಶರತ್‌ ಬಚ್ಚೇಗೌಡ

By Kannadaprabha News  |  First Published Jul 10, 2023, 3:30 AM IST

ರಾಜಧಾನಿ ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ನಗರದಕ್ಕೆ ನೀರೊದಗಿಸಲು ಯಾವುದೇ ರೀತಿಯ ನೀರಿನ ಸೆಲೆಗಳಿಲ್ಲ. ಇರುವ ಕೆರೆ ಕುಂಟೆಗಳ ಮೇಲೆ ಅವಲಂಬಿತರಾಗಿರುವ ಪರಿಣಾಮ ಕಾವೇರಿ ನೀರನ್ನು ನಗರಕ್ಕೆ ಒದಗಿಸುವ ದೃಷ್ಠಿಯಿಂದ ಸರ್ಕಾರದ ಗಮನಕ್ಕೆ ತರಲಾಗಿದ್ದು ಸಭೆ ನಡೆಸಿ, ಟಾಸ್ಕ್‌ ಫೋರ್ಸ್‌ ರಚನೆ ಮಾಡಿ ಡಿಪಿಆರ್‌ ಸಿದ್ದತೆ ಮಾಡಲಾಗಿದೆ. ತ್ವರಿತವಾಗಿ ನಗರಕ್ಕೆ 1 ಟಿಎಂಸಿ ನೀರು ಲಭ್ಯವಾಗಲಿದೆ ಎಂದ ಶರತ್‌ ಬಚ್ಚೇಗೌಡ 


ಹೊಸಕೋಟೆ(ಜು.10): ನಗರದ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಲು ನಗರಕ್ಕೆ ಕಾವೇರಿ ನೀರನ್ನು ತರುವ ಉದ್ದೇಶದಿಂದ ಈಗಾಗಲೆ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್‌ ಬಳಿ ಚರ್ಚಿಸಿ ಡಿಪಿಆರ್‌ ಸಹ ಸಿದ್ಧಪಡಿಸಲಾಗಿದ್ದು, ನಗರಕ್ಕೆ 1 ಟಿಎಂಸಿ ನೀರು ಲಭ್ಯವಾಗಲಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು.

ನಗರದ ನಗರಸಭೆ ಆವರಣದಲ್ಲಿ ಕಸ ಸಂಗ್ರಹಣೆಗಾಗಿ ನಾಲ್ಕು ಗೂಡ್ಸ್‌ ಆಟೋಗಳನ್ನು ವೈಯುಕ್ತಿಕವಾಗಿ ಕೊಡುಗೆ ನೀಡಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ನಗರದಕ್ಕೆ ನೀರೊದಗಿಸಲು ಯಾವುದೇ ರೀತಿಯ ನೀರಿನ ಸೆಲೆಗಳಿಲ್ಲ. ಇರುವ ಕೆರೆ ಕುಂಟೆಗಳ ಮೇಲೆ ಅವಲಂಬಿತರಾಗಿರುವ ಪರಿಣಾಮ ಕಾವೇರಿ ನೀರನ್ನು ನಗರಕ್ಕೆ ಒದಗಿಸುವ ದೃಷ್ಠಿಯಿಂದ ಸರ್ಕಾರದ ಗಮನಕ್ಕೆ ತರಲಾಗಿದ್ದು ಸಭೆ ನಡೆಸಿ, ಟಾಸ್ಕ್‌ ಫೋರ್ಸ್‌ ರಚನೆ ಮಾಡಿ ಡಿಪಿಆರ್‌ ಸಿದ್ದತೆ ಮಾಡಲಾಗಿದೆ. ತ್ವರಿತವಾಗಿ ನಗರಕ್ಕೆ 1 ಟಿಎಂಸಿ ನೀರು ಲಭ್ಯವಾಗಲಿದೆ ಎಂದರು.

Tap to resize

Latest Videos

undefined

ಅರ್ಧ ಗಂಟೇಲಿ 13 ರಾಗಿ ಮುದ್ದೆ ಉಂಡ ಬೆಂಗಳೂರು ಗಂಡು: ಒಂದೇ ಊಟಕ್ಕೆ ಟಗರು ಗೆದ್ದುಕೊಂಡು ಬಂದ

ನಗರಸಭೆ ಪೌರಾಯುಕ್ತ ಪ್ರಸಾದ್‌ ರೆಡ್ಡಿ ಮಾತನಾಡಿ, ನಗರದ ಸ್ವಚ್ಚತೆ ದೃಷ್ಠಿಯಿಂದ ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯುತವಾಗಿ ಜೀವಿಸುವುದು ಅತ್ಯಗತ್ಯವಾಗಿದೆ. ಪ್ರಮುಖವಾಗಿ ರಸ್ತೆ ಬದಿಯಲ್ಲಿ ಕಸ ಹಾಕುವುದು. ಪ್ಲಾಸ್ಟಿಕ್‌ ನಿಷೇಧ ಮಾಡಿದ್ದರೂ ಪ್ಲಾಸ್ಟಿಕ್‌ ಬಳಕೆ ಮಾಡುವುದು. ಇದು ಸ್ವಚ್ಚತೆ ವಿರೋಧಿ​ ಕೆಲಸವಾಗಿದೆ. ಆದ್ದರಿಂದ ಇವುಗಳನ್ನು ತಡೆಗಟ್ಟುವ ಕೆಲಸ ಪ್ರತಿಯೊಬ್ಬ ನಾಗರಿಕನಿಂದ ಆಗಬೇಕು. ಸುಂದರ ಹಾಗೂ ಸ್ವಚ್ಚ ನಗರ ನಿರ್ಮಾಣಕ್ಕೆ ನಗರಸಭೆ ಸಿಬ್ಬಂದಿ ಜೊತೆಗೆ ಸಂಪೂರ್ಣ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯಕೇಶವಮೂರ್ತಿ, ಯುವ ಮುಖಂಡ ಭೈರೇಗೌಡ, ಭಾರತೀಯ ಆಹಾರ ನಿಗಮದ ಮಾಜಿ ಸದಸ್ಯ ಡಾ.ವಿ.ವಿ.ಸದಾನಂದ್‌ ಮುಖಂಡರಾದ ರಾಕೇಶ್‌, ಗೋಪಿ, ವಿಜಯ್‌ ಕುಮಾರ್‌, ಸೇರಿದಂತೆ ಹಲವಾರು ಮುಖಂಡರು ಇದ್ದರು.

ನೆನೆಗುದಿಗೆ ಬಿದ್ದಿರುವ ಯುಜಿಡಿಗೆ ಮುಕ್ತಿ

ನಗರದಲ್ಲಿ ಸುಮಾರು 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಗಳಿಗೆ ಇನ್ನು ಆರರಿಂದ 9 ತಿಂಗಳೊಳಗಾಗಿ ಮುಕ್ತಿ ಕೊಡಿಸುವ ಕೆಲಸ ಮಾಡುತ್ತೇನೆ. ಈಗಾಗಲೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರ ಬಳಿ ಚರ್ಚೆ ಮಾಡಲಾಗಿದ್ದು, ಪೆತ್ತನಹಳ್ಳಿ ಹಾಗೂ ಚಿಕ್ಕಕೆರೆ ಅಂಗಳದಲ್ಲಿ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡುವ ಉದ್ಧೇಶದಿಂದ 46 ಕೋಟಿಗೆ ಅನುಮೋದನೆ ಆಗಿದ್ದು, ಅದಕ್ಕೆ ಇನ್ನು 25 ಕೋಟಿ ಹೆಚ್ಚಿನ ಅನುದಾನ ತಂದು ಒಟ್ಟು 70 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಯನ್ನು ಮುಕ್ತಾಯಗೊಳಿಸಿ ಸಮಸ್ಯೆಗೆ ಮುಕ್ತಿಕೊಡಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು.

click me!