ಸುರಪುರ: ಉಪಹಾರ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

By Kannadaprabha News  |  First Published Jul 9, 2023, 10:19 PM IST

ಬೆಳಿಗ್ಗೆ ವಿದ್ಯಾರ್ಥಿಗಳಿಗೆ ವಿತರಿಸಿದ ಉಪ್ಪಿಟ್ಟಿನಲ್ಲಿ ಹಲ್ಲಿ ಸತ್ತು ಬಿದ್ದಿತ್ತು ಎಂದು ಹೇಳಲಾಗುತ್ತಿದೆ. ಸುಮಾರು 200 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆಹಾರವನ್ನು ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ. ಅದರಲ್ಲಿ 4 ರಿಂದ 5 ವಿದ್ಯಾರ್ಥಿಗಳಿಗೆ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. 


ಸುರಪುರ(ಜು.09):  ಸಮೀಪದ ಕೆಂಭಾವಿ ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ಬೆಳಿಗ್ಗೆ ಬಿಸಿಯೂಟ (ಉಪ್ಪಿಟ್ಟು) ಸೇವಿಸಿದ ಅನೇಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ವಿತರಿಸಿದ ಉಪ್ಪಿಟ್ಟಿನಲ್ಲಿ ಹಲ್ಲಿ ಸತ್ತು ಬಿದ್ದಿತ್ತು ಎಂದು ಹೇಳಲಾಗುತ್ತಿದೆ. ಸುಮಾರು 200 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆಹಾರವನ್ನು ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ. ಅದರಲ್ಲಿ 4 ರಿಂದ 5 ವಿದ್ಯಾರ್ಥಿಗಳಿಗೆ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಗಾಬರಿಗೊಂಡು ಆಸ್ಪತ್ರೆಗೆ ದಾವಿಸುತ್ತಿದ್ದಾರೆ.

ಶಾಲೆಯಿಂದ ಮನೆಗೆ ಬಂದ ನನ್ನ ಮಗಳು ಸುಸ್ತಾದಂತೆ ಕಂಡು ಬಂದಳು. ಸ್ವಲ್ಪ ಸಮಯದ ನಂತರ ಎರಡು ಬಾರಿ ವಾಂತಿ ಮಾಡಿಕೊಂಡಳು. ಮನೆಯಲ್ಲಿ ಗಾಬರಿಗೊಂಡು ಸರಕಾರಿ ಆಸ್ಪತ್ರಗೆ ಕರೆದುಕೊಂಡು ಬರಲಾಯಿತು ಎಂದು ವಿದ್ಯಾರ್ಥಿನಿ ಅಲಿಯಾ ಪಾಲಕರಾದ ಮುತುರ್ಜಾ ತೇಳಿ ಅವರು ತಿಳಿಸಿದರು.

Latest Videos

undefined

ಶಹಾಪುರ: ಸಾವಿಗೆ ಆಹ್ವಾನ ನೀಡುತ್ತಿರುವ ವಿದ್ಯುತ್‌ ಕಂಬ

ಬೆಳಿಗ್ಗೆ ಉಪ್ಪಿಟ್ಟು ತಿನ್ನುವಾಗ ನನ್ನ ಪ್ಲೇಟ್‌ನಲ್ಲಿ ಹಲ್ಲಿಯ ಬಾಲ ಸಿಕ್ಕಿತು. ಕೂಡಲೆ ಬಿಸಿಯೂಟದ ಸಹಾಯಕರಿಗೆ ತಿಳಿಸಿದೆ. ಉಪ್ಪಿಟ್ಟನ್ನು ಹೊರಗಡೆ ಚೆಲ್ಲಲು ಹೇಳಿದರು. ಅಷ್ಟೊತ್ತಿಗಾಗಲೆ ಅನೇಕ ವಿದ್ಯಾರ್ಥಿಗಳು ಉಪ್ಪಿಟ್ಟನ್ನು ಸೇವಿಸಿದ್ದರು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಶಾಲೆಗೆ ಬಂದು ಪರಿಶೀಲನೆ ಮಾಡಿದಾಗ ಬಿಸಿಯೂಟದ ಅಡುಗೆ ಸಹಾಯಕರ ನಿರ್ಲಕ್ಷ್ಯ ಕಂಡು ಬಂದಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಅಂತ ತಾಲೂಕು ಬಿಸಿಯೂಟದ ಅಧಿಕಾರಿ ಮೌನೇಶ ಕಂಬಾರ ಹೇಳಿದ್ದಾರೆ.  

ಕೆಂಭಾವಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷಿಸಲಾಗಿದ್ದು ಯಾರು ಭಯಪಡುವ ಅವಶ್ಯಕತೆಯಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ. ಆದ್ಯತೆ ಮೇರೆಗೆ ಎಲ್ಲರನ್ನೂ ಡಿಸ್ಚಾರ್ಜ ಮಾಡಲಾಗುವದು ಅಂತ ತಾಲೂಕು ವೈದ್ಯಾಧಿಕಾರಿ ಡಾ. ವೆಂಕಟಪ್ಪ ನಾಯಕ ತಿಳಿಸಿದ್ದಾರೆ. 

click me!