'ಶೀಘ್ರ ಬಿಜೆಪಿಗೆ ವಲಸೆ ಹೋದ ಈ 5 ಸಚಿವರಿಗೆ ಗೇಟ್ ಪಾಸ್'

Suvarna News   | Asianet News
Published : Jan 25, 2021, 02:13 PM IST
'ಶೀಘ್ರ ಬಿಜೆಪಿಗೆ ವಲಸೆ ಹೋದ ಈ 5 ಸಚಿವರಿಗೆ ಗೇಟ್ ಪಾಸ್'

ಸಾರಾಂಶ

ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಹೋದ ಐವರು ಮತ್ತೆ ಶೀಘ್ರ ವಾಪಸ್ ಆಗಲಿದ್ದಾರೆ. ಅಲ್ಲಿಂದ ಗೇಟ್ ಪಾಸ್ ಸಿಗಲಿದೆ ಎಂದು  ಹೇಳಲಾಗಿದೆ. 

ಮೈಸೂರು (ಜ.25):  ವಲಸೆ ಮಂತ್ರಿಗಳೆಲ್ಲ ಹೊಸ ಮನೆ ಸೆಂಟ್ರಿಂಗ್ ಸಾಮಾನು ಇದ್ದಂಗೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ವಲಸೆ ಹೋದವರ ಸ್ಥಿತಿ ಮತ್ತಷ್ಟು ಕೆಡುತ್ತದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ. 

ಇನ್ನು 6 ತಿಂಗಳಲ್ಲಿ ಬಿಜೆಪಿ 5 ವಲಸೆ ಮಂತ್ರಿಗಳನ್ನ ಕೆಳಗಿಸುತ್ತಾರೆ ಎಂದು ಮೈಸೂರಿನಲ್ಲಿ  ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ. 

ನನ್ನ ಮಗಳು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ ಎಂದ ಕಾಂಗ್ರೆಸ್ ಶಾಸಕ .

ಬಿಜೆಪಿಗೆ ಹೋಗಿರುವ ವಲಸೆ ಮಂತ್ರಿಗಳೆಲ್ಲ ಹೊಸ ಮನೆಗೆ ಸೆಂಟ್ರಿಂಗ್ ಇದ್ದ ಹಾಗೇ.  ಮನೆ ಮೇಲ್ಛಾವಣಿ ನಿಂತ ಮೇಲೆ ಸೆಂಟ್ರಿಂಗ್ ಕಿತ್ತು ಬಿಸಾಕಿದ ಹಾಗೇ ವಲಸೆ ಮಂತ್ರಿಗಳನ್ನ ಕಿತ್ತು ಬಿಸಾಕಲಿದ್ದಾರೆ ಎಂದರು.

ಬಿಸಿ ಪಾಟೀಲ್, ಸುಧಾರಕರ್, ಗೋಪಾಲಯ್ಯ, ನಾರಾಯಣಗೌಡ, ಆರ್. ಶಂಕರ್‌ರನ್ನ ಮೊದಲು ಕಿತ್ತು ಬಿಸಾಕಲಿದ್ದಾರೆ. ನಂತರ ಆರು ತಿಂಗಳಲ್ಲಿ  5 ಜನರನ್ನ ಆನಂತರದ ದಿನಗಳಲ್ಲಿ ಕಿತ್ತು ಹಾಕಲಿದ್ದಾರೆ. ಇದಂತೂ ಖಚಿತ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದರು.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!