ತಂದೆಯ ಅಂತ್ಯ ಸಂಸ್ಕಾರದಲ್ಲಿಯೇ ಮಗ ಕುಸಿದು ಬಿದ್ದು ಸಾವು

Suvarna News   | Asianet News
Published : Jun 03, 2021, 08:27 AM IST
ತಂದೆಯ ಅಂತ್ಯ ಸಂಸ್ಕಾರದಲ್ಲಿಯೇ ಮಗ ಕುಸಿದು ಬಿದ್ದು ಸಾವು

ಸಾರಾಂಶ

ತಂದೆಯ ಅಂತ್ಯ ಸಂಸ್ಕಾರದಲ್ಲಿ ಕುಸಿದು ಬಿದ್ದ ಮಗ ಹೃದಯಾಘಾತದಿಂದ ನಿಧನ ಕೋವಿಡ್‌ನಿಂದಾಗಿ ಮೃತಪಟ್ಟ ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ  ಆಸ್ಪ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದು, ಎರಡು ತಿಂಗಳ ಹಿಂದಷ್ಟೆಊರಿಗೆ ಬಂದಿದ್ದ ಮಗ

ಬಂಟ್ವಾಳ (ಜೂ.03): ತಂದೆಯ ಅಂತ್ಯ ಸಂಸ್ಕಾರದಲ್ಲಿ ಕುಸಿದು ಬಿದ್ದ ಮಗ ಹೃದಯಾಘಾತದಿಂದ ನಿಧನವಾದ ಮನಕಲಕುವ ಘಟನೆ ಜೂ.2ರಂದು ಪುಣಚದಲ್ಲಿ ನಡೆದಿದೆ.

ಕೋವಿಡ್‌ನಿಂದಾಗಿ ಮೃತಪಟ್ಟ ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ ನಿವೃತ್ತ ಕೆ.ಪಿ.ಟಿ ಪ್ರೊಫೆಸರ್‌ ಭುಜಂಗ ಶೆಟ್ಟಿ(85) ಅಂತ್ಯಕ್ರಿಯೆ ವೇಳೆ ಅವರ ಪುತ್ರ ಶೈಲೇಶ್‌ ಶೆಟ್ಟಿ(44) ಅವರು ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆ ತಂದರೂ ಚಿಕಿತ್ಸೆಗೆ ಸ್ಪಂದಿಸದ ಶೈಲೇಶ್‌ ಅವರು ಮೃತಪಟ್ಟಿದ್ದಾರೆ.

ರಾಜ್ಯಲ್ಲಿ ಕುಸಿದ ಕೊರೋನಾ ಪಾಸಿಟಿವಿಟಿ ಪ್ರಮಾಣ, ಇಲ್ಲಿದೆ ಜೂನ್ 02ರ ಅಂಕಿ -ಸಂಖ್ಯೆ .. 

ಶೈಲೇಶ್‌ ಅವರು ಆಸ್ಪ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದು, ಎರಡು ತಿಂಗಳ ಹಿಂದಷ್ಟೆಊರಿಗೆ ಬಂದಿದ್ದರು. ಈ ಘಟನೆ ಮನೆ ಮಂದಿ ಸಹಿತ ಗ್ರಾಮಸ್ಥರ ಆಘಾತಕ್ಕೆ ಕಾರಣವಾಗಿದೆ. ಮೃತ ಭುಜಂಗ ಶೆಟ್ಟಿಅವರ ಮನೆಯಲ್ಲಿ ಅವರ ಪತ್ನಿಯ ಹೊರತಾಗಿ ಇತರರೆಲ್ಲರಿಗೂ ಕೊರೋನಾ ಪಾಸಿಟಿವ್‌ ಬಂದಿತ್ತು.

ಆದರೆ ಶೈಲೇಶ್‌ ಅವರು ಹಾರಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅವರಿಗೆ ಕೊರೋನಾ ಸೋಂಕು ಬಾಧಿಸಿರಲಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು