ಹೆತ್ತ ತಾಯಿಯ ಎತ್ತಿ ಬಿಸಾಕಿದ: ವೃದ್ಧ ತಾಯಿಗೆ ಮಗ, ಮೊಮ್ಮಗನಿಂದ ಅಮಾನುಷ ಹಲ್ಲೆ

By Kannadaprabha News  |  First Published Jul 18, 2020, 11:06 AM IST

ಇಳಿವಯಸ್ಸಿನ ವೃದ್ಧೆಗೆ ಮಗ ಹಾಗೂ ಮೊಮ್ಮಗೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧೆಯ ಮಗ ಮತ್ತು ಮೊಮ್ಮೊಗನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.


ಬೆಳ್ತಂಗಡಿ(ಜು.18): ಇಳಿವಯಸ್ಸಿನ ವೃದ್ಧೆಗೆ ಮಗ ಹಾಗೂ ಮೊಮ್ಮಗೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧೆಯ ಮಗ ಮತ್ತು ಮೊಮ್ಮೊಗನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಸವಣಾಲು ಗ್ರಾಮದ ಹಲಸಿನಕಟ್ಟೆನಿವಾಸಿ ಅಪ್ಪಿ ಶೆಡ್ತಿ (90) ಎಂಬವರೇ ಹಲ್ಲೆಗೊಳಗಾದವರು. ಇವರ ಮೊಮ್ಮಗ ಪ್ರದೀಪ ಶೆಟ್ಟಿಹಾಗೂ ಮಗ ಶ್ರೀನಿವಾಸ ಶೆಟ್ಟಿಬಂಧಿತರು. ಇವರಿಬ್ಬರು ಅಜ್ಜಿಗೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ವಿಷಯ ತಿಳಿದ ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್‌ಸಂದೇಶ್‌ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿರು.

Tap to resize

Latest Videos

ದ.ಕ. ಜಿಲ್ಲೆಗೆ 25 ಸಾವಿರ ಕೋವಿಡ್‌ ಟೆಸ್ವ್‌ ಕಿಟ್‌: ಅಶ್ವತ್ಥನಾರಾಯಣ

ಅಪ್ಪಿ ಶೆಡ್ತಿ ಸವಣಾಲು ಗ್ರಾಮಸ್ಥರಿಗೆ ಚಿರಪರಿಚಿತೆ. ಸೂಲಗಿತ್ತಿಯಾಗಿ, ದಾದಿಯಾಗಿ, ಶಶ್ರೂಶಕಿಯಾಗಿದ್ದ ಇವರು ಸುಮಾರು ಐನೂರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ. ಪಾಡ್ಡನ ಹಾಗೂ ಜಾಾನಪದ ವಿಚಾರಗಳ ಬಗ್ಗೆಯೂ ತಿಳುವಳಿಕೆ ಉಳ್ಳವರು. ಕಳೆದೆರಡು ವರ್ಷಗಳಿಂದ ಅಸ್ವಸ್ಥರಾಗಿ ಮನೆಯಲ್ಲಿ ಹಾಸಿಗೆ ಹಿಡಿದಿದ್ದರು. ಮೂರು ದಿನಗಳ ಹಿಂದೆ ಮನೆಯಲ್ಲೇ ಮಲಗಿದ್ದ ಅಜ್ಜಿಯನ್ನು ಮಗ ಹಾಗೂ ಮೊಮ್ಮಗ ಎಳೆದೊಯ್ದು ಹಲ್ಲೆ ನಡೆಸಿ, ಎತ್ತಿ ನೆಲಕ್ಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೊರೋನಾ ಕಾಟ: 30 ಕಿ.ಮೀ. ಸೈಕಲ್‌ ತುಳಿದು ಕರ್ತವ್ಯಕ್ಕೆ ಬರುವ ಚಾಲಕ..!

ಇದನ್ನು ನೋಡಿದ ಆನೇಕ ಮಂದಿ ಖಂಡಿಸಿ, ಇದರ ವಿರುದ್ಧ ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಪೋಸ್ಟ್‌ ಹಾಕಿದ್ದರು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಬೆಳ್ತಂಗಡಿ ಠಾಣೆಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಂದೇಶ್‌ ಬಿ.ಜಿ., ಎಸ್‌ಐ ನಂದಕುಮಾರ್‌ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳಾದ ಶ್ರೀನಿವಾಸ ಶೆಟ್ಟಿಹಾಗೂ ಪ್ರದೀಪ ಶೆಟ್ಟಿಯನ್ನು ಬಂಧಿಸಿ, ಕೇಸು ದಾಖಲಿಸಿಕೊಂಡಿದ್ದಾರೆ. ಹಲ್ಲೆಗೊಳಗಾದ ಅಜ್ಜಿಯನ್ನು ಪೊಲೀಸರ ಸೂಚನೆಯಂತೆ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶಾಸಕರ ತುರ್ತು ಸ್ಪಂದನೆ: ಅಮಾನುಷ ಹಲ್ಲೆ ವಿಷಯ ತಿಳಿಯುತ್ತಿದ್ದಂತೆ ಕೋವಿಡ್‌ ಸಂಬಂಧ ಬೆಂಗಳೂರಿನಲ್ಲಿ ತುರ್ತು ಸಭೆಯಲ್ಲಿದ್ದ ಶಾಸಕ ಹರೀಶ ಪೂಂಜಾ ಕಾರ್ಯಕರ್ತರನ್ನು ಕಳುಹಿಸಿ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಿದ್ದಾರೆ.

click me!