ಅಥಣಿ: ಕೊರೋನಾ ಭಯದಿಂದ ಬಾರದ ಜನ, ತಳ್ಳು ಗಾಡಿಯಲ್ಲಿ ಶವ ಸಾಗಿಸಿ ಅಂತ್ಯಕ್ರಿಯೆ!

Kannadaprabha News   | Asianet News
Published : Jul 18, 2020, 11:00 AM IST
ಅಥಣಿ: ಕೊರೋನಾ ಭಯದಿಂದ ಬಾರದ ಜನ, ತಳ್ಳು ಗಾಡಿಯಲ್ಲಿ ಶವ ಸಾಗಿಸಿ ಅಂತ್ಯಕ್ರಿಯೆ!

ಸಾರಾಂಶ

ಅನಾರೋಗ್ಯದಿಂದ ವ್ಯಕ್ತಿಯ ಸಾವು| ತಳ್ಳುಗಾಡಿಯಲ್ಲಿ ಸ್ಮಶಾನದವರೆಗೆ ಶವ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ ಮೃತನ ಪತ್ನಿ| ಬೆಳಗಾವಿ ಜಿಲ್ಲೆಯ ಅಥಣಿ ನಗರದಲ್ಲಿ ನಡೆದ ಘಟನೆ|

ಅಥಣಿ(ಜು.18): ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಯಾರೂ ಬಾರದ ಹಿನ್ನೆಲೆಯಲ್ಲಿ ಆಕೆಯ ಪತ್ನಿಯೇ ತಳ್ಳುಗಾಡಿಯಲ್ಲಿ ಸ್ಮಶಾನದವರೆಗೆ ಶವ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ. 

ಅಥಣಿ ಸರ್ಕಾರಿ ಆಸ್ಪತ್ರೆ ಎದುರು ಪಾದರಕ್ಷೆ ರಿಪೇರಿ ಕೆಲಸ ಮಾಡುತ್ತಿದ್ದ ಸದಾಶಿವ ಹಿರಟ್ಟಿ(55) ಮೃತಪಟ್ಟ ವ್ಯಕ್ತಿ.

ಕೊರೋನಾ ಕಾಟ: ಭೂಲೋಕದ ನರಕ ಆಗಿದ್ಯಾ ಬೆಳಗಾವಿಯ ಬಿಮ್ಸ್‌ ಆಸ್ಪತ್ರೆ?

ಗುರುವಾರ ಮಧ್ಯರಾತ್ರಿ ತೀರಾ ಅಸ್ವತ್ಥಗೊಂಡಿದ್ದ ಅವರು ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದರು. ಆದರೆ ವ್ಯಕ್ತಿ ಮೃತಪಟ್ಟು ತುಂಬಾ ಹೊತ್ತಾದರೂ ಯಾರೂ ಅಂತ್ಯಕ್ರಿಯೆಗೆ ಸಹಾಯ ಮಾಡಲಿಲ್ಲ. ಇದರಿಂದ ತೀವ್ರ ನೊಂದ ಆತನ ಪತ್ನಿ, ತಾನೊಬ್ಬಳೇ ತಳ್ಳು ಗಾಡಿಯಲ್ಲಿ ಒಂದೂವರೆ ಕಿ.ಮೀ.ವರೆಗೆ ಶವ​ವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!