ಬಳ್ಳಾರಿಯನ್ನು ಅಂಧ್ರಪ್ರದೇಶಕ್ಕೆ ಸೇರಿಸಬೇಕೆಂದು ಆಂಧ್ರದ ಕೆಲ ಸಂಘಟನೆಗಳ ಒತ್ತಾಯ| ಅಖಂಡ ಬಳ್ಳಾರಿ ಜಿಲ್ಲಾ ಹೋರಾಟಗಾರರಲ್ಲಿ ಆಕ್ರೋಶ| ಈಗಲೂ ಬಳ್ಳಾರಿಯಲ್ಲಿ ಹೆಚ್ಚಿದ ಆಂಧ್ರದ ಪ್ರಭಾವ| ಬಳ್ಳಾರಿ ಒಡೆಯೋದು ಬಿಡದಿದ್ರೇ ಬಳ್ಳಾರಿ ಆಂಧ್ರ ಪಾಲು|
ಬಳ್ಳಾರಿ(ಜ.18): ಒಂದು ಕಡೆ ಬೆಳಗಾವಿ ಕೆಲ ಭಾಗ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವ ವಿವಾದ ಹಸಿರಾಗಿರೋವಾಗಲೇ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಬೇಕೆನ್ನುವ ಕೂಗಿನ ಕಿಡಿ ಮೆಲ್ಲಗೆ ಹತ್ತಿಕೊಂಡಿದೆ. ಬಳ್ಳಾರಿ ಜಿಲ್ಲೆ ವಿಭಜನೆಯಾಗಿ ವಿಜಯನಗರ ಜಿಲ್ಲೆ ಘೋಷಣೆ ಬಗ್ಗೆ ಮಾಡುತ್ತಿರುವ ಹಿನ್ನಲೆಯಲ್ಲಿ ಇದೀಗ ಬಳ್ಳಾರಿಯನ್ನು ಅಂಧ್ರಪ್ರದೇಶಕ್ಕೆ ಸೇರಿಸಬೇಕೆಂದು ಆಂಧ್ರದ ಕೆಲ ಸಂಘಟನೆಗಳು ಒತ್ತಾಯಿಸಿವೆ.
ಹೌದು, ಈಗಲೂ ಬಳ್ಳಾರಿಯಲ್ಲಿ ಆಂಧ್ರದ ಪ್ರಭಾವ ಹೆಚ್ಚಾಗಿದೆ. ಹೀಗಾಗಿ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಿ ಎಂದು ಕೆಲ ಸಂಘಟನೆಗಳು ಒತ್ತಾಯಿಸಿವೆ. ಇದು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟಗಾರರಲ್ಲಿ ಆಕ್ರೋಶವನ್ನ ಮೂಡಿಸಿದೆ. ಆಂದ್ರಪ್ರದೇಶದ ಪತ್ರಿಕೆಯೊಂದರಲ್ಲಿ ಈ ಬಗ್ಗೆ ವರದಿ ಕೂಡ ಪ್ರಕಟವಾಗಿದೆ.
ಬಳ್ಳಾರಿ ಬಳಿಕ ಬೆಳಗಾವಿ ವಿಭಜನೆಗೆ ಒತ್ತಾಯ: ನಾಲ್ಕು ಜಿಲ್ಲೆಗಾಗಿ ಹೆಚ್ಚಿದ ಕೂಗು
ಬಳ್ಳಾರಿ ಒಡೆಯೋದು ಬಿಡದಿದ್ರೇ ಬಳ್ಳಾರಿ ಆಂಧ್ರ ಪಾಲಾಗುತ್ತದೆ ಹೋರಾಟಗಾರರು ಹೇಳುತ್ತಿದ್ದಾರೆ. ಈಗಾಗಲೇ ಜಿಲ್ಲೆ ವಿಭಜನೆ ಅಕ್ಷೇಪಣೆ ಸಲ್ಲಿಸಲು ಸರ್ಕಾರ ನೀಡಿರುವ ಗಡುವು ಮುಗಿದಿದ್ದು ಯಾವುದೇ ಕ್ಷಣದಲ್ಲಿ ವಿಜಯನಗರ ಜಿಲ್ಲೆ ಘೋಷಣೆಯಾಗಲಿದೆ. ಈ ಮಧ್ಯೆ ಬಳ್ಳಾರಿಯಲ್ಲಿ ಹೋರಾಟಗಾರರು ಕಾನೂನು ಮೊರೆ ಹೋಗಲು ಸಜ್ಜಾಗಿದ್ದಾರೆ.