ಬಂಗಾರು ಹನುಮಂತು ನೇತೃತ್ವದಲ್ಲಿ ದೇಣಿಗೆ ಸಂಗ್ರಹ| 5 ಸಾವಿರ ದೇಣಿಗೆ ನೀಡುವುದರ ಮೂಲಕ ಹಿಂದೂ, ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಮುಸ್ಲಿಂ ಯುವಕ ಜುಬೇರ್| ರಾಮ ಬೇರೆ ಅಲ್ಲ, ಅಲ್ಲಾ ಬೇರೆ ಅಲ್ಲ ಎಂದು ಈ ಯುವಕ ಧಾರ್ಮಿಕ ಸೌಹಾರ್ದ ಮೆರೆದ ಯುವಕ
ಕೂಡ್ಲಿಗಿ(ಜ.18): ಪಟ್ಟಣದಲ್ಲಿ ಭಾನುವಾರ ರಾಮಮಂದಿರ ನಿರ್ಮಾಣಕ್ಕೆ ದೇಣಿಕೆ ಸಂಗ್ರಹ ಕಾರ್ಯ ಕೂಡ್ಲಿಗಿ ತಾಲೂಕು ಸಂಯೋಜಕ ಬಂಗಾರು ಹನುಮಂತು ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೂಡ್ಲಿಗಿಯ ಮುಸ್ಲಿಂ ಯುವಕ ಜುಬೇರ್ 5 ಸಾವಿರ ದೇಣಿಗೆ ನೀಡುವುದರ ಮೂಲಕ ಹಿಂದೂ, ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ದೇವರ ಹೆಸರಿನಲ್ಲಿ, ಜಾತಿ-ಧರ್ಮಗಳ ಹೆಸರಿನಲ್ಲಿ ಕೋಮುಗಲಭೆಗಳು ನಡೆಯುತ್ತಿರುವ ಇಂದಿನ ದಿನಗಳಲ್ಲಿ ರಾಮ ಬೇರೆ ಅಲ್ಲ, ಅಲ್ಲಾ ಬೇರೆ ಅಲ್ಲ ಎಂದು ಈ ಯುವಕ ಧಾರ್ಮಿಕ ಸೌಹಾರ್ದ ಮೆರೆದಿದ್ದಾರೆ.
'ಸಾವಿರಾರು ಮರಾಠಿಗರ ಹೆಣ ನೋಡ್ಬೇಕಾಗುತ್ತೆ ಹುಷಾರ್'
ಆನಂತರ ಪಟ್ಟಣದ ವಿವಿಧ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಬಿಜೆಪಿ ಮುಖಂಡರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿಯ ಬಿಜೆಪಿ ಹಿರಿಯ ಮುಖಂಡರಾದ ಕೆ.ಎಚ್. ವೀರನಗೌಡ್ರು, ಮಂಜುನಾಥ, ಕೊಂಡಯ್ಯರ ರಾಘವೇಂದ್ರ, ಲಿಂಗರಾಜು, ಸತೀಶ್, ಗುನ್ನಳ್ಳಿ ನಾರಾಯಣ, ಗುನ್ನಳ್ಳಿ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.