ಚೀನಾ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಕರ್ನಾಟಕದ ಯೋಧ ಸಾವು

Suvarna News   | Asianet News
Published : Jul 05, 2020, 02:08 PM ISTUpdated : Jul 05, 2020, 02:12 PM IST
ಚೀನಾ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಕರ್ನಾಟಕದ ಯೋಧ ಸಾವು

ಸಾರಾಂಶ

ಚೀನಾ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಹಾಸನ ಮೂಲದ ಯೋಧ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಅತ್ನಿ ಗ್ರಾಮದ ಮಲ್ಲೇಶ್ ಮೃತ ಯೋಧ

ಹಾಸನ(ಜು.05): ಚೀನಾ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಹಾಸನ ಮೂಲದ ಯೋಧ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಅತ್ನಿ ಗ್ರಾಮದ ಮಲ್ಲೇಶ್ ಮೃತ ಯೋಧ 

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಅತ್ನಿ ಗ್ರಾಮದ ಮಲ್ಲೇಶ್ ಅರುಣಾಚಲ ಪ್ರದೇಶದ ಟ್ಯಾಟ್ಯೂಡಿಗ್ಗು ಯಲ್ಲಿ ಮೃತಪಟ್ಟಿದ್ದಾರೆ. 18 ನೇ ಬೆಟಾಲಿಯನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಎತ್ತರದ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು.

8 ಪೊಲೀಸರ ಕೊಂದ ಪಾತಕಿ ಮನೆ ಸಂಪೂರ್ಣ ನಾಶ!

ಎತ್ತರದ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಯೋಧ ಸಾವನ್ನಪ್ಪಿರುವ ಬಗ್ಗೆ ಅಧಿಕಾರಿಗಳಿಂದ ಕುಟುಂಬದವರಿಗೆ ಮಾಹಿತಿ ಲಭಿಸಿದೆ.

ಇಂದು ಸ್ವಗ್ರಾಮಕ್ಕೆ ಮಲ್ಲೇಶ್ ಪಾರ್ಥಿವ ಶರೀರ ಬರಲಿದ್ದು, ಅಂತ್ಯಕ್ರಿಯೆ ಇಂದು ನಡೆಯಲಿದೆ. ಇತ್ತೀಚೆಗಷ್ಟೇ ಲಡಾಖ್‌ನಲ್ಲಿ ಭಾರತೀಯ 20 ಜನ ಯೋಧರು ಹುತಾತ್ಮರಾಗಿದ್ದರು. ಪ್ರಧಾನಿ ಮೋದಿಯೂ ಇತ್ತೀಚೆಗೆ ಲಡಾಖ್‌ನ ಲೆಹ್‌ಗೆ ಭೇಟಿ ನೀಡಿದ್ದರು.

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!