ಸೊಗಡು ಶಿವಣ್ಣ ವಾಟಾಳ್‌ ರೀತಿ ಆಗಬಾರದು ಎಂದ ಕೈ ಮುಖಂಡ

Published : Dec 08, 2019, 11:05 AM IST
ಸೊಗಡು ಶಿವಣ್ಣ ವಾಟಾಳ್‌ ರೀತಿ ಆಗಬಾರದು ಎಂದ ಕೈ ಮುಖಂಡ

ಸಾರಾಂಶ

ಸೊಗಡು ಶಿವಣ್ಣನವರು ಸ್ಮಾರ್ಟ್‌ ಸಿಟಿ ಕಾಮಗಾರಿ ಕಳಪೆ ಎಂದು ಆರೋಪಿಸಿ, ಹೇಳಿಕೆ ನೀಡುತ್ತಾರೆ. ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ ಸೊಗಡು ಶಿವಣ್ಣರ ಹೋರಾಟದಲ್ಲಿ ರಿಸಲ್ಟ್‌ ಸಿಗೋದಿಲ್ಲ. ಸೊಗಡು ಹೋರಾಟದಿಂದ ಏನೂ ಆಗಿಲ್ಲ ಎಂದು ಲೇವಡಿ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಡಾ. ರಫೀಕ್‌ ಅಹಮದ್‌ ಹೇಳಿದ್ದಾರೆ.

ತುಮಕೂರು(ಡಿ.08): ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ವಾಟಾಳ್‌ ನಾಗರಾಜ್‌ ರೀತಿ ಆಗಬಾರದು ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಡಾ. ರಫೀಕ್‌ ಅಹಮದ್‌ ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಟಾಳ್‌ ನಾಗರಾಜ್ ರೀತಿ ಅವರ ಹೋರಾಟಕ್ಕೆ ಕಿಮ್ಮತ್ತಿಲ್ಲ. ವಾಟಾಳ್‌ ನಾಗರಾಜ್‌ ನಾಲ್ಕೈದು ಜನರನ್ನು ಸೇರಿಸಿ ಹೋರಾಟ ಮಾಡುತ್ತಾರೆ. ಅವರು ಒಳ್ಳೆ ಮನಸ್ಸಿನಿಂದ ಹೋರಾಟ ಮಾಡಬಹುದು. ಆದರೆ ಯಾರೂ ಅದನ್ನ ಗಮನಕ್ಕೆ ತಗೋಳಲ್ಲ. ತುಮಕೂರಲ್ಲೂ ಸೊಗಡು ಶಿವಣ್ಣರ ಸ್ಥಿತಿ ಅದೇ ಆಗಿದೆ. ಸೊಗಡು ಶಿವಣ್ಣನವರು ಸ್ಮಾರ್ಟ್‌ ಸಿಟಿ ಕಾಮಗಾರಿ ಕಳಪೆ ಎಂದು ಆರೋಪಿಸಿ, ಹೇಳಿಕೆ ನೀಡುತ್ತಾರೆ. ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ ಸೊಗಡು ಶಿವಣ್ಣರ ಹೋರಾಟದಲ್ಲಿ ರಿಸಲ್ಟ್‌ ಸಿಗೋದಿಲ್ಲ. ಸೊಗಡು ಹೋರಾಟದಿಂದ ಏನೂ ಆಗಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಪೊಲೀಸರ ಮೇಲೆ ಕೂಗಾಡಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ವಿರುದ್ಧ FIR

ಸ್ಮಾರ್ಟ್‌ಸಿಟಿ ಕಾಮಗಾರಿ ವೈಫಲ್ಯದ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆಗೆ ಜನಪ್ರತಿನಿಧಿಗಳ ವೈಫಲ್ಯವಿದೆ. ಸ್ಮಾರ್ಟ್‌ಸಿಟಿ ಕಾಮಗಾರಿ ವೈಫಲ್ಯದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ತುಮಕೂರು ನಗರ ಸಮಾಧಿಯಂತೆ ಗೋಚರಿಸುತ್ತಿದೆ. ಅಲ್ಲಲ್ಲಿ ಗುಂಡಿ ತೋಡಿ ಸಮಾಧಿಯಂತೆ ಮಾಡಿದ್ದಾರೆ. ಕಾಮಗಾರಿ ಅನುಷ್ಠಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರಫೀಕ್‌, ಕಾಮಗಾರಿ ಸರಿಯಾಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

7 ಲಕ್ಷದ ಈರುಳ್ಳಿ ಕಳ್ಳತನ: ಆನಿಯನ್‌ಗಾಗಿ ಆ್ಯಕ್ಸಿಡೆಂಟ್ ಹೈಡ್ರಾಮ..!

PREV
click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?