* ಮುಸ್ಲಿಮರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ಪ್ರತಿಭಟನೆ
* ಮುಸ್ಲಿಮರ ಬಸ್ ಬಂದ್: ಸರ್ಕಾರಿ ಬಸ್ ಒಡಾಟ
* ಮುಚ್ಚಿದ ಅಂಗಡಿ ಫೋಟೋ ಹಾಕಿ ಅಭಿಯಾನ
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು(ಮಾ.18): ಹಿಜಾಬ್(Hijab) ತೀರ್ಪು ವಿರೋಧಿಸಿ ಸ್ವಯಂ ಪ್ರೇರಿತವಾಗಿ ಅಂಗಡಿ-ಮುಗ್ಗಟ್ಟುಗಳನ್ನ ಬಂದ್ ಮಾಡಿ ಪ್ರತಿಭಟಿಸಿದ(Protest) ಮಂಗಳೂರಿನ ಮುಸ್ಲಿಮರ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ವಿಭಿನ್ನ ಪ್ರತಿಭಟನೆ ವ್ಯಕ್ತವಾಗಿದೆ. ಬಂದ್ ಮಾಡಿ ನ್ಯಾಯಾಲಯಕ್ಕೆ(Court) ಅವಮಾನ ಮಾಡಿದವರ ಜೊತೆ ಇನ್ಮುಂದೆ ವ್ಯಾಪಾರ ಮಾಡಬೇಡಿ ಎನ್ನುವ ಪೋಸ್ಟ್‌ಗಳು ಕರಾವಳಿಯಲ್ಲಿ ವೈರಲ್ ಆಗಿದೆ.
undefined
ಹೌದು, ತೀರ್ಪು ವಿರೋಧಿಸಿ ನಿನ್ನೆ(ಗುರುವಾರ) ಮಂಗಳೂರಿನ ಮುಸ್ಲಿಮರು ಒಗ್ಗಟ್ಟಾಗಿದ್ದರು. ಮೀನುಗಾರಿಕಾ ಬಂದರು, ದಿನಸಿ ಬಂದರು ಸೇರಿದಂತೆ ಬಹುತೇಕ ಮುಸ್ಲಿಮರ ವ್ಯಾಪಾರ ಕೇಂದ್ರಗಳು ಅಕ್ಷರಶಃ ಸ್ತಬ್ಧವಾಗಿತ್ತು. ಇದರಿಂದ ಕರಾವಳಿಯಲ್ಲಿ ಒಂದಷ್ಟು ಆರ್ಥಿಕ ಚಟುವಟಿಕೆಗಳಿಗೂ ಹೊಡೆತ ಬಿದ್ದಿದ್ದು, ಬಹುತೇಕ ವ್ಯವಹಾರ ಬಂದ್ ಆಗಿತ್ತು. ಮಂಗಳೂರಿನಲ್ಲಿ ಮೊಗವೀರ ಸಮುದಾಯ ಮೀನುಗಾರಿಕೆ ನಡೆಸಿದರೂ ಅದರ ಮಾರಾಟ ಮತ್ತು ಪೂರೈಕೆ ವ್ಯವಹಾರದಲ್ಲಿ ಹೆಚ್ಚಾಗಿ ಮುಸ್ಲಿಮರೇ ತೊಡಗಿಸಿಕೊಂಡಿದ್ದಾರೆ. ಇನ್ನು ಬಂದರು ಪ್ರದೇಶದ ದಿನಸಿ ಪೂರೈಕೆಯಲ್ಲೂ ಮುಸ್ಲಿಂ ವ್ಯಾಪಾರಿಗಳ ಪ್ರಭಾವವಿದೆ. ಹೀಗಾಗಿ ಏಕಾಏಕಿ ಬಂದ್ ಮಾಡಿದ ಮುಸ್ಲಿಂ ವರ್ತಕರ ವಿರುದ್ದ ಮಂಗಳೂರಿನಲ್ಲಿ ಸೋಶಿಯಲ್ ಮೀಡಿಯಾ ವಾರ್ ಜೋರಾಗಿದೆ. ಅಂಗಡಿ ಬಂದ್ ಮಾಡಿ ವ್ಯಾಪಾರ ಸ್ಥಗಿತಗೊಳಿಸಿದವರ ಜೊತೆ ವ್ಯವಹಾರ ಬೇಡ ಅನ್ನೋ ಸಂದೇಶಗಳು ಹರಿದಾಡ್ತಿದೆ.
ಹೊಳೆಗೆ ಉರುಳಿ ಬಿದ್ದ KSRTC ಬಸ್, ಹಲವರಿಗೆ ಗಾಯ, ತಪ್ಪಿದ ಅನಾಹುತ
ಮುಚ್ಚಿದ ಅಂಗಡಿ ಫೋಟೋ ಹಾಕಿ ಅಭಿಯಾನ!
ಮಂಗಳೂರು(Mangaluru) ನಗರದ ಮುಸ್ಲಿಮರ(Muslims) ಬಹುತೇಕ ದಿನಸಿ ಅಂಗಡಿಗಳು, ಮೀನು, ತರಕಾರಿ ಅಂಗಡಿಗಳು ಬಂದ್ ಆಗಿದ್ದವು. ಇದರಲ್ಲಿ ವಹಿವಾಟು ನಡೆಸುವವರಲ್ಲಿ ಮುಸ್ಲಿಮೇತರರೇ ಹೆಚ್ಚಾಗಿದ್ದಾರೆ. ಹೀಗಾಗಿ ಕೆಲ ಹಿಂದೂ ಸಂಘಟನೆ ಕಾರ್ಯಕರ್ತರು(Hindu Organization Activists) ಬಂದ್ ಆದ ಅಂಗಡಿಗಳ, ವ್ಯಾಪಾರ ಕೇಂದ್ರಗಳ ಫೋಟೋ ತೆಗೆದು ಸಾಮಾಜಿಕ ತಾಣಗಳಲ್ಲಿ(Social Media) ವೈರಲ್ ಮಾಡಿದ್ದಾರೆ. ಇನ್ನು ಮುಂದೆ ಈ ಅಂಗಡಿಗಳಲ್ಲಿ ವ್ಯಾಪಾರ(Business) ನಡೆಸಬೇಡಿ ಅಂತ ಪೋಸ್ಟ್ ವೈರಲ್ ಮಾಡಲಾಗಿದೆ.
ಮೆಡಿಕಲ್ ಕೂಡ ಬಂದ್: ಕ್ರಮಕ್ಕೆ ಆಗ್ರಹ
ಈ ನಡುವೆ ಮುಸ್ಲಿಂ ಸಂಘಟನೆಗಳ ಬಂದ್ ಗೆ ಕೆಲ ಮುಸ್ಲಿಂ ಮೆಡಿಕಲ್ ಶಾಪ್ ಮಾಲೀಕರು ಕೂಡ ಬೆಂಬಲ ಸೂಚಿಸಿದ್ದರು. ಪರಿಣಾಮ ಮಂಗಳೂರು ನಗರದ ಮಾರ್ಗನ್ಸ್ ಗೇಟ್, ಕಾವೂರು, ಬೀರಿ ಸೇರಿದಂತೆ ಹಲವೆಡೆ ಮೆಡಿಕಲ್ ಶಾಪ್ ಗಳು ಬಂದ್ ಆಗಿತ್ತು. ಇದೀಗ ಅವುಗಳ ಫೋಟೋಗಳು ಕೂಡ ವೈರಲ್ ಆಗಿದ್ದು, ತುರ್ತು ಸಂಧರ್ಬದಲ್ಲಿ ಅಗತ್ಯಕ್ಕೆ ಬೇಕಾದ ಮೆಡಿಕಲ್ ಬಂದ್ ಮಾಡಿರುವುದು ಸರಿಯಲ್ಲ. ಇದು ಲೈಸೆನ್ಸ್ ನಿಯಮದ ಉಲ್ಲಂಘನೆ. ಹೀಗಾಗಿ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲಿ ಎನ್ನುವ ಆಗ್ರಹ ಕೇಳಿ ಬಂದಿದೆ.
ಮುಸ್ಲಿಮರ ಬಸ್ ಬಂದ್: ಸರ್ಕಾರಿ ಬಸ್ ಒಡಾಟ
ಮಂಗಳೂರಿನ ಮುಡಿಪುವಿನಿಂದ ಮಂಜನಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುವ ಕೆಲ ಖಾಸಗಿ ಬಸ್‌ಗಳು ನಿನ್ನೆ ಸಂಚಾರ ನಿಲ್ಲಿಸಿದ್ದವು. ಇದರಿಂದ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು(Students) ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದರು. ಕೊನೆಗೆ ಬಿಜೆಪಿ(BJP) ಮಂಗಳೂರು ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್ ಮನವಿ ಮೇರೆಗೆ ಕೆಎಸ್ಆರ್‌ಟಿಸಿ(KSRTC) ವಿಭಾಗ ನಿಯಂತ್ರಣಾಧಿಕಾರಿಗೆ ಬಸ್ಸಿನ ವ್ಯವಸ್ಥೆ ಮಾಡಿದ್ದರು.
ಹಿಜಾಬ್ ತೀರ್ಪಿಗೆ ವಿರೋಧ : ಬಂದ್‌ಗೆ ಮಂಗಳೂರು ಮುಸ್ಲಿಮರ ಬೆಂಬಲ: ಹಲವೆಡೆ ಸ್ತಬ್ಧ
ಹಿಜಾಬ್ ತೀರ್ಪಿನ ವಿರುದ್ಧ ಮಾ.17ಕ್ಕೆ ಕರ್ನಾಟಕ ಬಂದ್ ಕರೆ ನೀಡಿದ ಮುಸ್ಲಿಂ ಸಮುದಾಯ!
ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೂಚಿಸುವ ಸಮವಸ್ತ್ರ ಪಾಲಿಸಬೇಕು. ಇಲ್ಲಿ ಹಿಜಾಬ್‌ಗೆ ಅವಕಾಶವಿಲ್ಲ. ಈ ಕುರಿತು ಕರ್ನಾಟಕ ಸರ್ಕಾರ ನೀಡಿದ ಆದೇಶವನ್ನು ಎತ್ತಿಹಿಡಿದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ಕಳೆದ 3 ತಿಂಗಳ ವಿವಾದಕ್ಕೆ ತೆರೆ ಎಳೆದಿತ್ತು. ಆದರೆ ಈ ತೀರ್ಪು ಮುಸ್ಲಿಂ ಸಮುದಾಯವನ್ನು ಕೆರಳಿಸಿದೆ. ಇದೀಗ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಮುಸ್ಲಿಂ ಸಮುದಾಯ ಮಾರ್ಚ್ 17ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿತ್ತು.
ಕರ್ನಾಟಕ ಹೈಕೋರ್ಟ್ ತೀರ್ಪಿನಿಂದ ಮುಸ್ಲಿಂ ಸಮುದಾಯಕ್ಕೆ ನೋವಾಗಿದೆ. ನಮ್ಮ ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸಿದೆ. ಸಾಂವಿಧಾನಿಕ ಹಕ್ಕನ್ನು ನಿರಾಕರಿಸಲಾಗಿದೆ. ಹೀಗಾಗಿ ಈ ತೀರ್ಪಿನ ವಿರುದ್ದ ಸಂಪೂರ್ಣ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಅಮೀರ್ ಇ ಶರಿಯತ್ ಕರ್ನಾಟಕದ ಮೌಲಾನಾ ಸಾಗಿರ್ ಅಹಮ್ಮದ್ ಖಾನ್ ಹೇಳಿದ್ದರು.