ವೃದ್ದಾಪ್ಯದಲ್ಲಿ ಸೋಶಿಯಲ್‌ ಮೀಡಿಯಾ ಸ್ಟಾರ್‌ಗಿರಿ ಪಡೆದಿದ್ದ ಗೋಡಂಬಿ ಕಾಕಾ ಇನ್ನಿಲ್ಲ!

Published : Mar 08, 2025, 08:26 PM IST
ವೃದ್ದಾಪ್ಯದಲ್ಲಿ ಸೋಶಿಯಲ್‌ ಮೀಡಿಯಾ ಸ್ಟಾರ್‌ಗಿರಿ ಪಡೆದಿದ್ದ ಗೋಡಂಬಿ ಕಾಕಾ ಇನ್ನಿಲ್ಲ!

ಸಾರಾಂಶ

ಈಗೇನಿದ್ರು ಸೋಶಿಯಲ್‌ ಮೀಡಿಯಾ ಜಮಾನಾ. ಸೋಶಿಯಲ್‌ ಮೀಡಿಯಾದಲ್ಲಿ ಪ್ರಸಿದ್ಧಿ ಸಿಕ್ರೆ ಮುಗಿದೆಹೋಯ್ತು ಅಂತವರನ್ನ ಹಿಡಿಯೋದಕ್ಕು ಆಗೋದಿಲ್ಲ. ಪ್ರಯಾಗರಾಜ್‌ ನ ಮೋನಾಲಿಸಾ ಇದಕ್ಕೆ ತಾಜಾ ಉದಾಹರಣೆ. 

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಮಾ.08): ಈಗೇನಿದ್ರು ಸೋಶಿಯಲ್‌ ಮೀಡಿಯಾ ಜಮಾನಾ. ಸೋಶಿಯಲ್‌ ಮೀಡಿಯಾದಲ್ಲಿ ಪ್ರಸಿದ್ಧಿ ಸಿಕ್ರೆ ಮುಗಿದೆಹೋಯ್ತು ಅಂತವರನ್ನ ಹಿಡಿಯೋದಕ್ಕು ಆಗೋದಿಲ್ಲ. ಪ್ರಯಾಗರಾಜ್‌ ನ ಮೋನಾಲಿಸಾ ಇದಕ್ಕೆ ತಾಜಾ ಉದಾಹರಣೆ. ಹೀಗೆ ತಮ್ಮ ವೃದ್ಧಾಪ್ಯದಲ್ಲಿ ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಿದ್ದು ವಿಜಯಪುರ ಜಿಲ್ಲೆಯ "ಗೋಡಂಬಿ ಕಾಕಾ". ಆದ್ರೆ ದುರಾದೃಷ್ಟದ ವಿಚಾರ ಅಂದ್ರೆ ಸೋಶಿಯಲ್‌ ಮೀಡಿಯಾದಲ್ಲಿ ಕಾಮಿಡಿ ಸ್ಟಾರ್‌ ಆದ ಕೆಲವೇ ವರ್ಷದಲ್ಲಿ ಗೋಡಂಬಿ ಕಾಕಾ ಇಹಲೋಕ ತ್ಯಜಿಸುವ  ಮೂಲಕ ತಮ್ಮ ಅಭಿಮಾನಿಗಳಿಗೆ, ಪಾಲೋವರ್ಸ್‌ಗಳಿಗೆ ಶಾಕ್ ಕೊಟ್ಟಿದ್ದಾರೆ..

ಉ. ಕರ್ನಾಟಕದ ಫೇಮಸ್‌ ಗೋಡಂಬಿ ಕಾಕಾ ಇನ್ನಿಲ್ಲ: ತಮ್ಮ ವೃದ್ಧಾಪ್ಯದ ಸಮಯದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆಗಿದ್ದ ಗೋಡಂಬಿ ಕಾಕಾ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗೋಡಂಬಿ ಕಾಕಾ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮದೆಯಾದ ಕಾಮಿಡಿ ಕಂಟೆಂಟ್‌ ಮೂಲಕ ಸದ್ದು ಮಾಡಿದ್ದ ಗೋಡಂಬಿ ಕಾಕಾ ಸಾವು ಅಭಿಮಾನಿಗಳಲ್ಲಿ ನೋವು ತಂದಿದೆ... ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ, ಬೀದರ್‌, ಹುಬ್ಬಳ್ಳಿ ವರೆಗು ಗೋಡಂಬಿ ಕಾಕಾ ಎಂದೆ ಪ್ರಸಿದ್ಧಿ ಪಡೆದಿದ್ದ ಬಸಲಿಂಗಯ್ಯ ಹಿರೇಮಠ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಾಗೂರು ಗ್ರಾಮದ ಬಸಲಿಂಗಯ್ಯ ಕಡಿಮೆ ರಕ್ತದ ಒತ್ತಡದಿಂದ (ಲೋಬಿಪಿ)  ಅಸ್ವಸ್ಥಗೊಂಡಿದ್ದರು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ‌

ಜೂ.ಎನ್‌ಟಿಆರ್ ಹೊಸ ಲುಕ್ ನೋಡಿ ಫ್ಯಾನ್ಸ್ ಶಾಕ್.. ಟ್ರೋಲಿಂಗ್ ಜೋರು, ಛೇ!

ವೃದ್ಧಾಪ್ಯದಲ್ಲಿ ಸೋಶಿಯಲ್‌ ಮೀಡಿಯಾ ಸ್ಟಾರ್‌ಗಿರಿ: ಹೌದು, ಬಸಲಿಂಗಯ್ಯ ಚೆನ್ನಬಸಯ್ಯ ಹಿರೇಮಠ ಮೂಲತಃ ರಂಗಭೂಮಿ ಕಲಾವಿದರು. 19 ವಯಸ್ಸಿನಲ್ಲಿ ಬಣ್ಣ ಹಚ್ಚಿದ ಇವರು 40 ವರ್ಷಗಳ ಕಾಲ ರಂಗಭೂಮಿ ಕಲಾವಿದರಾಗಿ ಬೈಲಾಟಗಳಲ್ಲಿ ನಟಿಸುವ ಮೂಲಕ ಕಲಾಪ್ರೇಮಿಗಳನ್ನ ರಂಜಿಸಿದ್ದರು. ಅದ್ರಲ್ಲು ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ಪಾರಿಜಾತ ನಾಟಕದಲ್ಲಿ ಇವ್ರ ಪಾತ್ರ ಜನಪ್ರೀಯವಾಗಿತ್ತು. ಆದ್ರೆ 2019ರ ಬಳಿಕ ಕೋವಿಡ್‌ ಹಾಗೂ ವೃದ್ಧಾಪ್ಯಕ್ಕೆ ಸಿಲುಕಿದ್ದ ಬಸಲಿಂಗಯ್ಯರಿಗೆ ಸಂಕಷ್ಟ ಎದುರಾಗಿತ್ತು. ಜೊತೆಗೆ ಬೈಲಾಟ, ನಾಟಕ ಪರಂಪರೆ ಕಡಿಮೆಯಾಗ್ತಿದ್ದಂತೆ ಬಡತನದಲ್ಲಿ ಜೀವನ ನಡೆಸಲಾಗದೆ ಬಸಲಿಂಗಯ್ಯ ಅವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದರು. ರಂಗಭೂಮಿಯಿಂದ ಹೊಟ್ಟೆ ತುಂಬಲ್ಲ ಎಂದು ಅರಿತು ಸಣ್ಣ ಪುಟ್ಟ ಕಾಮಿಡಿ ವಿಡಿಯೋಗಳನ್ನ ಮಾಡೋದಕ್ಕೆ ಶುರು ಮಾಡಿದ್ರು. ಈ ಮೂಲಕ ಕಳೆದ ಮೂರ್ನಾಲ್ಕು ವರ್ಷದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಪ್ರಸಿದ್ಧಿಗೆ ಬಂದಿದ್ದರು. ವೃದ್ಧಾಪ್ಯಕ್ಕೆ ಸೆಡ್ಡು ಹೊಡೆದಿದ್ದ ಬಸಲಿಂಗಯ್ಯ ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಿದ್ದರು.

ಬಡತನದ ನಡುವೆ ಗೋಡಂಬಿ ಕಾಕಾನ ಹವಾ: ಸೋಶಿಯಲ್‌ ಮೀಡಿಯಾದಲ್ಲಿ ಕಾಮಿಡಿ ಕಂಟೆಂಟ್‌ ಉಳ್ಳ ಶಾರ್ಟ್‌ ವಿಡಿಯೋ ಮೂಲಕ ಜನರನ್ನ ರಂಜಿಸುತ್ತಿದ್ದರು. ಇನ್ಸ್ಟಾಗ್ರಾಂ, ರೀಲ್ಸ್‌ ಗಳಲ್ಲಿ ಇವ್ರ ಗೋಡಂಬಿ ಕಾಕಾ ಪಾತ್ರ ಬಹಳ ಜನಪ್ರೀಯತೆಗೆ ಕಾರಣವಾಗಿತ್ತು. ಗೋಡಂಬಿ ಕಾಕಾ ಎನ್ನುವ ಫೇಸ್ಬುಕ್‌ ಪೇಜ್‌, ಇನ್ಸ್ಟಾ ಐಡಿ ಮೂಲಕ ಜನರನ್ನ ರಂಜಿಸಿದ್ದರು. ಬಡತನ ನಡುವೆ ಯೂಟ್ಯೂಬ್‌ ಚಾನೆಲ್‌ ಮಾಡಿಕೊಂಡು ಅಲ್ಲಿ ಕಾಮಿಡಿ ದೃಶ್ಯಗಳನ್ನ ಅಪ್ಲೋಡ್‌ ಮಾಡ್ತಾ ಬಂದ ಹಣದಲ್ಲಿ ಜೀವನ ಸಾಗಿಸ್ತಿದ್ರು.

ಮುಂದಿನ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ: ಮಾಜಿ ಸಚಿವ ಬಿ.ಸಿ.ಪಾಟೀಲ್

ಪೇಸ್ಬುಕ್‌, ಇನ್ಸ್ಟಾದಲ್ಲಿ ಧೂಳೆಬ್ಬಿಸಿದ್ದ ಕಾಕಾ: ಕಳೆದ ಮೂರ್ನಾಲ್ಕು ವರ್ಷದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಗೋಡಂಬಿ ಕಾಕಾ ಹವಾ ಎಬ್ಬಿಸಿದ್ದರು. ಪೇಸ್ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಂ, ರೀಲ್ಸ್‌ ಗಳಲ್ಲಿ ಗೋಡಂಬಿ ಕಾಕಾನದ್ದೆ ವಿಡಿಯೋಗಳು ಓಡಾಡ್ತಿದ್ವು. ತಮ್ಮ ಇನ್‌ಸ್ಟಾ ಐಡಿಯಲ್ಲಿ 1 ಲಕ್ಷ 90 ಸಾವಿರ ಪಾಲೋವರ್ಸ್‌,  ಫೇಸ್ಬುಕ್‌ ಫೇಜ್‌ ನಲ್ಲಿ 80 ಸಾವಿರಕ್ಕೂ ಅಧಿಕ ಪಾಲೋವರ್ಸ್‌, ತಮ್ಮ ವಯಕ್ತಿಕ ಯೂಟ್ಯೂಬ್‌ ಚಾನಲ್‌ ನಲ್ಲಿ 75 ಸಾವಿರಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್‌ ಹೊಂದಿದ್ದವರು. ಗೋಡಂಬಿ ಕಾಕಾನ ಕಾಮಿಡಿ ಯಾವ ಮಟ್ಟಿಗೆ ಹವಾ ಮಾಡಿದ್ದವು ಎಂದರೆ ಬಹುತೇಕ ವಿಡಿಯೋ ಗಳೂ ಮಿಲಿಯನ್‌ ವೀಕ್ಷಣೆ ಪಡೆಯುತ್ತಿದ್ದವು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಯುಟ್ಯೂಬ್‌ನಲ್ಲಿ ಕಾಮಿಡಿ ವಿಡಿಯೋ ಅಪ್ಲೇಡ್‌ ಮಾಡಿದ್ದರು. 5 ದಿನಗಳ ಹಿಂದೆ ತಮ್ಮ ಅಭಿಮಾನಿಗಳಲ್ಲಿ ನಾನು ಬಡವ, ನನ್ನ ವಿಡಿಯೋ ವೀಕ್ಷಣೆ ಮಾಡಿ, ಶೇರ್‌ ಮಾಡುವ ಮೂಲಕ ಬೆಂಬಲಿಸಿ ಎಂದು ಸಹಾಯವನ್ನು ಮಾಡುವಂತೆ ಕೇಳಿಕೊಂಡಿದ್ದರು.

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ