ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರನಿಂದ ಸನಾತನ ಧರ್ಮದ ಟೀಕೆ, ಕೊಲ್ಲೂರಿಗೆ ಪತ್ನಿ ಭೇಟಿ!

Published : Mar 08, 2025, 05:22 PM ISTUpdated : Mar 08, 2025, 05:24 PM IST
ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರನಿಂದ ಸನಾತನ ಧರ್ಮದ ಟೀಕೆ, ಕೊಲ್ಲೂರಿಗೆ ಪತ್ನಿ ಭೇಟಿ!

ಸಾರಾಂಶ

ತಮಿಳುನಾಡು ಸಿಎಂ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಅವರು ದೇವಿಯ ವಿಶೇಷ ಭಕ್ತೆ ಎಂದು ಗುರುತಿಸಿಕೊಂಡಿದ್ದಾರೆ. ಅವರ ಸ್ನೇಹಿತೆಯೊಬ್ಬರು ದೇವಿಗೆ ಚಿನ್ನದ ಕಿರೀಟವನ್ನು ಅರ್ಪಿಸಿದರು. ಮೂಕಾಂಬಿಕಾ ದೇವಾಲಯವು 1200 ವರ್ಷಗಳ ಇತಿಹಾಸವನ್ನು ಹೊಂದಿದ್ದು, ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳವಾಗಿದೆ.

ಉಡುಪಿ (ಮಾ.8): ತಮಿಳುನಾಡು ಸಿಎಂ ಸ್ಟಾಲಿನ್ ಪತ್ನಿ ಕೊಲ್ಲೂರು ಮೂಕಾಂಬಿಕೆ ದೇಗುಲ ಭೇಟಿ ನೀಡಿದ್ದಾರೆ. ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಶುಕ್ರವಾರ ದೇಗುಲಕ್ಕೆ ಭೇಟಿಕೊಟ್ಟು ಮೂಕಾಂಬಿಕೆಯ ದರ್ಶನ ಪಡೆದರು. ಸ್ನೇಹಿತೆಯ     ಮತ್ತು ಆಪ್ತರ ಜೊತೆಗೆ ಮೂಕಾಂಬಿಕೆ ದರ್ಶನ ಕೈಗೊಂಡರು.

ದುರ್ಗಾ  ಸ್ಟಾಲಿನ್  ಕೊಲ್ಲೂರು ಮೂಕಾಂಬಿಕೆಯ ವಿಶೇಷ ಭಕ್ತೆ ಯಾಗಿದ್ದಾರೆ.  ಪುತ್ರ ಉದಯ ನಿಧಿ ಸ್ಟಾಲಿನ್ ನಿರಂತರ "ಸನಾತನ" ಟೀಕೆ ಹಿನ್ನೆಲೆಯಲ್ಲಿ ಮನೆಯವರ ವಿಚಾರಧಾರೆ ಜೊತೆ ಅಂತರ ಕಾಯ್ದುಕೊಂಡು ನಿರಂತರ ದೇಗುಲ ಭೇಟಿಯಿಂದ ಗಮನ ಸೆಳೆದಿದ್ದಾರೆ.

ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆಗೆ ವಿರೋಧ: ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲ ಕೋರಿದ ಸ್ಟಾಲಿನ್‌!

ದಕ್ಷಿಣ ಭಾರತದ ವಿವಿಧ ದೇಗುಲ ಭೇಟಿ ಹಾಗೂ ಕೊಡುಗೆಗಳಿಂದ ದುರ್ಗಾ ಸ್ಟಾಲಿನ್ ದೈವ ಭಕ್ತೆ ಎನಿಸಿಕೊಂಡಿದ್ದಾರೆ. ಜೊತೆಗೆ ಬಂದಿದ್ದ ಸ್ನೇಹಿತೆಯಿಂದ ಮೂಕಾಂಬಿಕಾ ದೇವಿಗೆ ಚಿನ್ನದ ಕಿರೀಟ ಅರ್ಪಣೆ ಮಾಡಲಾಗಿದೆ. ಖಾಸಗಿಯಾಗಿ ದೇವಿಗೆ ಕಿರೀಟ ಅರ್ಪಿಸಿ ಆಶೀರ್ವಾದ ಪಡೆದು  ತಂಡ ತೆರಳಿದೆ. 

ದೇಗುಲದ ವಿಶೇಷ:
ಮೂಕಾಂಬಿಕಾ ದೇವಸ್ಥಾನವು 1200 ವರ್ಷಗಳ ಇತಿಹಾಸ ಹೊಂದಿದೆ. ಮೂಕಾಂಬಿಕಾ ದೇವಿ ಆದಿ ಮಾಯೆಯಾಗಿ ನೆಲೆಯಾಗಿದ್ದಾಳೆ. ದೇವಿಯನ್ನು ವಾಗ್‌ದೇವಥಾ (ಮಾತು ಮತ್ತು ಅಕ್ಷರಗಳ ದೇವತೆ) ಎಂದು ಪೂಜಿಸಲಾಗುತ್ತದೆ. ಪಾರ್ವತಿ ದೇವಿಗೆ ಅರ್ಪಿತವಾದ ಏಕೈಕ ದೇವಾಲಯ ಇದಾಗಿದೆ. ಶಕ್ತಿ ಮತ್ತು ಶಿವನ ಸಮ್ಮಿಲನವಾದ  ಜ್ಯೋತಿರ್-ಲಿಂಗ  ಇಲ್ಲಿದೆ. ಪಾರ್ವತಿ, ಸರಸ್ವತಿ ಮತ್ತು ಲಕ್ಷ್ಮಿ  ಈ ಮೂರು ರೂಪದಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ಇಲ್ಲಿನ ಜ್ಯೋತಿರ್ಲಿಂಗದ ಬಲ ಅರ್ಧವು ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಪ್ರತಿನಿಧಿಸಿದರೆ ಎಡ ಅರ್ಧವು ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿಯನ್ನು ಪ್ರತಿನಿಧಿಸುತ್ತದೆ.

ತಡಬೇಡ, ಮದುವೆಯಾದ ತಕ್ಷಣವೇ ಮಕ್ಕಳನ್ನು ಮಾಡಿಕೊಳ್ಳಿ: ಮುಖ್ಯಮಂತ್ರಿ ಸ್ಟಾಲಿನ್‌ ಸಲಹೆ

ರಾಜಕಾರಣಿಗಳು, ಸಿನೆಮಾದವರು, ಗಣ್ಯ ವ್ಯಕ್ತಿಗಳು ಹೆಚ್ಚಾಗಿ ಇಲ್ಲಿ ಭೇಟಿ ನೀಡುತ್ತಿದ್ದು, ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಯಾತ್ರಾ ಸ್ಥಳ. ಇಲ್ಲಿಗೆ ಬರುವ ಭಕ್ತರಲ್ಲಿ ಹೆಚ್ಚಿನ ಭಕ್ತರು ಕೇರಳದವರು, ಕರ್ನಾಟಕ ಮತ್ತು ತಮಿಳುನಾಡಿನವರು. 

PREV
Read more Articles on
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌