ಶಿವಮೊಗ್ಗ: ಕೋಳಿ ಫಾರಂನಲ್ಲಿ ಆತಂಕ ಮೂಡಿಸಿದ್ದ ಹೆಬ್ಬಾವು ಹಿಡಿದ ಸ್ನೇಕ್ ಕಿರಣ್..!

By Girish Goudar  |  First Published Sep 15, 2022, 10:14 AM IST

ಹೆಬ್ಬಾವು ಹಿಡಿಯುತ್ತಿದ್ದಂತೆಯೇ ಸ್ನೇಕ್ ಕಿರಣ್ ಕೈಗೆ ಸುತ್ತಿಕೊಂಡು ನೆರೆದವರು ಮತ್ತಷ್ಟು ಗಾಬರಿಯ ಜೊತೆಗೆ ಆಶ್ಚರ್ಯ ಚಕಿತರಾದರು


ವರದಿ: ರಾಜೇಶ್, ಎಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ

ಶಿವಮೊಗ್ಗ(ಸೆ.15): ಶಿವಮೊಗ್ಗ ತಾಲೂಕಿನ ಗಾಜನೂರು ತುಂಗಾ ಅಣೆಕಟ್ಟೆ ಬಳಿಯ ಲಕ್ಷ್ಮೀ ಕೋಳಿ ಫಾರಂನಲ್ಲಿ ಸುಮಾರು ಏಳೂವರೆ ಅಡಿ ಉದ್ದದ ಹೆಬ್ಬಾವು ಕೋಳಿ‌ ಫಾರಂ ಪಕ್ಕದ ಅಡಿಕೆ ತೋಟದಲ್ಲಿ ಪತ್ತೆಯಾಗಿತ್ತು. ತೋಟದ ಕೆಲಸಕ್ಕೆ ಬಂದವರು ಹೆಬ್ಬಾವನ್ನು ಕಂಡು ಗಾಬರಿಗೊಂಡಿದ್ದರು. 

Tap to resize

Latest Videos

ಕೂಡಲೇ ತೋಟದ ಮಾಲೀಕ ರಾಕೇಶ್ ರಿಗೆ ಮಾಹಿತಿ ನೀಡಿದ್ದರು. ‌ತೋಟದ ಮಾಲೀಕರು ಸ್ನೇಕ್ ಕಿರಣ್​ಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಕಿರಣ್ ಹೆಬ್ಬಾವುನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. 

ಉತ್ತರಕನ್ನಡ: ಕುಮಟಾದಲ್ಲಿ ಅಪರೂಪದ ಬಿಳಿ ಹೆಬ್ಬಾವು ಪತ್ತೆ

ಹೆಬ್ಬಾವು ಹಿಡಿಯುತ್ತಿದ್ದಂತೆಯೇ ಸ್ನೇಕ್ ಕಿರಣ್ ಕೈಗೆ ಸುತ್ತಿಕೊಂಡು ನೆರೆದವರು ಮತ್ತಷ್ಟು ಗಾಬರಿಯ ಜೊತೆಗೆ ಆಶ್ಚರ್ಯ ಚಕಿತರಾದರು. ಕೊನೆಗೆ ಕಿರಣ್ ಹೆಬ್ಬಾವು ನ್ನು ಚೀಲಕ್ಕೆ ಹಾಕಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಟ್ಟರು. ಜೊತೆಗೆ ತೋಟದ ಮಾಲೀಕರು, ಸ್ಥಳಿಯರು ಹಾಗೂ ಕೆಲಸಗಾರರಿಗೆ ಹೆಬ್ಬಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. 
 

click me!