ತಾಳಿಕೋಟೆ: ಸೀಟಿನ ಕೆಳಗೆ ಹಾವಿದ್ದರೂ ಗೊತ್ತಿಲ್ಲದೆ ಬೈಕಲ್ಲಿ ಸುತ್ತಿದ..!

By Kannadaprabha News  |  First Published Jun 26, 2021, 8:28 AM IST

* ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದ ಘಟನೆ
* ಬೈಕ್‌ ಮೆಕ್ಯಾನಿಕ್‌ ಸೀಟು ಬಿಚ್ಚಿದಾಗ ಹಾವು ಇರುವುದು ಪತ್ತೆ
* ಹಾವು ಕಂಡು ಹೌಹಾರಿದ  ಬೈಕ್‌ ಮಾಲೀಕ


ತಾಳಿಕೋಟೆ(ಜೂ.26):  ಬೈಕ್‌ ಸೀಟಿನ ಕೆಳಗೆ ಹಾವು ಇರುವುದನ್ನು ಅರಿಯದೆ ಊರೆಲ್ಲಾ ಸುತ್ತಾಡಿದ ವ್ಯಕ್ತಿ, ದುರಸ್ತಿಗೆಂದು ಬೈಕ್‌ ಅನ್ನು ಗ್ಯಾರೇಜ್‌ಗೆ ಬಿಟ್ಟಾಗ ಹಾವು ಕಂಡು ಹೌಹಾರಿದ ಘಟನೆ ಜಿಲ್ಲೆಯ ಯಲ್ಲಿ ನಡೆದಿದೆ. 

ಬೈಕ್‌ ಮಾಲೀಕ ನಿತ್ಯ ಬೈಕ್‌ ಮೇಲೆ ಕೆಲಸ ಕಾರ್ಯಗಳಿಗೆ ಸುತ್ತಾಡುತ್ತಿದ್ದ. ಅಂತೆಯೇ ಶುಕ್ರವಾರ ಕೂಡ ಊರೆಲ್ಲಾ ಓಡಾಡಿದ್ದಾನೆ. ಈ ನಡುವೆ ಬೈಕ್‌ನ ಹೆಡ್‌ಲೈಟ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಅದನ್ನು ರಿಪೇರಿ ಮಾಡಿಸಲು ಪಟ್ಟಣದ ಗ್ಯಾರೇಜ್‌ಗೆ ತಂದಿದ್ದಾನೆ. 

Tap to resize

Latest Videos

ಲಾಕ್‌ಡೌನ್‌ ಎಫೆಕ್ಟ್‌: ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ

ಬೈಕ್‌ ಮೆಕ್ಯಾನಿಕ್‌ ಸೀಟು ಬಿಚ್ಚಿದಾಗ ಹಾವು ಇರುವುದು ಕಂಡಿದೆ. ಇದನ್ನು ಕಂಡು ಬೈಕ್‌ ಮಾಲೀಕ ಆತಂಕಗೊಂಡಿದ್ದಾನೆ. ಬೈಕ್‌ ಓಡಿಸುತ್ತಿದ್ದಾಗ ಹಾವು ಹೊರಬಂದು ಕಚ್ಚಿದ್ದರೆ ತನ್ನ ಸ್ಥಿತಿ ಏನಾಗುತ್ತಿತ್ತು ಎಂದು ನೆನೆದು ಆತಂಕಗೊಂಡಿದ್ದಾನೆ.
 

click me!