ಪರಮೇಶ್ವರ್‌ ಸಜ್ಜನ, ಅಜಾತಶತ್ರು: ಹಾಡಿ ಹೊಗಳಿದ ಸಚಿವ ಅಶೋಕ್‌

By Kannadaprabha News  |  First Published Jun 26, 2021, 7:55 AM IST

* ಅಶೋಕ್‌ ಪ್ರಭಾವಿ ಸಚಿವರಾಗಿದ್ದು, ಅವರಿಗೆ ಮತ್ತಷ್ಟು ಒಳ್ಳೆಯದಾಗಲಿ ಎಂದ ಪರಂ
* ಚಿನ್ನ ರಸ್ತೆಯಲ್ಲಿ ಇದ್ದರೂ ಎಲ್ಲೇ ಇದ್ದರೂ ಚಿನ್ನಾನೇ’ ಎಂದ ಅಶೋಕ್‌
* . ಕೊರಟಗೆರೆಯ ಉಪನೋಂದಣಿ ಕಚೇರಿ ಉದ್ಘಾಟನಾ ಸಮಾರಂಭ


ತುಮಕೂರು(ಜೂ.26):  ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಅಜಾತಶತ್ರು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೊಗಳಿದರೆ, ಅಶೋಕ್‌ ಪ್ರಭಾವಿ ಸಚಿವರಾಗಿದ್ದು, ಅವರಿಗೆ ಮತ್ತಷ್ಟು ಒಳ್ಳೆಯದಾಗಲಿ ಎಂದು ಪರಮೇಶ್ವರ್‌ ಕೊಂಡಾಡಿದ್ದಾರೆ. 

ಹೀಗೆ ರಾಜ್ಯದ ಪ್ರಮುಖ ನಾಯಕರಿಬ್ಬರು ಒಬ್ಬರನ್ನೊಬ್ಬರು ಹೊಗಳಿದ ಘಟನೆ ಶುಕ್ರವಾರ ನಡೆಯಿತು. ಕೊರಟಗೆರೆಯ ಉಪನೋಂದಣಿ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಅಶೋಕ್‌, ‘ಚಿನ್ನ ರಸ್ತೆಯಲ್ಲಿ ಇದ್ದರೂ ಎಲ್ಲೇ ಇದ್ದರೂ ಚಿನ್ನಾನೇ’ ಎಂದು ಹಾಡಿ ಹೊಗಳಿದ್ದಾರೆ. 

Tap to resize

Latest Videos

‘ರಾಹುಲ್‌ ಗಾಂಧಿ ಹೆಸ್ರು ಹೇಳಿದ್ರೆ ಕಾಂಗ್ರೆಸ್‌ಗೆ 4 ಓಟು ಬೀಳಲ್ಲ'

ಇನ್ನು ತಮ್ಮ ಭಾಷಣದ ಕೊನೆಯಲ್ಲಿ ಪರಮೇಶ್ವರ್‌, ‘ನಿಮಗೆ ಮತ್ತಷ್ಟು ಒಳ್ಳೆಯದಾಗಲಿ. ಎಲ್ಲಾ ಪಕ್ಷದಲ್ಲೂ ಸಿಎಂ ಹುದ್ದೆ ಬಗ್ಗೆ ಚರ್ಚೆ ಆಗುತ್ತಿದ್ದು, ನಿಮಗೆ ಮತ್ತಷ್ಟು ಶಕ್ತಿ ಬರಲಿ’ ಎಂದು ಪರೋಕ್ಷವಾಗಿ ಅಶೋಕ್‌ಗೆ ಸಿಎಂ ಆಗುವ ಶಕ್ತಿ ಇದೆ ಎಂದರು.
 

click me!