ಮನೆಯಲ್ಲಿ ಮೂವರು ಮಕ್ಕಳೊಂದಿಗೆ ಒಂದೇ ಸಾಲಿನಲ್ಲಿ ಮಲಗಿದ್ದ ದಂಪತಿಗೆ ವಿಷಸರ್ಪ ಕಚ್ಚಿದ್ದು, ಪತಿ ಸಾವನ್ನಪ್ಪಿದರೆ- ಪತ್ನಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
ಬೆಳಗಾವಿ (ಜೂ.11): ರಾತ್ರಿ ವೇಳೆ ಮನೆಯಲ್ಲಿ ಗಂಡ-ಹೆಂಡತಿ ಹಾಗೂ ಮಕ್ಕಳು ಒಂದೇ ಸಾಲಿನಲ್ಲಿ ಮಲಗಿದ್ದಾಗ ಮನೆಯೊಳಗೆ ಹೊಕ್ಕ ವಿಷಸರ್ಪ (ಕೊಳಕುಮಂಡಲ ಹಾವು) ಗಂಡ-ಹೆಂಡತಿ ಇಬ್ಬರಿಗೂ ಕಚ್ಚಿದೆ. ಕೂಡಲೇ ಎಚ್ಚೆತ್ತುಕೊಂಡು ರಾತ್ರೋ ರಾತ್ರಿ ಕುಟುಂಬ ಸದಸ್ಯರು ಆಸ್ಪತ್ರೆಗೆ ಹೋಗಿ ದಾಖಲಾದರೂ ಮನೆ ಯಜಮಾನ ಪತಿ ಬದುಕುಳಿಯಲಿಲ್ಲ. ಇನ್ನು ಪತ್ನಿ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಬೆಳಗಾವಿಯ ವಡಗಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಮೂಲದ ದಂಪತಿ ಬೆಳಗಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ವಾಚ್‌ಮನ್ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ, ನಿನ್ನೆ ರಾತ್ರಿ ವೇಳೆ ಮಕ್ಕಳೊಂದಿಗೆ ಮಲಗಿದ್ದಾಗ ಪತಿ-ಪತ್ನಿಗೆ ಹಾವು ಕಚ್ಚಿದೆ. ಇದರಿಂದ ವಿಷ ತೀವ್ರ ಏರಿಕೆಯಾಗಿದ್ದು, ಪತಿ ಸಾವನ್ನಪ್ಪಿದ್ದು, ಪತ್ನಿ ಬದುಕಿನ ಮಧ್ಯೆ ಪತ್ನಿ ಹೋರಾಟ ಮಾಡುತ್ತಿದ್ದಾರೆ.
ಮಲಗಿದ್ದಾಗ ಹಾವು ಕಚ್ಚಿದೆ ಅಂದ್ರೂ ಆಸ್ಪತ್ರೆಗೆ ಸೇರಿಸಲಿಲ್ಲ: ಎದ್ದೇಳುವಷ್ಟರಲ್ಲಿ ಹೆಣವಾಗಿದ್ದ ಮಗಳು
ಭಯಭೀತರಾದ ಮೂವರು ಮಕ್ಕಳು: ರಾತ್ರಿ ಊಟ ಮಾಡಿ ಮಕ್ಕಳೊಂದಿಗೆ ಮಲಗಿದ್ದ ದಂಪತಿಗೆ ಹಾವು ಕಚ್ಚಿದೆ. ಸ್ಥಳೀಯರ ನೆರವಿನಿಂದ ಜಿಲ್ಲಾಸ್ಪತ್ರೆಗೆ ದಂಪತಿಯನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸಿದ್ದಪ್ಪ ಚಿವಟಗುಂಡಿ(35) ಸಾವನ್ನಪ್ಪಿದ್ದಾರೆ. ಇನ್ನು ನಾಗವ್ವ ಚಿವಟಗುಂಡಿ(28) ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಇನ್ನು ಮೂವರ ಮಕ್ಕಳು ಭಯಭೀತರಾಗಿದ್ದು, ಮುಂದಿನ ಜೀವನ ಹೇಗೆಂಬ ರಾತ್ರಿ ಊಟ ಮಾಡಿ ತಮ್ಮ ಮೂವರು ಮಕ್ಕಳೊಂದಿಗೆ ನಿದ್ದೆಗೆ ಜಾರಿದ್ದ ದಂಪತಿಗೆ ಹಾವು ಯಮಸ್ವರೂಪಿಯಾಗಿ ಬಂದಿದ್ದಾನೆ.
ಮಲಗಿದ್ದ ಜಾಗದಲ್ಲಿ ಒದ್ದಾಡುತ್ತಿದ್ದ ತಂದೆ-ತಾಯಿ: ಇನ್ನು ಮನೆಯಲ್ಲಿ ಮಲಗಿದ್ದ ವೇಳೆ ಹಾಸಿಗೆಯಲ್ಲಿಯೇ ತಂದೆ-ತಾಯಿ ಒದ್ದಾಡುವುದನ್ನು ನೋಡಿದ ಮಕ್ಕಳು ಕೂಡಲೇ ಎದ್ದು, ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ನಂತರ, ಪಕ್ಕದ ಮನೆಯವರು ಬಂದು ಹಾಸಿಗೆಯನ್ನು ಎತ್ತಿ ನೋಡಿದಾಗ ತಂದೆ- ತಾಯಿ ಮಲಗಿದ್ದ ಜಾಗದಲ್ಲಿ ವಿಷಕಾರಿ ಹಾವಿರುವುದು ಕಂಡುಬಂದಿದೆ. ಇನ್ನು ಹಾವು ಕಚ್ಚಿದವರನ್ನು ಸಾಗಿಸಲು ಯಾವುದೇ ವಾಹನಗಳು ಇಲ್ಲದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಕೆಲ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್ ಮೂಲಕ ಸಿದ್ದಪ್ಪ ಹಾಗೂ ನಾಗವ್ವ ಬೀಮ್ಸ್ ಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಪತಿ ಸಿದ್ದಪ್ಪ ಸಾವನ್ನಪ್ಪಿದ್ದನು. ಈ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಟವಾಡುತ್ತಿದ್ದ ವೇಳೆ ಪ್ರತ್ಯಕ್ಷಗೊಂಡ ಹಾವು, ಚೂಯಿಂಗ್ ಗಮ್ ರೀತಿ ಜಗಿದು ಕೊಂದ 3 ವರ್ಷದ ಮಗು!
ವಿಜಯಪುರದಲ್ಲಿ ಹಾವು ಕಚ್ಚಿ ರೈತ ಸಾವು : ಇನ್ನು ನಿನ್ನೆ ರಾತ್ರಿ ವಿಜಯಪುರದಲ್ಲಿ ಜಮೀನಿಗೆ ನೀರು ಹಾಯಿಸಲು ಹೋಗಿದ್ದ ವೇಳೆ ವಿಷಪೂರಿತ ಹಾವು ಕಡಿತವಾಗಿ ರೈತ ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಾವಿನಹಳ್ಳಿ ರಸ್ತೆಯ ತೆಗ್ಗಿಹಳ್ಳಿ ತೋಟದ ವಸ್ತಿಯಲ್ಲಿ ಘಟನೆ ನಡೆದಿದೆ. ಮಾಳಪ್ಪ ರಾಮಣ್ಣ ಹೂಗಾರ (25) ಮೃತಪಟ್ಟಿರುವ ದುರ್ದೈವಿ ಎಂದು ಗುರುತಿಸಲಾಗಿದೆ. ಕೃಷಿ ಜಮೀನಿನಲ್ಲಿ ನೀರು ಹಾಯಿಸುವ ವೇಳೆ ಹಾವು ಕಚ್ಚಿದೆ. ಮಾಳಪ್ಪನ್ನು ಪಟ್ಟಣದ ಸರ್ಕಾರಿ ಸಾರಜನಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾನೆ. ಇನ್ನು ಗ್ರಾಮಸ್ಥರು ಹೊಲದಲ್ಲಿದ್ದ ಹಾವನ್ನು ಹುಡುಕಿ ಹೊಡೆದು ಸಾಯಿಸಿದ್ದಾರೆ. ಘಟನೆ ಬಗ್ಗೆ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.