ಚರ್ಮದ ಬಣ್ಣ ಬದಲಾದರೆ ನಿರ್ಲಕ್ಷಿಸಬೇಡಿ: ಡಾ.ಎಸ್.ವೀರಣ್ಣ

By Kannadaprabha News  |  First Published Nov 27, 2023, 10:29 AM IST

ಚರ್ಮದ ಮೇಲಿನ ಕೆಲವೊಂದು ಬದಲಾವಣೆ ಕಾಯಿಲೆಯ ಪ್ರಾರಂಭಿಕ ಲಕ್ಷಣಗಳಾಗಿರಬಹುದು. ನಿರ್ಲಕ್ಷ ಬೇಡ ಎಂದು ಜೆಎಸ್ಎಸ್ ಅಸ್ಪತ್ರೆಯ ಚರ್ಮರೋಗ ತಜ್ಞ ಡಾ.ಎಸ್. ವೀರಣ್ಣ ಸಲಹೆ ನೀಡಿದರು.


 ಸರಗೂರು :  ಚರ್ಮದ ಮೇಲಿನ ಕೆಲವೊಂದು ಬದಲಾವಣೆ ಕಾಯಿಲೆಯ ಪ್ರಾರಂಭಿಕ ಲಕ್ಷಣಗಳಾಗಿರಬಹುದು. ನಿರ್ಲಕ್ಷ ಬೇಡ ಎಂದು ಜೆಎಸ್ಎಸ್ ಅಸ್ಪತ್ರೆಯ ಚರ್ಮರೋಗ ತಜ್ಞ ಡಾ.ಎಸ್. ವೀರಣ್ಣ ಸಲಹೆ ನೀಡಿದರು.

ಪಟ್ಟಣದ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಜೆಎಸ್ಎಸ್ ಆಸ್ಪತ್ರೆ ವತಿಯಿಂದ ನಡೆಸಲಾದ ಉಚಿತ ಶಿಬಿರ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್ ಅಸ್ಪತ್ರೆ ಚರ್ಮರೋಗ ತಜ್ಞ ಡಾ.ಎಸ್. ವೀರಣ್ಣ ಮಾತನಾಡಿದರು.

Latest Videos

undefined

ದ ಸಮಸ್ಯೆ ಸಾಮಾನ್ಯವಾದದು ಎಂದು ನಿರ್ಲಕ್ಷಿಸಬಾರದು. ಅಸಮ ಚರ್ಮದ ಟೋನ್ ಇದ್ದಾಗ ಚರ್ಮದ ಬಣ್ಣವು ಕೆಲವು ಭಾಗಗಳಲ್ಲಿ ಸ್ಪಷ್ಟವಾಗಿ ಇರುತ್ತದೆ ಮತ್ತು ಕೆಲವು ಭಾಗಗಳಲ್ಲಿ ಗಾಢ ಆಗಿರುತ್ತದೆ. ಇದು ಕೂಡ ವಿಚಿತ್ರವಾಗಿ ಕಾಣುತ್ತದೆ. ಈ ಚರ್ಮದ ಟೋನ್ ಅನ್ನು ಸರಿ ಮಾಡಲು ಅನೇಕ ಜನರು ಪಾರ್ಲರ್ ಗೆ ಹೋಗುತ್ತಾರೆ. ಮತ್ತು ಕೆಲವು ರಾಸಾಯನಿಕ ಭರಿತ ಉತ್ಪನ್ನ ಬಳಸಲು ಪ್ರಾರಂಭಿಸುತ್ತಾರೆ. ಇದು ಯಾವುದೇ ವಿಶೇಷ ಪ್ರಯೋಜನ ನೀಡುವುದಿಲ್ಲ ಎಂದರು.

ಮಳೆಗಾಲ ಬಂತೆಂದರೆ ಚರ್ಮಕ್ಕೆ ಸಂಬಂಧಪಟ್ಟ ಅಲರ್ಜಿಗಳು ಹೆಚ್ಚು ಕಾಣಿಸಿಕೊಳ್ಳಲಾರಂಭಿಸುತ್ತವೆ. ಇದರ ಜೊತೆ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಬರುತ್ತವೆ. ಆರ್ದ್ರ ವಾತಾವರಣ ಮತ್ತು ಕಡಿಮೆ ತಾಪಮಾನ ಇರುವ ವಾತಾವರಣ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಅಭಿವೃದ್ಧಿ ಹೊದುವುದಕ್ಕೆ ಸೂಕ್ತ ವಾತಾವರಣ. ಇದು ತುರಿಕೆ, ಕೆಂಪು ಮತ್ತು ಇತರ ಚರ್ಮದ ಸಮಸ್ಯೆ ಉಂಟುಮಾಡುತ್ತದೆ. ಅಲ್ಲದೆ, ಮಾನ್ಸೂನ್ ಸಮಯದಲ್ಲಿ ಅತಿಯಾದ ಬೆವರು ಚರ್ಮಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಪಟ್ಟ ಅಲರ್ಜಿಗಳು ಕಂಡು ಬಂದಲ್ಲಿ ಇನ್ನು ಎರಡು ತಿಂಗಳೂ ಕೂನೆ ಭಾನುವಾರ ಪಟ್ಟಣದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಜೆಎಸ್ಎಸ್ ಆಸ್ಪತ್ರೆ ವತಿಯಿಂದ ನಡೆಸಲಾದ ಉಚಿತ ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಮತ್ತು ಸಲಹೆ ಪಡೆಯುವುದು ತುಂಬಾ ಉತ್ತಮ ಎಂದರು.

ಶಿಬಿರದಲ್ಲಿ ಸುಮಾರು 584 ರೋಗಿಗಳು ಬಂದು ವಿವಿಧ ವಿಭಾಗಗಳಲ್ಲಿ ಚಿಕಿತ್ಸೆ ಪಡೆದರು. ಸಾಮಾನ್ಯ ವೈದ್ಯಕೀಯ ವಿಭಾಗದ ಡಾ. ನಿಮ್ರ್ಹಾಫಾತೀಮಾ, ಹೃದ್ರೋಗ ವಿಭಾಗದ ಡಾ. ಪೂರ್ಣಿಮಾ, ಶಸ್ತ್ರ ಚಿಕಿತ್ಸಾ ವಿಭಾಗದ ಡಾ.ಕೆ.ಬಿ. ನಿತಿನ್, ಕಣ್ಣಿನ ವಿಭಾಗದ ಬಿಂದುಮಾಲಿನಿ, ಮಕ್ಕಳ ವಿಭಾಗದ ಡಾ. ಮಂಜುನಾಥ್, ಕಿವಿ ,ಮೂಗು, ಗಂಟಲು ವಿಭಾಗದ ಡಾ. ಸಂಧ್ಯಾ, ಮೂಳೆ ರೋಗ ವಿಭಾಗದ ಡಾ.ಎಂ.ಜೆ. ಶ್ರೇಯಸ್, ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಡಾ.ಟಿ. ಸೌಮ್ಯಶ್ರೀ, ಶ್ವಾಸಕೋಶ ವಿಭಾಗದ ಡಾ. ವಿವೇಕ್, ದಂತ ಚಿಕಿತ್ಸಾ ವಿಭಾಗದ ಡಾ.ಟಿ.ಎಸ್. ಅಶ್ವಿನಿ, ಹಿರಿಯ ನಾಗರಿಕರ ವಿಭಾಗದ ಡಾ. ಅಜಯ್ ಶರ್ಮಾ, ಜಠರ, ಕರುಳು ವಿಭಾಗದ ಡಾ. ದೇವಾಂಶ್, ಮೂತ್ರಪಿಂಡ ವಿಭಾಗ ಡಾ. ಫರಾಜ್, ಮೂತ್ರನಾಳ ವಿಭಾಗದ ಡಾ. ಕರಣ್, ಸರಗೂರು ಜೆ.ಎಸ್.ಎಸ್ ಶಿಕ್ಷಣ, ಸಂಸ್ಥೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುಧಾ ಮೃತ್ಯುಂಜಯಪ್ಪ, ಶಾಲಾ ಮತ್ತು ಕಾಲೇಜು ಮುಖ್ಯಸ್ಥ ಅಂಜುಮ್ ಪಾಷ, ಗಂಗಾಧರಯ್ಯ, ಮಹದೇವಸ್ವಾಮಿ, ಕೃಷ್ಣಮೂರ್ತಿ, ಅಶೋಕ್, ಜೆಎಸ್ಎಸ್ ಆಸ್ಪತ್ರೆಯ ಮಾರ್ಕೇಂಟಿಂಗ್ ವಿಭಾಗದ ಮಲ್ಲಿಕಾರ್ಜುನಸ್ವಾಮಿ, ಜಗದೀಶ್, ಪರಶಿವಮೂರ್ತಿ, ಜೆಎಸ್ಎಸ್ ಶಿಕ್ಷಣ ಸಂಸ್ಥೆ ಸಿಬ್ಬಂದಿ, ಶಾಲಾ ಮಕ್ಕಳು, ಜೆಎಸ್ಎಸ್ ಆಸ್ಪತ್ರೆ ಸಿಬ್ಬಂದಿ ಕಿರಣ್, ಶ್ರೀಧರ್, ಶಿವಪ್ರಸಾದ್ , ಮಂಜುನಾಥ್, ಸ್ಮಿತಾ, ಸುನಿಲ್ ಕುಮಾರ್, ಕುಸುಮ, ಎ.ಆರ್. ವರ್ಷಿಣಿ, ಕೆ.ಎನ್. ಸುನಿಲ್ ಕುಮಾರ್, ಎಂ.ಎನ್. ಮಹದೇವಸ್ವಾಮಿ, ರೋಹಿತ್, ನಿತಿನ್ ಇದ್ದು, ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

click me!