Network: ಟವರ್ ಇಲ್ಲದ ಹಳ್ಳಿಗಳಿಗೂ 4G ನೆಟ್‌ವರ್ಕ್; ಶಿರಸಿಯ ಯುವಕರ ಸಾಧನೆಗೆ ಮೆಚ್ಚುಗೆ!

Published : Nov 03, 2026, 04:09 PM ISTUpdated : Nov 06, 2026, 04:53 PM IST
sirsi youths

ಸಾರಾಂಶ

ಮೊಬೈಲ್‌ನಲ್ಲಿ ನೆಟ್‌ವರ್ಕ್ ಸಿಗದೆ ಪರದಾಡುವುದು ಇಂದಿಗೂ ಗ್ರಾಮೀಣ ಪ್ರದೇಶಗಳು ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕದ ಮೂವರು ಯುವಕರು ಸ್ವದೇಶಿ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಮೊಬೈಲ್‌ನಲ್ಲಿ ನೆಟ್‌ವರ್ಕ್ ಸಿಗದೆ ಪರದಾಡುವುದು ಇಂದಿಗೂ ಗ್ರಾಮೀಣ ಪ್ರದೇಶಗಳು ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಗುಡ್ಡಗಾಡು ಪ್ರದೇಶಗಳು, ಕಾಡಿನ ನಡುವಿನ ಹಳ್ಳಿಗಳು ಹಾಗೂ ಸಂಪರ್ಕ ವ್ಯವಸ್ಥೆ ತಲುಪಲು ಕಷ್ಟವಾಗಿರುವ ಸ್ಥಳಗಳಲ್ಲಿ ಮೊಬೈಲ್ ನೆಟ್‌ವರ್ಕ್ ಪಡೆಯುವುದು ದೊಡ್ಡ ಸವಾಲು. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕದ ಮೂವರು ಯುವಕರು ಸ್ವದೇಶಿ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಅಭಯ್, ಸುದರ್ಶನ್ ಮತ್ತು ಸಮರ್ಥ್ ಎಂಬ ಯುವಕರು ಮೊಬೈಲ್ ನೆಟ್‌ವರ್ಕ್ ಸಮಸ್ಯೆಗೆ ಹೊಸ ಪರಿಹಾರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಸಾಂಪ್ರದಾಯಿಕ ಮೊಬೈಲ್ ಟವರ್‌ಗಳನ್ನು ನಿರ್ಮಿಸಲು ಸಾಧ್ಯವಾಗದ ದೂರದ ಪ್ರದೇಶಗಳಿಗೂ 4G ಸಂಪರ್ಕ ಕಲ್ಪಿಸುವ ಉದ್ದೇಶದಿಂದ 'ಮೈಕ್ರೋ ಸೆಲ್' (Micro Cell) ಎಂಬ ಸಾಧನವನ್ನು ಬಳಸಿಕೊಂಡು. ಗ್ರಾಮೀಣ ಭಾಗದ ಜನರಿಗೆ ಎದುರಾಗುವ ನೆಟ್‌ವರ್ಕ್ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಇದೀಗ ಗಮನ ಸೆಳೆಯುತ್ತಿದೆ.

ಕೊರೊನಾ ಲಾಕ್‌ಡೌನ್‌ನಲ್ಲಿ ಎದುರಾದ ಸಮಸ್ಯೆಯೇ ಆವಿಷ್ಕಾರಕ್ಕೆ ಪ್ರೇರಣೆ

ಈ ಮೂವರು ಯುವಕರಿಗೆ ನೆಟ್‌ವರ್ಕ್ ಸಮಸ್ಯೆ ಹೊಸತೇನಲ್ಲ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಸಮಯದಲ್ಲಿ ಮೊಬೈಲ್ ಸಂಪರ್ಕದ ಕೊರತೆಯಿಂದ ಎದುರಾದ ತೊಂದರೆಗಳನ್ನು ಅವರು ಸ್ವತಃ ಅನುಭವಿಸಿದ್ದರು. ಆನ್‌ಲೈನ್ ಸಂವಹನ, ಮಾಹಿತಿ ವಿನಿಮಯ ಸೇರಿದಂತೆ ಹಲವು ಕೆಲಸಗಳಿಗೆ ಇಂಟರ್ನೆಟ್ ಅನಿವಾರ್ಯವಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಸಿಗದಿರುವುದು ದೊಡ್ಡ ಅಡಚಣೆಯಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಅಭಯ್, ಸುದರ್ಶನ್ ಮತ್ತು ಸಮರ್ಥ್ ಒಟ್ಟಾಗಿ ಕೆಲಸ ಆರಂಭಿಸಿದರು. ತಂತ್ರಜ್ಞಾನದ ಮೂಲಕ ನೆಟ್‌ವರ್ಕ್ ಸಮಸ್ಯೆ ನಿವಾರಿಸುವ ಗುರಿ ಹೊಂದಿದರು.

ವರ್ಷಗಳಿಂದ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಭಾಗದ ಜನರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಸರಿಯಾಗಿ ಮೊಬೈಲ್ ಸಿಗ್ನಲ್ ಸಿಗದೆ ಫೋನ್ ಕರೆ ಮಾಡಲೂ ಗುಡ್ಡ ಹತ್ತಬೇಕಾದ ಪರಿಸ್ಥಿತಿ ಈಗ ಬದಲಾಗುವ ನಿರೀಕ್ಷೆಯಿದೆ. BSNL ಮತ್ತು Nexus Spherical Technologies ಸಂಸ್ಥೆಗಳು Lekha Wireless Solutions Pvt. Ltd. ಸಹಯೋಗದೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಹಾಗೂ ನೆಟ್‌ವರ್ಕ್ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಹೈ ಸ್ಪೀಡ್ 4G ಸಂಪರ್ಕ ಕಲ್ಪಿಸಿವೆ. ಯಲ್ಲಾಪುರದ ಅನಗೋಡದಲ್ಲಿ 4G ಸೇವೆ ಆರಂಭ Lekha Wireless ಸಂಸ್ಥೆ ಸ್ವದೇಶಿ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿರುವ 4G Radio Access Network (RAN) ತಂತ್ರಜ್ಞಾನದ ನೆರವಿನಿಂದ ಯಲ್ಲಾಪುರ ತಾಲೂಕಿನ ಅನಗೋಡ ಪ್ರದೇಶದಲ್ಲಿ 4G ಸಂಪರ್ಕ ಕಲ್ಪಿಸಲಾಗಿದೆ.

ಇದುವರೆಗೆ ಪಶ್ಚಿಮ ಘಟ್ಟಗಳ ಹಲವು ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ದೊಡ್ಡ ಸವಾಲಾಗಿತ್ತು. ಕೆಲವೆಡೆ ಫೋನ್ ಕರೆ ಮಾಡಲು ಅಥವಾ ಇಂಟರ್ನೆಟ್ ಬಳಸಲು ಜನರು ಎತ್ತರದ ಗುಡ್ಡ ಪ್ರದೇಶಗಳಿಗೆ ತೆರಳಬೇಕಾಗಿತ್ತು. ಇದೀಗ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಕೇಂದ್ರ ಸಂವಹನ ಸಚಿವಾಲಯದಿಂದ ಮೆಚ್ಚುಗೆ ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕೇಂದ್ರ ಸಂವಹನ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಸಂಸ್ಥೆಗಳು ತಿಳಿಸಿವೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿಯೂ ಉತ್ತಮ ನೆಟ್‌ವರ್ಕ್ ಸೌಲಭ್ಯ ಒದಗಿಸಬಹುದು ಎಂಬುದಕ್ಕೆ ಈ ಯೋಜನೆ ಉದಾಹರಣೆಯಾಗಿದೆ.

ಲೇಖಾ ವಯರ್‌ಲೆಸ್ ಸಂಸ್ಥಾಪಕ ಮತ್ತು ಸಿಇಒ ರಾಮು ಅವರ ಪ್ರಕಾರ, ನೀತಿ ಬದಲಾವಣೆಯು ಟೆಲಿಕಾಂ ವಲಯದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತದೆ. ನೆಕ್ಸಸ್‌ಸ್ಫೆರಿಕಲ್ ಟೆಕ್ನಾಲಜೀಸ್ ಸಂಸ್ಥೆಯ ಸಹ-ಸಂಸ್ಥಾಪಕ ಸುದರ್ಶನ್ ಎಚ್.ಎನ್. ಅವರ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಯನ್ನು ವಿಸ್ತರಿಸುವುದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ಸ್ಥಳೀಯ ಜನರ ಏಳಿಗೆಗೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಭಾರತದ ನೆಟ್‌ವರ್ಕ್ ಸಮಸ್ಯೆಗೆ ಸಿಗುತ್ತಾ ಪರಿಹಾರ?

ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ, ಉದ್ಯೋಗ, ಬ್ಯಾಂಕಿಂಗ್, ಆರೋಗ್ಯ ಸೇವೆ ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ಇಂಟರ್ನೆಟ್ ಅತ್ಯಗತ್ಯವಾಗಿದೆ. ಆದರೆ ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಇನ್ನೂ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಸಿರ್ಸಿಯ ಅಭಯ್, ಸುದರ್ಶನ್ ಮತ್ತು ಸಮರ್ಥ್ ಅವರ ಮೈಕ್ರೋ ಸೆಲ್ ಆವಿಷ್ಕಾರ ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ಹೊಸ ಭರವಸೆ ಮೂಡಿಸಿದೆ.

PREV
Read more Articles on
click me!

Recommended Stories

Bengaluru: ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ ಮಕ್ಕಳಿಗೆ ಬಿಲಾಂಗಿಂಗ್ ಪುಸ್ತಕ ವಿತರಣೆ
ಪಂಚಾಯ್ತಿ ನಿಮ್ಮಪ್ಪಂದು ಅಂದುಕೊಂಡಿದ್ದೀಯಾ? ನೆಪ ಹೇಳಿದ್ರೆ ಕಪಾಳಕ್ಕೆ ಹೊಡೀತೀನಿ; PDOಗೆ ಉಪಲೋಕಾಯುಕ್ತ ತರಾಟೆ