Latest Videos

ಮುಳುಗಡೆ ನಗರ ಬಾಗಲಕೋಟೆಗೆ ಶಾಪ ವಿಮೋಚನೆ: ಚಂಡಿಗಡ ಮಾದರಿ ಅಭಿವೃದ್ಧಿಗೆ ಪಣ- ಗೋವಿಂದ ಕಾರಜೋಳ

By Sathish Kumar KHFirst Published Mar 27, 2023, 6:30 PM IST
Highlights

377.20 ಕೋಟಿ ರೂ. ಯೋಜನೆಗಳು ಇಂದಿನಿಂದ ಅನುಷ್ಠಾನ
91 ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಕಾರಜೋಳ ಚಾಲನೆ
ಬಾಗಲಕೋಟೆ ಜಿಲ್ಲೆ ಮಾ.30 ರಂದು ಸಿಎಂ ಬೊಮ್ಮಾಯಿ ಆಗಮನ

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಮಾ.27): ಕಳೆದ 5 ವರ್ಷಗಳಲ್ಲಿ ಬಾಗಲಕೋಟೆ ಮತಕ್ಷೇತ್ರಕ್ಕೆ 6 ಸಾವಿರ ಕೋಟಿ ರೂ.ಗಳ ಅನುದಾನ ಪಡೆಯುವ ಮೂಲಕ ಸುಂದರ ನಗರವನ್ನಾಗಿ ಮಾಡಲು ಶಾಸಕ ವೀರಣ್ಣ ಚರಂತಿಮಠ ಶ್ರಮಿಸಿದ್ದಾರೆ. ಮುಳುಗಡೆ ನಗರವನ್ನು ಶಾಪ ವಿಮೋಚನೆಯನ್ನಾಗಿ ಮಾಡಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. 

ನಗರದ ಡ್ರೀಮ್ಸ್ ಹೋಟಲ್ ಎದುರಿಗೆ ಯುನಿಟ್-3ಕ್ಕೆ ಹೊಂದಿಕೊಂಡಿರುವ ಸಿಮೆಂಟ ಫ್ಯಾಕ್ಟರಿ ಹಿಂದುಗಡೆ ಇರುವ ಮಹಾರಾಜ ಹೋಟೆಲ್‍ನಿಂದ ಬಜಾಜ್ ಶೋರೂಂವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸುವ ಕಾಮಗಾರಿ ಸೇರಿ 377.20 ಕೋಟಿ ರೂ.ಗಳ ವೆಚ್ಚದ 91 ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಶಾಸಕ ವೀರಣ್ಣ ಚರಂತಿಮಠ ಅವರಿಗೆ ಕೆಲಸ, ನಿದ್ದಿ ಹಾಗೂ ಊಟ ಬಿಟ್ಟರೆ ಯಾವುದೇ ರೀತಿಯ ಹವ್ಯಾಸಗಳು ಇಲ್ಲ. ಮುಳುಗಡೆ ಪ್ರದೇಶವಾದ ಬಾಗಲಕೋಟೆ ನಗರವನ್ನು ಚಂಡಿಗಡ ಮಾದರಿಯಲ್ಲಿ ನಿರ್ಮಾಣ ಮಾಡುವ ಕನಸು ಕಂಡಿದ್ದರು. ಆ ಕನಸನ್ನು ಶಾಸಕ ವೀರಣ್ಣ ಚರಂತಿಮಠ ಅವರು ನನಸಾಗುವಂತೆ ಮಾಡಿದ್ದಾರೆ ಎಂದರು.

ಅಭಿವೃದ್ಧಿಯಲ್ಲಿ ನನಗ್ಯಾರೂ ಸರಿಸಾಟಿ ಇಲ್ಲ: ಸಚಿವ ಗೋವಿಂದ ಕಾರಜೋಳ

ಪ್ರತಿ ಕ್ಷೇತ್ರಕ್ಕೂ ಕನಿಷ್ಠ 1 ಸಾವಿರ ಕೋಟಿ ಅನುದಾನ: ನಮ್ಮ ಸರ್ಕಾರ ಪ್ರತಿಯೊಂದು ಮತಕ್ಷೇತ್ರಕ್ಕೆ 1 ಸಾವಿರ ಕೋಟಿ ರೂ.ಗಳಿಗಿಂತ ಕಡಿಮೆ ಅನುದಾನ ನೀಡಿಲ್ಲ. ಬಾಗಲಕೋಟೆ-ವಿಜಯಪಯರ ಅಖಂಡ ಜಿಲ್ಲೆಗೆ ನೀರಾವರಿಗಾಗಿ 10 ಸಾವಿರ ಕೋಟಿ ರೂ. ನೀಡಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಒಳಪಂಗಡಗಳಿಗೆ ಮೀಸಲಾತಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗಿದೆ. ಬಿಇಜೆಪಿ ಸರ್ಕಾರದಿಂದಲೇ ಅಭಿವೃದ್ಧಿ ಸಾಧ್ಯವಾಗಿದೆ. ಡಬಲ್‌ ಇಂಜಿನ್‌ ಸರ್ಕಾರದಿಂದ ಮತ್ತಷ್ಟು ದೊಡ್ಡ ಪ್ರಮಾಣದ ಅಭಿವೃದ್ಧಿ ನಿರೀಕ್ಷೆ ಮಾಡಬಹುದು ಎಂದು ತಿಳಿಸಿದರು.

ಮಾ.30 ರಂದು ಜಿಲ್ಲೆಗೆ ಮುಖ್ಯಮಂತ್ರಿ ಆಗಮನ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ 91 ಅಭಿವೃದ್ದಿ ಕಾಮಗಾರಿಗಳಿಗೆ ಸಚಿವ ಕಾರಜೋಳ ಚಾಲನೆ ನೀಡಿದ್ದು, ವರ್ಷದಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಕಾಮಗಾರಿಯಲ್ಲಿ 27.14 ಕಿ.ಮೀ ರಸ್ತೆ ನಿರ್ಮಾಣ, 1.30 ಕಿ.ಮೀ ಉದ್ದದ ರಸ್ತೆ ಬದಿ ಚರಂಡಿ ನಿರ್ಮಾಣ, 65 ವೃತ್ತಗಳ ನಿರ್ಮಾಣ, 60.07 ಕಿ.ಮೀ ಪಾದಚಾರಿ ರಸ್ತೆ, 50 ವೃತ್ತಗಳಿಗೆ ಸಿ.ಸಿ ಟಿವಿ ಕ್ಯಾಮರಾ ಅಳವಡಿಕೆ, 46.36 ಕಿ.ಮೀ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವದು, 101 ಉದ್ಯಾನವನ ಹಾಗೂ 50 ಕಟ್ಟಡ ಹಾಗೂ ಇತರೆ ಕಾಮಗಾರಿಗಳು ಹೊಂದಿದೆ. ಮಾ.30 ರಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಲಿದ್ದು, ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು. 

ಸಿಎಂ ಬೊಮ್ಮಾಯಿ ಹೇಳಿಕೆ ಸಮರ್ಥಿಸಿದ ನಿರಾಣಿ

18.56 ಕೋಟಿ ರೂ.ಗಳ ಕಾಮಗಾರಿಗೆ ಶಾಸಕ ಚಾಲನೆ: ಬಾಗಲಕೋಟೆ ನಗರಸಭೆಯು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೊಜನೆಯ ಹಂತ-4ರಡಿ ಒಟ್ಟು 18.56 ಕೋಟಿ ರೂ.ಗಳ ವೆಚ್ಚದ 16 ಕಾಮಗಾರಿಗಳಿಗೆ ವಿದ್ಯಾಗಿರಿ ವೃತ್ತದ ಹತ್ತಿರ ಸೋಮವಾರ ಚಾಲನೆ ನೀಡಲಾಗಿದೆ. ವಿದ್ಯಾಗಿರಿ, ರೂಪಲ್ಯಾಂಡ್, ಪೊಲೀಸ್ ಕ್ವಾಟರ್ಸ್, ಸರದೇಸಾಯಿ ಬಡಾವಣೆ, ಜನತಾ ಬಜಾರ, ಕೆ.ಎಚ್.ಬಿ. ಗದ್ದನಕೇರಿ ಬಡಾವಣೆ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ.
ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಬಿಟಿಡಿಎ ಸದಸ್ಯರಾದ ಕುಮಾರ ಎಳ್ಳಿಗುತ್ತಿ, ಶಿವಾನಂದ ಟವಳಿ, ಬಿಟಿಡಿಎ ಮುಖ್ಯ ಇಂಜಿನೀಯರ್ ಮನ್ಮಥಯ್ಯಸ್ವಾಮಿ ಸೇರಿದಂತೆ ದ್ಯಾಮವ್ವ ಸೂಳಿಕೇರಿ, ಗುತ್ತಿಗೆದಾರ ಕಾಶಿನಾಥ ಕಂಕಾಳೆ ಹಾಗೂ ಇತರರು ಉಪಸ್ಥಿತರಿದ್ದರು.

click me!