ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಭಕ್ತರು ಕೊಟ್ಟಂತಹ ಬೆಳ್ಳಿಯನ್ನು ಕರಗಿಸಿ ಬೆಳ್ಳಿ ರಥ ನಿರ್ಮಿಸಿದೆ. ಇದೀಗಾ ಮಾದಪ್ಪನ ಭಕ್ತರಿಗೆ ಬೆಳ್ಳಿ ರಥ ಎಳೆಸುವ ಸೌಭಾಗ್ಯವೂ ಕೂಡ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ.
ವರದಿ: ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಫೆ.3): ಮಲೆ ಮಾದಪ್ಪನ ಬಳಿ ಒಳ್ಳೆಯದಾಗಲಿ ಎಂದು ಹರಕೆ ಹೊತ್ತು ಲಕ್ಷಾಂತರ ಭಕ್ತರು ಮಾದಪ್ಪನ ದರ್ಶನ ಪಡೆಯುತ್ತಾರೆ. ಜೊತೆಗೆ ತಮ್ಮ ಹರಕೆಗಳನ್ನು ಕೂಡ ತೀರಿಸ್ತಾರೆ. ಇದೀಗಾ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಶೀಘ್ರದಲ್ಲಿ ಅಂತಾ ಭಕ್ತರಿಗೆ ಗುಡ್ ನ್ಯೂಸ್ ಕೊಡಲಿದೆ. ಹೀಗಿರುವ ಸೇವೆಯ ಜೊತೆಗೆ ಮತ್ತೊಂದು ಸೇವೆಯನ್ನು ಹೊಸದಾಗಿ ಸೇರಿಸಿಕೊಳ್ತಿದೆ.
undefined
ಇತಿಹಾಸ ಪ್ರಸಿದ್ದ ಪವಾಡ ಪುರುಷ ಮಲೆ ಮಾದಪ್ಪನ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರ ದಂಡೇ ಹರಿದು ಬರುತ್ತೆ. ಬಂದಂತಹ ಭಕ್ತರು ದೇವರಲ್ಲಿ ನಾನಾ ಹರಕೆ ಹೊತ್ತು ಬರ್ತಾರೆ. ಈಗಾಗ್ಲೇ ಮಹದೇಶ್ವರ ಬೆಟ್ಟದಲ್ಲಿ ಮುಡಿ ಸೇವೆ, ಬಸವ ವಾಹನ, ಹುಲಿ ವಾಹನ, ಚಿನ್ನದ ರಥ ಸೇರಿದಂತೆ ಅನೇಕ ಸೇವೆಗಳಿವೆ. ಭಕ್ತರು ಕೂಡ ಕೂಡ ಹರಕೆ ಹೊತ್ತು ತಮಗಿಷ್ಟವಾದ ಸೇವೆಗಳನ್ನು ನೇರವೆರಿಸಿಕೊಳ್ಳುತ್ತಾ ಹೋಗ್ತಿದ್ದಾರೆ .ಈ ನಡುವೆ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಭಕ್ತರು ಕೊಟ್ಟಂತಹ ಬೆಳ್ಳಿಯನ್ನು ಕರಗಿಸಿ ಬೆಳ್ಳಿ ರಥ ನಿರ್ಮಿಸಿದೆ. ಇದೀಗಾ ಮಾದಪ್ಪನ ಭಕ್ತರಿಗೆ ಬೆಳ್ಳಿ ರಥ ಎಳೆಸುವ ಸೌಭಾಗ್ಯವೂ ಕೂಡ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ.
ಕಳೆದ ಎರಡು ವರ್ಷಗಳಿಂದಲೂ ಬೆಳ್ಳಿ ರಥ ನಿರ್ಮಾಣ ಕಾರ್ಯ ನಡೆದಿತ್ತು. ಸುಮಾರು 20 ಲಕ್ಷ ರೂ ವೆಚ್ಚದಲ್ಲಿ 533 ಕೆ.ಜಿ. ಬೆಳ್ಳಿ ಬಳಸಿ ರಥ ನಿರ್ಮಿಸಲಾಗ್ತಿದೆ. ಭಕ್ತರು ಹುಂಡಿಗೆ ಹಾಕುವ ಬೆಳ್ಳಿ ಹಾಗೂ ದಾನಿಗಳಿಂದಲೂ ಕೂಡ ಪಡೆದು ನಿರ್ಮಿಸಲಾಗಿದೆ. ರಥಕ್ಕೆ ತಗುಲಿರುವ ಖರ್ಚು ವೆಚ್ಚವನ್ನು ದಾನಿಗಳೇ ನೀಡಿದ್ದಾರೆ. ಈ ಹಿನ್ನಲೆ ಪ್ರಾಧಿಕಾರ ಸಿಎಂ ಗಮನಕ್ಕೆ ತಂದು ಸೇವೆಗೆ ದರ ನಿಗದಿಪಡಿಸಲು ಚಿಂತನೆ ನಡೆಸಿದೆ. ನಿತ್ಯವೂ ಬೆಳ್ಳಿ ರಥದ ಸೇವೆ ಬೆ.9 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ. ಇನ್ನುಳಿದಂತೆ ರಾತ್ರಿ ವೇಳೆ ಚಿನ್ನದ ರಥ ಸೇವೆ ನಡೆಯಲಿದೆ.
ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಲು ಸರ್ಕಾರದ ಸಚಿವರಿಂದಲೇ ವಿರೋಧ!
ಇನ್ನೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ರಥದ ಸೇವೆಗೆ ಭಕ್ತರು ಸಂತಸಪಟ್ಟಿದ್ದಾರೆ. ಮಾದಪ್ಪನಿಗೆ ಬೆಳ್ಳಿ ರಥ ಮಾಡ್ತಿರೋದು ಸಂತಸ ಆದ್ರೆ ಚಿನ್ನದ ರಥದ ಸೇವೆ ಮಾಡಿಸಲು ದರ ಜಾಸ್ತಿಯಾಗಿದೆ. ಬೆಳ್ಳಿ ರಥದ ಸೇವೆಯ ದರ ಕಡಿಮೆ ಮಾಡಿದ್ರೆ ಉತ್ತಮ. ಮಲೆ ಮಹದೇಶ್ವರ ದರ್ಶನಕ್ಕೆ ಬರುವ ಭಕ್ತರೆಲ್ಲಾ ಬಡ,ಮಧ್ಯಮ ವರ್ಗದವರು. ಆದ್ರಿಂದ ಬೆಳ್ಳಿ ರಥದ ಸೇವೆಯ ದರವನ್ನು ಕಡಿಮೆ ನಿಗದಿಪಡಿಸಲಿ ಅಂತಾ ಭಕ್ತರು ಒತ್ತಾಯ ಮಾಡ್ತಿದ್ದಾರೆ.
Chamarajanagar: ಮಲೆ ಮಹದೇಶ್ವರ ಬೆಟ್ಟಕ್ಕೆ ಸಚಿವ ಸೋಮಣ್ಣ ಭೇಟಿ
ಒಟ್ನಲ್ಲಿ ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ಅಥವಾ ಯುಗಾದಿ ವೇಳೆಗೆ ಬೆಳ್ಳಿ ರಥವನ್ನು ಎಳೆಯುವ ಭಾಗ್ಯ ಭಕ್ತರಿಗೆ ದೊರಕಲಿದೆ. ಆದ್ರೆ ಇತರ ಸೇವೆಗಳಿಗೆ ಈಗಾಗ್ಲೇ ಹೆಚ್ಚಿನ ದರ ವಿಧಿಸಿರುವುದರಿಂದ ಬೆಳ್ಳಿ ರಥದ ಸೇವೆಯನ್ನು ರಿಯಾಯಿತಿ ದರದಲ್ಲಿ ನಿಗದಿಪಡಿಸಿ ಅಂತಾ ಭಕ್ತರು ಕೋರಿಕೆ ಸಲ್ಲಿಸ್ತಿದ್ದಾರೆ.