ದಾವಣಗೆರೆಯಲ್ಲಿ ಮೂರು ದಿನಗಳ ರಾಜ್ಯಮಟ್ಟದ ಕೃಷಿ ಮೇಳ

By Ravi Janekal  |  First Published Feb 3, 2023, 3:01 PM IST

ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಿರುವ ರಾಜ್ಯಮಟ್ಟದ ಕೃಷಿ ಮೇಳಕ್ಕೆ ಶಾಸಕ ಎಸ್. ಎ. ರವೀಂದ್ರನಾಥ್ ಚಾಲನೆ‌ ನೀಡಿದರು.  ಟೇಪ್ ಕತ್ತರಿಸುವ  ಮೂಲಕ ಕೃಷಿ ಮೇಳದ ಉದ್ಘಾಟನೆ ನೆರವೇರಿಸಿದ ಎಸ್ ಎ   ರವೀಂದ್ರನಾಥ್ ಅವರು, ಕೃಷಿ ಮೇಳ ಯಶಸ್ವಿಯಾಗಲಿ ಎಂದು ಹಾರೈಸಿದರು. 


- ವರದರಾಜ್ 

ದಾವಣಗೆರೆ (ಫೆ.3): ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಿರುವ ರಾಜ್ಯಮಟ್ಟದ ಕೃಷಿ ಮೇಳಕ್ಕೆ ಶಾಸಕ ಎಸ್. ಎ. ರವೀಂದ್ರನಾಥ್ ಚಾಲನೆ‌ ನೀಡಿದರು. 

Tap to resize

Latest Videos

ಟೇಪ್ ಕತ್ತರಿಸುವ  ಮೂಲಕ ಕೃಷಿ ಮೇಳದ ಉದ್ಘಾಟನೆ ನೆರವೇರಿಸಿದ ಎಸ್ ಎ   ರವೀಂದ್ರನಾಥ್ ಅವರು, ಕೃಷಿ ಮೇಳ ಯಶಸ್ವಿಯಾಗಲಿ ಎಂದು ಹಾರೈಸಿದರು. 

ರೈತರಿಗೆ(Farmers) ಅನುಕೂಲವಾಗಿರುವ ಈ ಕೃಷಿ ಮೇಳ(Krishi mela) ವಿಶೇಷತೆ ಹೊಂದಿದೆ. ಇದೊಂದು ಉತ್ತಮ ಕಾರ್ಯಕ್ರಮ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಉತ್ತಮ ಮೇಳ ಆಯೋಜಿಸಲಾಗಿದ್ದು, ರೈತರಿಗೆ ಒಂದೇ ಸೂರಿನಡಿ ಮಾಹಿತಿ ದೊರಕುತ್ತದೆ. ಇದೊಂದು ಉತ್ತಮ ಮೇಳ ಎಂದು ಹೇಳಿದರು.

Union Budget:ಏನಿದು ಪಿಎಂ ಪ್ರಣಾಮ ಯೋಜನೆ? ಇದರಿಂದ ರೈತರಿಗೇನು ಲಾಭ?

ಡಾ. ಸಾಯಿಲ್  ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಮೈಕ್ರೋಬಿ ಫೌಂಡೇಷನ್ ಹಾಗೂ ಯು.ಎಸ್. ಕಮ್ಯುನಿಕೇಷನ್ ಆಶ್ರಯದಲ್ಲಿ ರಾಜ್ಯಮಟ್ಟದ ಕೃಷಿಮೇಳ ನಡೆಯುತ್ತಿದೆ.  ಫೆ.5ರಂದು ಬೆಳಗ್ಗೆ 11 ಕ್ಕೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು ಈ ಬಾರಿಯ ಕೃಷಿಮೇಳಕ್ಕೆ ಕೃಷಿ ಮಂತ್ರಿ ಬಿ. ಸಿ. ಪಾಟೀಲ್‌(BC Patil) ಆಗಮಿಸಿ ರೈತರಿಗೆ ಹಾಗೂ ಅಧಿಕಾರಿಗಳಿಗೆ ಉಪಯುಕ್ತ ಸಲಹೆ ಸೂಚನೆ ನೀಡಲಿದ್ದಾರೆ. 

ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 7.30ರವರೆಗೆ ಮಾತ್ರ ಪ್ರದರ್ಶನ ಇರಲಿದೆ. ಕೃಷಿ ಮೇಳದಲ್ಲಿ ಇನ್ನೂ ಒಂದು ವರ್ಷದ ಅವಧಿಯೊಳಗೆ ಮೈಕ್ರೋಬಿ ಫೌಂಡೇಷನ್ ವತಿಯಿಂದ 2000 ನವ್ಯೋದ್ಯಮಗಳಿಗೆ ಅವಕಾಶ ಕಲ್ಪಿಸುವ ತರಬೇತಿಯನ್ನು ರಾಜ್ಯದ ನಾಲ್ಕು  ಭಾಗಗಳಲ್ಲಿ ನೀಡಲಾಗುತ್ತಿದೆ‌. ಜಿಲ್ಲೆಯ ಹಾಗೂ ರಾಜ್ಯದ ಯುವಕರು, ಕೃಷಿ ಉದ್ದಿಮೆದಾರರು ಇದರ ಸದುಪಯೋಗ ಪಡೆಯಬೇಕು. ಈ ಮೇಳದಲ್ಲಿ ಕೃಷಿ ಹಾಗು ತೋಟಗಾರಿಕೆಗೆ ಸಂಬಂಧಿಸಿದ ಸಂಪೂರ್ಣ ಚಿತ್ರಣ ಬಿಂಬಿಸುವ 170ಕ್ಕೂ ಹೆಚ್ಚು ಸ್ಟಾಲ್‌ಗಳಿವೆ ಎಂದು ಮೈಕ್ರೋಬಿ ಫೌಂಡೇಶನ್ ನ ಜಿಲ್ಲಾ ಸಂಯೋಜಕ ಮಹದೇವಪ್ಪ ದಿದ್ದಿಗೆ ತಿಳಿಸಿದರು. 

Union Budget 2023:ರೈತರ ಗೊಬ್ಬರಕ್ಕೆ 50 ಸಾವಿರ ಕೋಟಿ ಸಬ್ಸಿಡಿ ಕಡಿತ: ನಿರಾಶಾದಾಯಕ ಬಜೆಟ್‌ ಎಂದ ಸಿದ್ದರಾಮಯ್ಯ

ಕೃಷಿ ಮೇಳದ ಉದ್ಘಾಟನೆ ವೇಳೆ ಫೌಂಡೇಶನ್ ನ ಜಿಲ್ಲಾಧ್ಯಕ್ಷ ರವಿಯೋಗರಾಜು, ಸಂಘಟಕರಾದ ಉಮಾಪತಿ, ಮೈಕ್ರೋಬಿ ಫೌಂಡೇಷನ್‌ನ ಜಿಲ್ಲಾ ಸಂಚಾಲಕ ಬಿ. ಸಿ. ಕಾರ್ತಿಕ್, ಚರಣ್ ನಾಯ್ಡು, ಜಾನಪದ ತಜ್ಞ ಚಂದ್ರೇಗೌಡರು ಮತ್ತಿತರರು ಹಾಜರಿದ್ದರು.

click me!