ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆಯು ಜೂನ್‌ನಲ್ಲಿ ಒಂದು ದಿನದಲ್ಲಿ ಸುರಿದ ಅತಿ ಹೆಚ್ಚು ಮಳೆಯ ದಾಖಲೆ ಬರೆದಿದೆ. ಬರೋಬ್ಬರಿ 133 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ.
ಬೆಂಗಳೂರು (ಜೂ.3): ಬೆಂಗಳೂರಿನಲ್ಲಿ ಭಾನುವಾರ ಸುರಿದ ನೈಋತ್ಯ ಮಾನ್ಸೂನ್ ಮಳೆಯು ಜೂನ್‌ನಲ್ಲಿ ಒಂದು ದಿನದಲ್ಲಿ ಸುರಿದ ಅತಿ ಹೆಚ್ಚು ಮಳೆಯ ದಾಖಲೆ ಬರೆದಿದೆ. ಮಾತ್ರವಲ್ಲ ಬರೋಬ್ಬರಿ 133 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಭಾನುವಾರ 111.1 ಮಿಮೀ ಮಳೆಯಾಗಿದೆ. ಈ ಹಿಂದೆ ಜೂನ್ 16, 1891 ರಂದು 101.6 ಮಿಮೀ ಮಳೆಯಾಗಿದ್ದು, ಇಲ್ಲಿವರೆಗಿನ ದಾಖಲೆಯಾಗಿತ್ತು. ಜೂನ್‌ನಲ್ಲಿ ಬೆಂಗಳೂರಿನಲ್ಲಿ ಸರಾಸರಿ ಮಳೆ ಪ್ರಮಾಣ 106.5 ಮಿಮೀ. ಮಳೆಯಾಗಿತ್ತು. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡ ಮುಸುಕಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಲಘು ಮಳೆ ಮುಂದುವರಿಯುವ ನಿರೀಕ್ಷೆಯಿದೆ ಎಂದು IMD ಹೇಳಿದೆ.
ರಾಜ್ಯಕ್ಕೆ ಬಂತು ಮುಂಗಾರು ಮಳೆ, ಜಲಾಶಯಗಳಿಗೆ ಬಂತು ಜೀವ ಕಳೆ; ನೀರಿನ ಮಟ್ಟ ಇಲ್ಲಿದೆ ನೋಡಿ
ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯ ಮುನ್ಸೂಚನೆ ಇದ್ದು, ಜೂನ್ ತಿಂಗಳಲ್ಲಿ ದಾಖಲಾಗಿರುವ ತನ್ನ ಅತ್ಯಧಿಕ ದಾಖಲೆಯನ್ನು ಮುರಿಯುವ ಹಾದಿಯಲ್ಲಿದೆ. 1996 ರಲ್ಲಿ ಜೂನ್ ತಿಂಗಳು ಒಟ್ಟು 228.2 ಮಿಮೀ ಮಳೆಯಾಗಿರುವುದು ಇಲ್ಲಿವರೆಗಿನ ದಾಖಲೆಯಾಗಿದೆ.
ಕೋಲಾರ ,ಚಿಕ್ಕಬಳ್ಳಾಪುರ ಮೈಸೂರು, ಶಿವಮೊಗ್ಗ, ಹಾಸನ ,ಕೊಡಗು ,ಚಾಮರಾಜನಗರ ,ತುಮಕೂರು ,ಬೆಂಗಳೂರು ನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮಳೆ ಕಾರಣಕ್ಕೆ ಹಾವುಗಳ ಕಾಟ ಆರಂಭವಾಗಿದೆ. ಹೀಗಾಗಿ ಸಹಾಯವಾಣಿಗಳನ್ನು ತೆರೆಯಲಾಗಿದೆ. ಬಿಬಿಎಂಪಿ ವನ್ಯಜೀವಿ ಸಹಾಯವಾಣಿ: 1533, ಕರ್ನಾಟಕ ಅರಣ್ಯ ಇಲಾಖೆ ಸಹಾಯವಾಣಿ: 1926, ಬಿಬಿಎಂಪಿ ವನ್ಯ ಜೀವಿ ಸಂರಕ್ಷಣಾ ಸಹಾಯವಾಣಿ: 9902794711 ತೆರೆಯಲಾಗಿದೆ.
ಲೋಕ ಚುನಾವಣೆಯಲ್ಲಿ ಮರಾಠ ಮತ ವಿಭಜನೆ ತಡೆದ ಮುಳೆಗೆ ಪರಿಷತ್ ಟಿಕೆಟ್
ಸಿಲಿಕಾನ್ ಸಿಟಿಯಲ್ಲಿ ಮಳೆ ಅವಾಂತರ ವಿಚಾರವಾಗಿ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿ, ನಗರದಲ್ಲಿ ನೆನ್ನೆ 111 ಮೀಮೀ ದಾಖಲೆ ಮಳೆ ಆಗಿದೆ. ಹೆಚ್ಚಿನ ಮನೆಗಳಿಗೆ ನೀರು ನುಗ್ಗಿಲ್ಲ. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಸ್ಯಾಂಡ್ ಬ್ಯಾಗ್ ಇಟ್ಟಿದ್ದೆವು. ಆದ್ರೂ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಬೇರೆ ಎಲ್ಲ ಮನೆಗಳಿಗೆ ವ್ಯವಸ್ಥೆ ಮಾಡಿದ್ವೀ. ತಕ್ಷಣ ಕ್ಲಿನ್ ಮಾಡುವ ಕೆಲಸ ಮಾಡುತ್ತಿದ್ದೇವೆ. ಯಲಹಂಕರ ಬಾಲಾಜಿ ಲೇಔಟ್ ನಲ್ಲಿ ರಾಜಕಾಲುವೆಯಲ್ಲಿ ನೀರು ತುಂಬಿಕೊಂಡು. ಮನೆಗಳಿಗೆ ಜನ ಹೋಗಲು ಸಾಧ್ಯವಾಗಿಲ್ಲ. ಆ ರೀತಿ ಎರಡು ಕಡೆ ರಸ್ತೆಗಳಲ್ಲಿ ನೀರು ನಿಂತಿತ್ತು.
ಒಂದೇ ದಿನ 128 ಮರಗಳು ಬಿದ್ದಿವೆ. ನಮ್ಮ ಹತ್ತಿರ 60 ತಂಡಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಕ್ಲಿನಿಂಗ್ ಕೆಲಸ ನಡೆಯುತ್ತಿದೆ. ಮರಗಳನ್ನ ಈಗಾಗಲೇ ತೆರವುಗೊಳಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಮಸ್ಯೆ ಆಗದಂತೆ 50% ಮರ ತೆರವುಗೊಳಿಸಲಾಗಿದೆ. ಇವತ್ತು ಮತ್ತು ನಾಳೆ ಒಳಗೆ ಎಲ್ಲವೂ ಕ್ಲಿಯರ್ ಆಗುತ್ತೆ. ಬೆಸ್ಕಾಂ ಮತ್ತು bwssb ಅಧಿಕಾರಿಗಳು ನಮ್ಮ ಕಂಟ್ರೋಲ್ ರೂಮ್ ನಲ್ಲಿಯೇ ಕೂತಿದ್ದಾರೆ. ನಾಲ್ಕು ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ.
1533 ಅಲ್ಲಿ ರಿಜಿಸ್ಟರ್ ಆದ್ರೆ ಮಾತ್ರ ನಾವು ಟ್ರ್ಯಾಕ್ ಮಾಡಬಹುದು. ಈ ವರ್ಷ ಮೂರನೇ ಮಳೆ ನೋಡಿತ್ತಿದ್ದೇನೆ. ಈ ಮಳೆಯಲ್ಲಿ ನನಗೆ ಕರೆ ಬರುವುದು ಸ್ವಲ್ಪ ಕಡಿಮೆಯಾಗಿದೆ. ನಮ್ಮ ಸಿಬ್ಬಂದಿ ಗಳನ್ನ ಮೆಚ್ಚಬೇಕಾಗಿದೆ. ಹಗಲು ರಾತ್ರಿ ಕೆಲಸ ಮಾಡುತ್ತಿರೋದ್ರಿಂದ ಎಲ್ಲವೂ ಕ್ಲಿಯರ್ ಆಗ್ತಿದೆ ಎಂದಿದ್ದಾರೆ.
ಗುಡುಗು ಸಹಿತ ಬಿರುಗಾಳಿ ಸಹಿತ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳಲ್ಲಿ ಪ್ರವಾಹ ಜೊತೆಗೆ ವಿಪರೀತ ಹಾನಿ ಸಂಭವಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಈ ಸಂಬಂಧ ಭಾನುವಾರ 285 ದೂರುಗಳು ಬಂದಿವೆ.