ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ, ಸಚಿವ ಸತೀಶ್ ಜಾರಕಿಹೊಳಿ ಅವರು ಟೆನ್ಷನ್ ಬಿಟ್ಟು ಮಾರ್ಕಂಡೇಯ ನದಿ ತೀರಕ್ಕೆ ತೆರಳಿ ಮೀನುಗಳಿಗೆ ಆಹಾರ ಹಾಕಿದರು.
ಬೆಳಗಾವಿ (ಜೂ.02): ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಇನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಮಾಡಿದ್ದಾರೆ. ಆದರೆ, ಫಲಿತಾಂಶದ ಟೆನ್ಷನ್ ಬದಿಗಿಟ್ಟು ಸಚಿವ ಸತೀಶ್ ಜಾರಕಿಹೊಳಿ ಅವರು ಕೆರೆಯ ಬದಿಯಲ್ಲಿ ಮೀನುಗಳಿಗೆ ಕಾಳು ಹಾಕಿ ಬಂದಿದ್ದಾರೆ.
ಹೌದು, ಇಡೀ ದೇಶದಾದ್ಯಂತ ಎಲ್ಲ ರಾಜಕೀಯ ನಾಯಕರು ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ. ಇನ್ನು ಕ್ಷಣಗಣನೆ ಆರಂಭವಾಗಿದ್ದು, ಎಲ್ಲರಿಗೂ ಟೆನ್ಷನ್ ಶುರುವಾಗಿರುತ್ತದೆ. ಅದರಲ್ಲಿಯೂ ಸ್ಪರ್ಧಾಳುಗಳು ಮತ್ತು ಮನೆಯ ಯಾವುದೇ ಸದಸ್ಯರು ಲೋಸಕಭೆಯಲ್ಲಿ ಸ್ಪರ್ಧೆ ಮಾಡಿದ್ದರಂತೂ ಅವರ ಕಾತುರ ತೀವ್ರ ಹೆಚ್ಚಾಗಿರುತ್ತದೆ. ಆದರೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸೋಮವಾರ ಬೆಳಗ್ಗೆ ಬೆಳಗಾವಿ ಜಿಲ್ಲೆಯ ಗೋಕಾಕನ ಯೋಗಿ ಕೊಳ್ಳದ ಬಳಿ ಹರಿಯುವ ಮಾರ್ಕಂಡೇಯ ನದಿ ತಟಕ್ಕೆ ವಾಯು ವಿಹಾರಕ್ಕೆ ತೆರಳಿದ್ದಾರೆ. ಅಲ್ಲಿ ಕೆಲವು ರಾಜಕೀಯ ಸಹವರ್ತಿಗಳು ಮತ್ತು ತಮ್ಮ ಆಪ್ತರೊಂದಿಗೆ ನದಿ ತೀರದಲ್ಲಿ ನಿಂತು ಮೀನುಗಳಿಗೆ ಆಹಾರ ಹಾಕಿದ್ದಾರೆ.
ಶಿವಮೊಗ್ಗ ಗಲಾಟೆ: ಒಂದು ಮಟನ್ ಪೀಸ್‌ಗಾಗಿ ಗ್ರಾಹಕನ ಬುರುಡೆ ಬಿಚ್ಚಿದ ಅಪ್ರಾಪ್ತ
ಸಮೀಕ್ಷೆಗಳ ವರದಿಗಳಲ್ಲಿ ನಂಬಿಕೆಯಿಲ್ಲ: ವಾಯು ವಿಹಾರ ಮುಗಿಸಿದ ನಂತರ ಚಿಕ್ಕೋಡಿಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಎಕ್ಸಿಟ್ ಪೋಲನಲ್ಲಿ ಕಾಂಗ್ರೆಸಗೆ ಹಿನ್ನಡೆ ವಿಚಾರಯಾಗಿದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ. ಆದರೆ, ಕೆಲವೊಂದು ಸಮೀಕ್ಷೆಗಳು ಕಾಂಗ್ರೆಸ್‌ಗೆ ಮುನ್ನಡೆ ಆಗಲಿದೆ ಎಂಬ ಸುಳಿವನ್ನೂ ನೀಡಿವೆ. ಆದರೆ, ಜನರು ಈಗಾಗಲೇ ಮತ ಹಾಕಿಯಾಗಿದೆ. ಜನರೇ ಈ ವಿಚಾರದಲ್ಲಿ ಗೊಂದಲ್ಲಿದ್ಧಾರೆ. ಫಲಿತಾಂಶಕ್ಕೆ ತುಂಬಾ ಸಮಯ ಉಳಿದಿಲ್ಲ. ಎಲ್ಲರೂ ಕಾದು ನೋಡೋಣ, ಅನಗತ್ಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ: ಸತೀಶ್ ಜಾರಕಿಹೊಳಿ
ವಾಲ್ಮೀಕಿ ನಿಗಮದ ಹಗರಣ ಸಿಬಿಐಗೆ ಕೊಡಲ್ಲ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿ, ಈಗಾಗಲೇ ಪ್ರಕರಣವನ್ನ ಎಸ್.ಐ.ಟಿಗೆ ವಹಿಸಲಾಗಿದೆ. ಆಂತರಿಕ ತನಿಖೆ ಕೂಡ ನಡೆಯುತ್ತಿದೆ. ಯಾವುದೆ ಹೆಜ್ಜೆ ಇಡುವ ಮೊದಲು ತಪ್ಪು ಮಾಡಿದ್ದು ಗೋತ್ತಾಗಬೇಕು. ಆರೋಪ ಮಾಡಿದ್ದಾರೆ ಎಂದು ಸಿ.ಬಿ.ಐ ಗೆ ನೀಡಲು ಆಗಲ್ಲ. ಎಸ್‌ಐಟಿ ಮಧ್ಯಂತರ ವರದಿ ನೀಡಿದ್ರೆ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ. ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂಬ ಬಿಜೆಪಿ ಒತ್ತಾಯ ಮಾಡಿದ್ರು ಅಂತ ನಾವ್ಯಾಕೆ ಸಿಬಿಐಗೆ ನೀಡಬೇಕು. ಈಗಾಗಲೇ ಬ್ಯಾಂಕಿನವರು ಸಿಬಿಐ ತನಿಖೆಗೆ ಪತ್ರ ಬರೆದಿದ್ದಾರೆ. ಈಗಾಗಲೇ ಅವರೆ ಸಿಬಿಐ ತನಿಖೆಗೆ ನೀಡಿದ್ದಾರೆ. ಸಚಿವ ನಾಗೇಂದ್ರ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಇದು. ಯಾವುದೇ ನಿರ್ಧಾರ ಮಾಡಬೇಕು ಎಂದರೂ ವರದಿ ಬರಬೇಕು. ವರದಿ ಬಂದಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.