ಸಿಗಂದೂರು ದೇವಸ್ಥಾನ ವಿವಾದ/ ಮಧ್ಯ ಪ್ರವೇಶ ಮಾಡಿದ ಸರ್ಕಾರ/ ಜಿಲ್ಲಾಡಳಿತದ ನೇತೃತ್ವದಲ್ಲಿ ಸಮಿತಿ/ ಲೋಪದೋಷಗಳ ಪಟ್ಟಿ ಮಾಡಿ ನೀಡಿ
ಶಿವಮೊಗ್ಗ(ಅ. 23) ಸಿಗಂದೂರು ದೇವಸ್ಥಾನ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ಪಡೆಯುವ ಸಂಬಂಧ ಹಲವು ಬೆಳವಣಿಗೆಗಳು ಆರಂಭಗೊಂಡಿದೆ.
ದೇವಸ್ಥಾನದ ಹಣಕಾಸು ವಿಷಯ ಕುರಿತಂತೆ ಸುಗಮ ಆಡಳಿತಕ್ಕಾಗಿ ಹಾಗು ಮೇಲ್ವಿಚಾರಣೆ ಗಾಗಿ ತಾತ್ಕಾಲಿಕ ಸಮಿತಿ ರಚನೆ ಮಾಡಲಾಗಿದೆ.
ದೇವಸ್ಥಾನದಲ್ಲಿ ಇತ್ತಿಚೆಗೆ ನಡೆದ ಗೊಂದಲಗಳ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿರುವ ಜಿಲ್ಲಾಡಳಿತ ಸರ್ಕಾರದ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ದೇವಾಲಯ ಸರ್ಕಾರಿ ಜಾಗದಲ್ಲಿರುವುದರಿಂದ ಹಾಗೂ ಆಡಳಿತ ಮಂಡಳಿ ಹಾಗು ಅರ್ಚಕ ನಡುವೆ ಆರೋಪ ಪ್ರತ್ಯಾರೋಪ ಬಂದಿದ್ದು, ಲೋಪದೋಷಗಳ ಬಗ್ಗೆ ತನಿಖೆ ಮಾಡುವ ಉದ್ದೇಶದಿಂದ ಸರ್ಕಾರದ ಮುಂದಿನ ಆದೇಶವನ್ನು ಕಾಯ್ದಿರಿಸಿ ಈ ತಾತ್ಕಾಲಿಕ ಸಮಿತಿ ರಚನೆ ಮಾಡಿದೆ.
ಪ್ರವಾಸಿಗರಿಗೆ ಸಿಗಂದೂರು ಎರಡು ತಿಂಗಳು ನಿರ್ಬಂಧ
ಶಿವಮೊಗ್ಗ ಡಿಸಿ ಶಿವಕುಮಾರ್, ಸಾಗರ ಎಸಿ ನಿವೃತ್ತ ನ್ಯಾಯಾಧೀಶರ , ಸ್ಥಳೀಯ ಲೆಕ್ಕ ಪರಿಶೋಧಕರು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಇನ್ನೊಂದು ಕಡೆ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಅರ್ಚಕರು ಮತ್ತು ಆಡಳಿತದ ನಡುವೆ ರಾಜಿ ಸಂಧಾನ ನಡೆದಿದೆ ಎಂದು ವರದಿಯಾಗಿತ್ತು.