ವೈದ್ಯ, ಎಂಜಿನಿಯರ್‌ ಸೀಟು ಬಿಟ್ಟ ಸಿದ್ದುಗೆ ಕೃಷಿಯಲ್ಲಿ ಚಿನ್ನ

Published : Jun 18, 2019, 10:57 AM ISTUpdated : Jun 18, 2019, 10:59 AM IST
ವೈದ್ಯ, ಎಂಜಿನಿಯರ್‌ ಸೀಟು ಬಿಟ್ಟ ಸಿದ್ದುಗೆ ಕೃಷಿಯಲ್ಲಿ ಚಿನ್ನ

ಸಾರಾಂಶ

ಉಚಿ​ತ​ವಾಗಿ ವೈದ್ಯ​ಕೀಯ ಹಾಗೂ ಎಂಜಿ​ನಿ​ಯ​ರಿಂಗ್‌ ಸೀಟು ಸಿಕ್ಕರೂ, ಕೃಷಿ ಕ್ಷೇತ್ರ​ದ​ಲ್ಲಿಯೇ ಸಾಧನೆ ಮಾಡ​ಬೇ​ಕೆಂಬ ಉತ್ಕಟ ಇಚ್ಚೆ​ಯಿಂದ ಅವು​ಗ​ಳನ್ನು ತಿರ​ಸ್ಕ​ರಿಸಿ ಬಿಎಸ್ಸಿ ಕೃಷಿ ಪದವಿಗೆ ಸೇರಿದ್ದ ಸಿದ್ದುಗೆ ಚಿನ್ನದ ಗೌರವ ಸಿಕ್ಕಿದೆ. 

ಧಾರ​ವಾಡ (ಜೂ.18): ಪಿಯುಸಿ ನಂತರ ಉಚಿ​ತ​ವಾಗಿ ವೈದ್ಯ​ಕೀಯ ಹಾಗೂ ಎಂಜಿ​ನಿ​ಯ​ರಿಂಗ್‌ ಸೀಟು ಸಿಕ್ಕರೂ, ಕೃಷಿ ಕ್ಷೇತ್ರ​ದ​ಲ್ಲಿಯೇ ಸಾಧನೆ ಮಾಡ​ಬೇ​ಕೆಂಬ ಉತ್ಕಟ ಇಚ್ಚೆ​ಯಿಂದ ಅವು​ಗ​ಳನ್ನು ತಿರ​ಸ್ಕ​ರಿಸಿ ಬಿಎಸ್ಸಿ ಕೃಷಿ ಪದವಿಗೆ ಸೇರಿದ ವಿದ್ಯಾರ್ಥಿ ಸಿದ್ದು ಬಸವರಾಜ ಚಿಂದಿ ಧಾರ​ವಾಡ ಕೃಷಿ ವಿಶ್ವ​ವಿ​ದ್ಯಾ​ಲ​ಯಕ್ಕೆ ಪ್ರಥಮ ಸ್ಥಾನ ಪಡೆ​ದಿ​ದ್ದಾನೆ. 

ಮೂಲತಃ ಹಾವೇರಿ ಜಿಲ್ಲೆಯ ಹಿರೇ​ಕೆ​ರೂ​ರಿನ ಕೃಷಿ ಕುಟುಂಬದ ಸಿದ್ದು ಬಸ​ವ​ರಾ​ಜ ಚಿಂದಿ, 32ನೇ ಘಟಿ​ಕೋ​ತ್ಸ​ವ​ದಲ್ಲಿ ಬಿಎಸ್ಸಿ ಕೃಷಿ ಪದ​ವಿ​ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕಾರಣ ಎರಡು ಚಿನ್ನದ ಪದಕ ಪಡೆ​ಯುವ ಮೂಲಕ ಚಿನ್ನದ ಹುಡು​ಗ​ನಾಗಿ ಹೊರ​ಹೊ​ಮ್ಮಿ​ದ್ದಾ​ನೆ. 

ಪಿಯುಸಿಯಲ್ಲಿ ಶೇ.93ರಷ್ಟುಅಂಕ ಪಡೆದು ಕೃಷಿ ವಿವಿಯಲ್ಲಿ ಬಿಎಸ್ಸಿ (ಕೃಷಿ) ಪದವಿಗೆ ಪ್ರವೇಶ ಪಡೆದಿದ್ದರು. 9.17 ಸಿಜಿಪಿಎ ಅಂಕ ಪಡೆದು 2 ಬಂಗಾರದ ಪದಕ ಪಡೆದಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಅನುವಂಶಿಕತೆ ಹಾಗೂ ಸಸ್ಯತಳಿ ಶಾಸ್ತ್ರದಲ್ಲಿ ಎಂಎಸ್ಸಿ ಕಲಿಯುತ್ತಿದ್ದಾರೆ.

PREV
click me!

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ : ಮಹೇಶ್ವರ್ ರಾವ್
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ