ತನ್ನ ಮೂವರು ಮಕ್ಕಳನ್ನು ಕೊಂದು ತಾಯಿಯೂ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಕೊಪ್ಪಳ [ಜೂ.18] : ಮೂವರು ಮಕ್ಕಳನ್ನು ಹತ್ಯೆ ಮಾಡಿ ತಾಯಿಯೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಘಟನೆ ನಡೆದಿದೆ.
undefined
ಹಿರಿಯ ಮಗಳನ್ನು ಕುಡಿವ ನೀರಿನ ಹಂಡೆಯೊಳಗೆ ಮುಳುಗಿಸಿ ಹತ್ಯೆ ಮಾಡದ್ದು, ಎರಡನೇ ಮಗಳನ್ನು ಬಕೇಟ್ ನಲ್ಲಿ ಮತ್ತು ಮೂರನೇ ಮಗನನ್ನು ನೀರಿನ ಹೂಜಿಯಲ್ಲಿ ಮುಳಗಿಸಿ ತಾಯಿ ಸ್ವತಃ ಹತ್ಯೆಗೈದಿದ್ದಾಳೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕುಕನೂರು ತಾಲೂಕು ಯರೇ ಹಂಚಿನಾಳ ಗ್ರಾಮದ ಉಮೇಶ ಬಾರಕೇರ ಎಂಬಾತನ ಪತ್ನಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತಿ ಮನೆಯ ಹೊರಗೆ ಮಲಗಿದ್ದು, ಈ ಕೃತ್ಯ ಎಸಗಿದ್ದಾಳೆ.
ಸ್ಥಳಕ್ಕೆ ಕುಕನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.