ಕಾಯಕ ಸಿದ್ದಾಂತದ ಸಿದ್ಧ ಪುರುಷ ಶ್ರೀ ಗುರುಸಿದ್ದರಾಮೇಶ್ವರ : ಕೆ.ಎನ್. ರೇಣುಕಯ್ಯ

By Kannadaprabha News  |  First Published Jan 16, 2024, 10:21 AM IST

ಹನ್ನೆರಡನೆ ಶತಮಾನದ ಶರಣರ ಸಮಾಜ ವ್ಯವಸ್ಥೆಯಲ್ಲಿ ಬೆಸೆದುಕೊಂಡಿದ್ದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಆಧ್ಯಾತ್ಮಿಕತೆಗಳ ಮಹತ್ವವನ್ನು ತಮ್ಮ ಕಾಯಕ ಸಿದ್ಧಾಂತದ ಮೂಲಕ ಜಗತ್ತಿಗೆ ಸಾಧಿಸಿ ತೋರಿಸಿದ ಸಿದ್ಧ ಪುರುಷ ಶ್ರೀ ಗುರುಸಿದ್ದರಾಮೇಶ್ವರರು ಎಂದು ಎಸ್.ವಿ.ಪಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.


 ತಿಪಟೂರು :  ಹನ್ನೆರಡನೆ ಶತಮಾನದ ಶರಣರ ಸಮಾಜ ವ್ಯವಸ್ಥೆಯಲ್ಲಿ ಬೆಸೆದುಕೊಂಡಿದ್ದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಆಧ್ಯಾತ್ಮಿಕತೆಗಳ ಮಹತ್ವವನ್ನು ತಮ್ಮ ಕಾಯಕ ಸಿದ್ಧಾಂತದ ಮೂಲಕ ಜಗತ್ತಿಗೆ ಸಾಧಿಸಿ ತೋರಿಸಿದ ಸಿದ್ಧ ಪುರುಷ ಶ್ರೀ ಗುರುಸಿದ್ದರಾಮೇಶ್ವರರು ಎಂದು ಎಸ್.ವಿ.ಪಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.

ನಗರದ ತಾಲೂಕು ಆಡಳಿತದ ವತಿಯಿಂದ ಸೋಮವಾರ ತಾಲೂಕು ಕಚೇರಿಯಲ್ಲಿ ನಡೆದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಪರಿಪೂರ್ಣ ಕಾಯಕ ನಿರ್ವಹಣೆಗೆ, ಸಾಧನೆ ಸಿದ್ದಿಗಳಿಗೆ, ಮಾನವೀಯ ಮೌಲ್ಯಗಳಿಗೆ , ಮತ ಕುಲ ಧರ್ಮಗಳು ಅಡ್ಡಿಯಾಗಬಾರದೆಂಬ ದಿವ್ಯ ಸಂದೇಶವನ್ನು ಸಮಾಜಕ್ಕೆ ಸಾರಿದ ಕಾಯಕಯೋಗಿ ಸಿದ್ದರಾಮರು. ಇವರು ಸಮಾಜೋದ್ಧಾರ ಮಂತ್ರವನ್ನು ಮೂಲವಾಗಿಸಿಕೊಂಡು ಶೋಷಣೆ, ಅಸಮಾನತೆ ತೊಲಗಿಸಿ ಸ್ತ್ರೀಯರಿಗೆ ಸಮಾನತೆ ದೊರಕಿಸಿಕೊಟ್ಟರು. ಬಸವಣ್ಣನವರೊಡನೆ ಬೆರತು, ಪ್ರಭುಗಳಿಂದ ಜ್ಞಾನಾಮೃತ ಅರಿತು ಬದುಕಿನ ದಾಸೋಹ ಪ್ರಜ್ಞೆಯಿಂದ ಶಿವಯೋಗದ ಆತ್ಮಸಾಕ್ಷಾತ್ಕಾರವನ್ನು ಪಡೆದುಕೊಂಡರು. ಪಂಡಿತ ಪಾಮರರಿಗೆ ಆಶ್ರಯ ನೀಡುವ ಮೂಲಕ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವಲ್ಲಿ ಸಫಲರಾದರು. ಶರಣ ತತ್ವ ನಿಷ್ಠೆ, ಪ್ರಗತಿಪರತೆ, ದೇಸೀ ಸಂಸ್ಕೃತಿಗಳಿಗೆ ಹೆಚ್ಚು ಹೊತ್ತುಕೊಟ್ಟು ಶ್ರಿಶೈಲದ ಮಲ್ಲಯ್ಯನಿಂದ ಶ್ರೀರಕ್ಷೆ ಪಡೆದು ನಾಡಿನುದ್ದಕ್ಕೂ ಸಂಚರಿಸಿ ಬೋದನೆ ಮಾಡುತ್ತಾ ಅರಿವಿನ ಜಾಗೃತಿ ಮೂಡಿಸಿದರು. ಇಂತಹ ಮಹಾಜ್ಞಾನಿಯ ಜಯಂತಿಯ ಸಂದರ್ಭದಲ್ಲಿ ಅವರ ಆದರ್ಶ, ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದರು.

Tap to resize

Latest Videos

undefined

ಶ್ರೀ ಸಿದ್ದರಾಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಶಾಸಕ ಕೆ. ಷಡಕ್ಷರಿ, ಸಿದ್ದರಾಮರು ಸಮಾಜದ ಅಭಿವೃದ್ಧಿಗಾಗಿ ನಾಡಿನೆಲ್ಲೆಡೆ ಸಂಚರಿಸಿದರು. ಅನುಭಾವದ ಪರಿಚಯವನ್ನು ಮಾಡಿಕೊಟ್ಟರು. ಮೌಢ್ಯಗಳನ್ನು ತೊಡೆದು ಹಾಕಲು ಅವರಿತ ಹೋರಾಡಿದರು. ತಮ್ಮ ಜ್ಞಾನದ ಬಲದಿಂದ ಸಮಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. ರೈತರಿಗೆ ಸಾಮಾನ್ಯ ಜನರಿಗೆ ಅನುಕೂಲವಾಗಿವಂತೆ ಕೆರೆ ಕಟ್ಟೆಗಳನ್ನು ನಿರ್ಮಿಸಿ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ತಹಸೀಲ್ದಾರ್ ಪವನ್‌ಕುಮಾರ್ ಮಾತನಾಡಿ, ಕರ್ಮಯೋಗಿ ಸಿದ್ದರಾಮರು ತಮ್ಮ ಅಪೂರ್ವ ಸಾಧನೆಗಳಿಂದ ಯುಗಪುರುಷರೆನಿಸಿಕೊಂಡಿದ್ದಾರೆ. ಕಾಯಕಕ್ಕೆ ಮಾತ್ರ ಮಹತ್ವ ಕೊಡದೆ ಮಾನವೀಯ ಮೌಲ್ಯಗಳಿಗೂ ಬೆಲೆ ಕೊಡುವ ನಿಟ್ಟಿನಲ್ಲಿ ಪ್ರೀತಿ, ಸ್ನೇಹ, ಸರಳತೆಯಿಂದ ಎಲ್ಲರೊಡನೆ ಬೆರೆತು ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸಿದರು. ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ನಾವು ಆಚರಿಸಿಕೊಂಡು ಬರುತ್ತಿದ್ದೇನೆ. ಅದರಂತೆ ಸಿದ್ದರಾಮರ ಜಯಂತಿ ಆಚರಿಸುವ ಮೂಲಕ ಸಮಾಜಕ್ಕೆ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ನಗರಸಭೆ ಸದಸ್ಯ ಹಾಗೂ ಭೋವಿ ಸಮಾಜದ ಅಧ್ಯಕ್ಷ ವಿ. ಯೋಗೇಶ್ ಮಾತನಾಡಿ, ಶ್ರೀ ಸಿದ್ದರಾಮರಾಮರು ದಾಸೋಹದ ಮೂಲಕ ಸಾಮಾಜಿಕ ಸಾಮರಸ್ಯ ಮೂಡಿಸಿ ಬಡವ ಬಲ್ಲಿದ ಮೇಲು-ಕೀಳು, ಜಾತಿ ಬೇದಗಳನ್ನು ಬಿಟ್ಟು, ಸಾಮಾಜಿಕ ಜೀವನದಲ್ಲಿ ಋಣಪರಿಹಾರವನ್ನು ಮಾಡಿದರೆ ಮುಕ್ತಿ ಪಡೆಯಬಹುದೆಂಬ ಸಂದೇಶ ಸಾರಿಸಿದರು. ತನ್ನಲ್ಲಿನ ಆತ್ಮಶಕ್ತಿಯಿಂದ ಸಂಘಟನೆ ಮಾಡಿ ಬಸವಣ್ಣನವರ ಮಹಾಮನೆಗೆ ಸೇರಿ ಕಲ್ಯಾಣದಲ್ಲಿ ಮುಖ್ಯಸ್ಥರಾಗಿ ಧಾರ್ಮಿಕ ಸಮಾಜೋನ್ನತಿಗೆ ಶ್ರಮಿಸುತ್ತಾ ಜ್ಞಾನದ ಜೊತೆಗೆ ಭಕ್ತಿಯ ಪ್ರಸಾರವನ್ನು ಮಾಡುತ್ತಾ ಪವಾಡ ಪುರುಷರೆನಿಸಿಕೊಂಡರು. ಇಂತಹ ವ್ಯಕ್ತಿಗಳ ಆದರ್ಶಗಳು ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಆದರ್ಶ ಸಮಾಜವನ್ನು ನಿರ್ಮಿಸಬೇಕೆಂದ ಅವರು ನಮ್ಮ ಸಮಾಜಕ್ಕೆ ಒಂದು ಸಮುದಾಯ ಭವನ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರುಗಳು, ತಾಲೂಕು ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು

click me!